ಮುಂಬೈ: ತಮ್ಮ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದು, ಇಬ್ಬರೂ ಒಟ್ಟಿಗೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ತಿಳಿಸಿದ್ದಾರೆ. 'ಸರ್ಕಸ್' ಚಿತ್ರದ 'ಕರೆಂಟ್ ಲಗ್ರೆ' ಹಾಡಿನ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಿಷಯ ಬಹಿರಂಗಪಡಿಸಿದರು.
ಜನರು, ಮತ್ತೊಂದು 'ಸಿಂಗಂ'ನ ಮತ್ತೊಂದು ಪಾರ್ಟ್ ಯಾವಾಗ ಬರುತ್ತದೆ ಎಂದು ಕೇಳುತ್ತಾರೆ. ಈ ವೇದಿಕೆಯ ಮೂಲಕ ನಾನು ಅದನ್ನು ಬಹಿರಂಗಪಡಿಸುತ್ತಿದ್ದು, ನಾನು, ದೀಪಿಕಾ ಮುಂದಿನ ವರ್ಷದಿಂದ ಒಟ್ಟಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಈ ಹಿಂದೆ ಕೂಡ ರೋಹಿತ್ ಮತ್ತು ದೀಪಿಕಾ 'ಚೆನ್ನೈ ಎಕ್ಸ್ಪ್ರೆಸ್' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಆ ವಿಡಿಯೋ ಶೇರ್ ಮಾಡದಂತೆ ಕತ್ರಿನಾ ಮನವಿ.. ಪತ್ನಿ ಮಾತು ಮೀರಿ ದೃಶ್ಯ ಹಂಚಿಕೊಂಡ ವಿಕ್ಕಿ!