ETV Bharat / entertainment

ತೆರೆ ಹಂಚಿಕೊಂಡ ದೀಪಿಕಾ, ರಣ್​​​ವೀರ್, ರಾಮ್​ಚರಣ್​​, ತ್ರಿಶಾ - ಯಾವುದು ಈ ಸಿನಿಮಾ? - ರಾಮ್ ಚರಣ್

ದೀಪಿಕಾ ಪಡುಕೋಣೆ, ರಣ್​​​ವೀರ್ ಸಿಂಗ್, ರಾಮ್ ಚರಣ್, ತ್ರಿಶಾ ಅವರನ್ನೊಳಗೊಂಡ ಟೀಸರ್​ ಅನಾವರಣಗೊಂಡಿದೆ. ಇದು ಸಿನಿಮಾನೋ, ಸರಣಿಯೋ ಅಥವಾ ಜಾಹೀರಾತುವಿನದ್ದೋ ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.

DeepVeer, Ram Charan, and Trisha movie
ದೀಪಿಕಾ, ರಣ್​​​ವೀರ್, ರಾಮ್​ಚರಣ್​​, ತ್ರಿಶಾ ಸಿನಿಮಾ
author img

By

Published : Jul 2, 2023, 5:30 PM IST

ಬಾಲಿವುಡ್‌ನ ಪವರ್​ಫುಲ್​​ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್​​​ವೀರ್ ಸಿಂಗ್ ಒಟ್ಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಟ ರಣ್​​​ವೀರ್ ಸಿಂಗ್ ತಮ್ಮ ಅಧಿಕೃತ ಇನ್​ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಸಿನಿಮಾ ಅಥವಾ ಸೀರಿಸ್​ನ ಟೀಸರ್​ನಂತಿರುವ ಈ ವಿಡಿಯೋದಲ್ಲಿ ಪತ್ನಿ ದೀಪಿಕಾ ಪಡುಕೋಣೆ ಅಲ್ಲದೇ ಸೌತ್​ ಸಿನಿಮಾ ರಂಗದ ಪ್ರತಿಭಾನ್ವಿತ ನಟರು ಕೂಡ ಕಾಣಿಸಿಕೊಂಡಿದ್ದಾರೆ.

ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಮತ್ತು ಪೊನ್ನಿಯಿನ್ ಸೆಲ್ವನ್ ನಟಿ ತ್ರಿಶಾ ಕೂಡ ಬಹಿರಂಗಪಡಿಸದ ಪ್ರಾಜೆಕ್ಟ್​ನ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಣ್​​ವೀರ್ ಅವರು ದೀಪಿಕಾ, ರಾಮ್ ಚರಣ್ ಮತ್ತು ತ್ರಿಶಾ ಅವರನ್ನೊಳಗೊಂಡ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ಭಾನುವಾರ ಗಲ್ಲಿಭಾಯ್ ನಟ ರಣ್​​ವೀರ್ ಸಿಂಗ್​​ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ತಮ್ಮ ಪತಿ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೀಪಿಕಾ ದೂರು ನೀಡುವ ದೃಶ್ಯದಿಂದ ಆರಂಭವಾಗುವ ಈ ಕುತೂಹಲಕಾರಿ ವಿಡಿಯೋದ ಮುಂದಿನ ಶಾಟ್‌ನಲ್ಲಿ ರಣ್​​ವೀರ್ "ಗುರಿ"ಯನ್ನು ಬೆನ್ನಟ್ಟುತ್ತಾರೆ. ರಾಮ್ ಚರಣ್ ಚೇಸಿಂಗ್​​ ಸೀನ್​ನಲ್ಲಿದ್ದು, ಕೊನೆಯಲ್ಲಿ ತ್ರಿಶಾ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ವಿಡಿಯೋದಲ್ಲಿ ಬರುವ ಲಿಖಿತ ಸಾಲುಗಳು ನೋಡುಗರ ಕುತೂಹಲ ಹೆಚ್ಚಿಸಿದೆ. ಕೆಲ ರಹಸ್ಯಗಳು ರಹಸ್ಯಗಳಾಗಿಯೇ ಉಳಿಯಬೇಕು, ಕೆಲ ಪ್ರಶ್ನೆಗಳಿಗೆ ಉತ್ತರ ಸಿಗದಿರುವುದೇ ಉತ್ತಮ, ಕೆಲವು ರಹಸ್ಯಗಳನ್ನು ಬಿಡಿಸದೇ ಇರುವುದು ಉತ್ತಮ ಎಂಬ ಬರಹ ವಿಡಿಯೋದ ನಡುವೆ ಬಂದಿದೆ. ವಿಡಿಯೋ ಶೇರ್ ಮಾಡಿ, ಶೀಘ್ರದಲ್ಲೇ ಹೊರಬರಲಿದೆ ಮತ್ತು "ರಹಸ್ಯ" ಬಹಿರಂಗಗೊಳ್ಳುತ್ತದೆ ಎಂದು ರಣ್​​ವೀರ್ ತಮ್ಮ ಶೀರ್ಷಿಕೆಯಲ್ಲಿ ಉಲ್ಲೇಖಿಸಿರುವುದರಿಂದ ಅಭಿಮಾನಿಗಳು ಈ ಕುರಿತ ಡೀಟೆಲ್ಸ್​ಗೆ ಹೆಚ್ಚು ಕಾಯಬೇಕಾಗಿಲ್ಲ.

ಇದನ್ನೂ ಓದಿ: Actor Ganesh: 'ಕೃಷ್ಣಂ ಪ್ರಣಯ ಸಖಿ' ಬೆನ್ನಲ್ಲೇ 42ನೇ ಸಿನಿಮಾ ಘೋಷಿಸಿದ ಗೋಲ್ಡನ್​ ಸ್ಟಾರ್ ಗಣೇಶ್

ಈ ವಿಡಿಯೋ ಬಹು ತಾರೆಯರನ್ನು ಒಳಗೊಂಡಿರುವ ಜಾಹೀರಾತಿನ ಟೀಸರ್‌ನಂತೆ ತೋರುತ್ತಿದೆ. ದೀಪ್‌ವೀರ್ (ಅಭಿಮಾನಿಗಳು ದೀಪಿಕಾ ಮತ್ತು ರಣ್​ವೀರ್ ದಂಪತಿಯನ್ನು ಪ್ರೀತಿಯಿಂದ ಕರೆಯುವ ಹೆಸರು), ರಾಮ್ ಚರಣ್ ಮತ್ತು ತ್ರಿಶಾ ಅವರಂತಹ ಪ್ರತಿಭಾನ್ವಿತ, ಪ್ರಭಾವಶಾಲಿ ಕಾಸ್ಟಿಂಗ್ ಇರುವ ಈ ವಿಡಿಯೋ ಜಾಹೀತಾತಿಗೆ ಸಂಬಂಧಿಸಿದ್ದೋ ಅಥವಾ ಸಿನಿಮಾ, ಸೀರಿಸ್​ಗೆ ಸಂಬಂಧಿಸಿದ್ದೋ ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ. ಯಾವುದೇ ಇರಲಿ ಈ ತಾರೆಯರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಉತ್ಸುಕರಾಗಿರೋದಂತೂ ಸತ್ಯ.

ಇದನ್ನೂ ಓದಿ: Disha Patani: ಸ್ಟೈಲಿಶ್ ಸೀರೆಯುಟ್ಟು ಮೋಡಿ ಮಾಡಿದ ಬಳುಕುವ ಬಳ್ಳಿ ದಿಶಾ ಪಟಾನಿ

ಈ ನಾಲ್ವರು ಕೂಡ ಕೊನೆಯದಾಗಿ ಹಿಟ್​ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ಬಹುನಿರೀಕ್ಷಿತ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಪೊನ್ನಿಯಿನ್ ಸೆಲ್ವನ್ 2 ಯಶಸ್ಸಿನಲ್ಲಿ ನಟಿ ತ್ರಿಶಾ ಇದ್ದು, ಮುಂದಿನ ಚಿತ್ರಗಳತ್ತ ಗಮನ ಹರಿಸಿದ್ದಾರೆ. ರಣ್​​ವೀರ್ ಸಿಂಗ್​​ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಈ ತಿಂಗಳ ಕೊನೆಗೆ ತೆರೆಕಾಣಲಿದೆ. ಆಲಿಯಾ ಭಟ್​​ ಜೊತೆ ತೆರೆ ಹಂಚಿಕೊಂಡಿದ್ದು, 2023ರ ಬಹುನಿರೀಕ್ಷಿತ ಸಿನಿಮಾ. ಆರ್​ಆರ್​ಆರ್​ ಯಶಸ್ಸಿನಲ್ಲಿರುವ ರಾಮ್​ ಚರಣ್​ ಗೇಮ್​ ಚೇಂಜರ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರೆ. ಬಹುತಾರಾಗಣವುಳ್ಳ ಪ್ರಾಜೆಕ್ಟ್​ ಕೆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.