ETV Bharat / entertainment

ಸೋರಿಕೆಯಾದ 'ಜವಾನ್' ಚಿತ್ರದ ವಿಡಿಯೋ ಕ್ಲಿಪ್‌ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮಗಳಿಗೆ ಕೋರ್ಟ್​ ಸೂಚನೆ - delhi hc orders social media platforms

ಅಟ್ಲಿ ನಿರ್ದೇಶನದಲ್ಲಿ ಹಾಗೂ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಸೋರಿಕೆಯಾದ ವಿಡಿಯೋ ಕ್ಲಿಪ್‌ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮಗಳಿಗೆ ದೆಹಲಿ ಹೈಕೋರ್ಟ್​ ಸೂಚನೆ ನೀಡಿದೆ.

Jawan
ಜವಾನ್
author img

By

Published : Apr 26, 2023, 9:48 AM IST

ನವದೆಹಲಿ : ಬಾಲಿವುಡ್​ ನಟ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ತುಣುಕುಗಳು ಸೋರಿಕೆಯಾದ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಸಾಮಾಜಿಕ ಮಾಧ್ಯಮಗಳು, ಕೆಲ ವೆಬ್‌ಸೈಟ್‌ಗಳು ಮತ್ತು ಕೇಬಲ್ ಟಿವಿ ಔಟ್‌ಲೆಟ್‌ಗಳಿಗೆ ವೈರಲ್​ ಆದ ವಿಡಿಯೋ ಕ್ಲಿಪ್‌ಗಳನ್ನು ಕೂಡಲೇ ತೆಗೆದುಹಾಕುವಂತೆ ಮತ್ತು ಅವುಗಳ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ.

ನಿರ್ಮಾಣ ಹಂತದಲ್ಲಿರುವ ಜವಾನ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತವನ್ನು ತಲುಪಿದೆ. ಈ 'ಜವಾನ್' ಚಿತ್ರದ ಹೊಡೆದಾಟದ ದೃಶ್ಯ ಮತ್ತು ನೃತ್ಯವೊಂದರ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿತ್ತು. ಈ ಕುರಿತು ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಒಡೆತನದ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿಶಂಕರ್ ನೇತೃತ್ವದ ದೆಹಲಿ ಹೈಕೋರ್ಟ್ ಪೀಠವು ಮಂಗಳವಾರ ಯೂಟ್ಯೂಬ್, ಗೂಗಲ್, ಟ್ವಿಟರ್ ಮತ್ತು ಕೆಲ ವೆಬ್​ಸೈಟ್‌ಗಳಿಗೆ ಕೂಡಲೇ ಪ್ರಸಾರವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ಜೊತೆಗೆ, ಸೋರಿಕೆಯಾದ ವಿಡಿಯೋ ಕ್ಲಿಪ್‌ಗಳ ಪ್ರಕಟಣೆ ಮತ್ತು ಅನಧಿಕೃತ ಪ್ರಸರಣವು ಪ್ರಚಾರ ಮತ್ತು ಶೋಷಣೆಯ ಹಕ್ಕುಗಳಿಗೆ ಧಕ್ಕೆ ತರುತ್ತದೆ. ಇದು ಹಕ್ಕುಸ್ವಾಮ್ಯ / ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯಾಗಿದೆ. ಪರಿಣಾಮ ಅರ್ಜಿದಾರರಿಗೆ ಹಾನಿ ಮತ್ತು ನಷ್ಟವನ್ನು ಉಂಟುಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ : 'ಜವಾನ್'​ ಸೆಟ್​ನಿಂದ ಶಾರುಖ್, ದೀಪಿಕಾ ಫೋಟೋ ಸೋರಿಕೆ

ವೈರಲ್​ ವಿಡಿಯೋದಲ್ಲೇನಿತ್ತು? : ​ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ನಟ ಶಾರುಖ್ ಖಾನ್ ಆ್ಯಕ್ಷನ್ ಮಾಡುತ್ತಿರುವಂತೆ ಕಾಣುತ್ತಿತ್ತು. ಇದು ಫೈಟಿಂಗ್​ ದೃಶ್ಯ ಎನ್ನಲಾಗಿತ್ತು. ಇನ್ನೊಂದು ವಿಡಿಯೋದಲ್ಲಿ ಶಾರುಖ್​ ಮತ್ತು ಬಟಿ ದೀಪಿಕಾ ಪಡುಕೋಣೆ ನಗು ನಗುತ್ತಾ ಹೆಜ್ಜೆ ಹಾಕುತ್ತಿದ್ದಾರೆ. ವೈಟ್​ ಅಂಡ್​​ ಬ್ಲ್ಯಾಕ್​ ಡ್ರೆಸ್ ಧರಿಸಿದ್ದಾರೆ. ಕಾಲಿವುಡ್‌ ಸ್ಟಾರ್‌ ಡೈರೆಕ್ಟರ್‌ ಅಟ್ಲೀ ಕುಮಾರ್​ ನಿರ್ದೇಶನದ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್​​ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ನಟಿಸಿದ್ದು, ನಯನತಾರಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.ಯೋಗಿ ಬಾಬು ಮತ್ತು ಪ್ರಿಯಾಮಣಿ ಕೂಡ ಈ ಸಿನಿಮಾದಲ್ಲಿದ್ದಾರೆ.

ಇದನ್ನೂ ಓದಿ : ಶಾರುಖ್​ ಖಾನ್​ ಜೊತೆ ನಟಿಸಲು ರಾಜಸ್ಥಾನಕ್ಕೆ ಹಾರಲಿದ್ದಾರೆ ಸೌತ್​ ಬ್ಯೂಟಿ ನಯನತಾರಾ

ವರದಿಗಳ ಪ್ರಕಾರ, ಜವಾನ್ ಚಿತ್ರೀಕರಣ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಜೂನ್‌ನಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. 2021ರ ಸೆಪ್ಟೆಂಬರ್​ನಲ್ಲಿ ಸಿನಿಮಾ ಆರಂಭಗೊಂಡಿದ್ದು, ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ಹಂತ ಪ್ರವೇಶಿಸಲಿದೆ. ಟೀಸರ್ ಅನ್ನು ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರ ತಯಾರಕರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದಾಗ್ಯೂ, ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಕಿಂಗ್​​ ಖಾನ್​​ 'ಜವಾನ್​' ಸಿನಿಮಾದಲ್ಲಿ ಅಲ್ಲು ಅರ್ಜುನ್​; ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.