ಭಾರತದ ಜನಪ್ರಿಯ ನಟ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್ ಆಫೀಸ್ನಲ್ಲಿ ಆ್ಯಕ್ಷನ್ ಕಾಮಿಡಿ ಸಿನಿಮಾ ಸಖತ್ ಸದ್ದು ಮಾಡಿದೆ. ಮೂರು ವಾರಗಳು ಪೂರ್ಣಗೊಳ್ಳುವ ಮುನ್ನವೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 600 ಕೋಟಿ ರೂ. ಗಡಿ ದಾಟಿದೆ. ಸಿನಿಮಾಗೆ ಎಲ್ಲೆಡೆಯಿಂದ ಜೈಕಾರ ಕೇಳಿ ಬರುತ್ತಿದ್ದು, ಇದೀಗ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ಐಪಿಎಲ್ ತಂಡ ಆರ್ಸಿಬಿ ಯ ಜೆರ್ಸಿಯನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಈ ದೃಶ್ಯವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಚಿತ್ರತಂಡಕ್ಕೆ ಆದೇಶಿಸಿದೆ.
-
The Delhi High Court has ordered Rajanikanth's Jailer movie team to remove the scene where the RCB jersey was shown. pic.twitter.com/u9S9k13uci
— Mufaddal Vohra (@mufaddal_vohra) August 28, 2023 " class="align-text-top noRightClick twitterSection" data="
">The Delhi High Court has ordered Rajanikanth's Jailer movie team to remove the scene where the RCB jersey was shown. pic.twitter.com/u9S9k13uci
— Mufaddal Vohra (@mufaddal_vohra) August 28, 2023The Delhi High Court has ordered Rajanikanth's Jailer movie team to remove the scene where the RCB jersey was shown. pic.twitter.com/u9S9k13uci
— Mufaddal Vohra (@mufaddal_vohra) August 28, 2023
ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಸಿನಿಪ್ರಿಯರ ಗಮನ ಸೆಳೆದಿರುವ ಜೈಲರ್ ಸಿನಿಮಾದಲ್ಲಿ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ತೋರಿಸಲಾಗಿದೆ. ಇದೀಗ ಈ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯಾಯಾಲಯದ ಈ ಆದೇಶ ಚಿತ್ರಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಈ ಸೀನ್ ಕತ್ತರಿಸಲು ಜೈಲರ್ ನಿರ್ಮಾಪಕರಿಗೆ ಸೆಪ್ಟೆಂಬರ್ 1ರ ವರೆಗೆ ಸಮಯ ನೀಡಲಾಗಿದೆ.
ಏನಿದು ಪ್ರಕರಣ: 600 ಕೋಟಿ ರೂ. ಗಡಿ ದಾಟಿರುವ ಜೈಲರ್ ಸಿನಿಮಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿಯನ್ನು ನಕಾರಾತ್ಮಕವಾಗಿ ತೋರಿಸಲಾಗಿದೆ ಎಂಬ ಗಂಭೀರ ಆರೋಪವಿದೆ. ಈ ಕುರಿತು ಆರ್ಸಿಬಿ ತಂಡದ ಮಾಲೀಕರು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಖಳನಾಯಕ ಆರ್ಸಿಬಿ ಜೆರ್ಸಿ ಧರಿಸಿದ್ದು, ಆರ್ಸಿಬಿಯ ಇಮೇಜ್ ಹಾಳಾಗುತ್ತಿದೆ. ಈ ಸೀನ್ ಮಾಡಲು ನಮ್ಮಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಬಿಡುಗಡೆ ಆದಾಗಿನಿಂದಲೂ ಸಿನಿಮಾ ಸಖತ್ ಸುದ್ದಿಯಲ್ಲಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರ ಹುಬ್ಬೇರಿಸಿದೆ. 20 ದಿನಗಳಾದರೂ ಸಿನಿಮಾ ಥಿಯೇಟರ್ಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ವಿಶ್ವಾದ್ಯಂತ 600 ಕೋಟಿ ರೂ. ಗಳಿಸಿದ್ದರೆ, ಭಾರತೀಯ ಬಾಕ್ಸ್ ಆಫಿಸ್ನಲ್ಲಿ 350 ಕೋಟಿ ರೂ. ದಾಟುವಲ್ಲಿ ಚಿತ್ರ ಯಶಸ್ವಿ ಆಗಿದೆ.
ಇದನ್ನೂ ಓದಿ: ಭಾರತದ ವೈಜ್ಞಾನಿಕ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಲು ಬಯಸುವೆ: ದಿ ವ್ಯಾಕ್ಸಿನ್ ವಾರ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಜೈಲರ್ ಯಶಸ್ಸಿನಲ್ಲಿರುವ ರಜನಿಕಾಂತ್ ತಮ್ಮ ಮುಂದಿನ ಪ್ರಾಜೆಕ್ಟ್ ವರ್ಕ್ ಶುರು ಮಾಡಿದ್ದಾರೆ. ತಲೈವರ್ 170 ಎಂಬ ತಾತ್ಕಾಲಿಕ ಶೀರ್ಷಿಕೆಯುಳ್ಳ ಸಿನಿಮಾವನ್ನು ಜೈ ಭೀಮ್ ಖ್ಯಾತಿಯ ಟಿ.ಜೆ ಜ್ಞಾನವೆಲ್ ನಿರ್ದೇಶಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿರುವ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ಮಂಜು ವಾರಿಯರ್, ಶರ್ವಾನಂದ್ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲಿದೆ ಬಹುನಿರೀಕ್ಷಿತ 'ಜವಾನ್' ಟ್ರೇಲರ್: ಎಲ್ಲಿ? ಯಾವಾಗ?