ETV Bharat / entertainment

ಹೊಸ ಹೇರ್​ಸ್ಟೈಲ್​ನಲ್ಲಿ 'ಪಠಾಣ್​' ಬೆಡಗಿ: ದೀಪಿಕಾ ಮುಂದಿನ ಸಿನಿಮಾ ಯಾವುದು? - ಛತ್ರಪತಿ ಶಿವಾಜಿ ಮಹಾರಾಜ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಪಠಾಣ್​ ಚಿತ್ರದಲ್ಲಿ ಶಾರ್ಟ್​ ಹೇರ್​ನಿಂದ ಗಮನ ಸೆಳೆದಿದ್ದ ದೀಪಿಕಾ ಪಡುಕೋಣೆ ಹೊಸ ಕೇಶ ವಿನ್ಯಾಸದ ಮೂಲಕ ಮುಂದಿನ ಚಿತ್ರದ ಸುಳಿವು ನೀಡಿದ್ದಾರೆ.

ಏರ್​ಪೋರ್ಟ್​ನಲ್ಲಿ ಹೊಸ ಹೇರ್​ಸ್ಟೈಲ್​ನಲ್ಲಿ ಮಿಂಚಿದ ಪಠಾಣ್​ ಬೆಡಗಿ

author img

By

Published : Feb 20, 2023, 3:51 PM IST

ಮುಂಬೈ: 'ಪಠಾಣ್'​ ಯಶಸ್ಸಿನಿಂದ ಮಿಂದೆದ್ದಿರುವ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಇದೀಗ ಹೊಸ ಲುಕ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಟಿ ಹೊಸ ಹೇರ್​ ಸ್ಟೇಲ್​ನಲ್ಲಿ ಕಂಡುಬಂದರು. ನಟಿಯ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದು, ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ.

ಕಿತ್ತಾಳೆ ಬಣ್ಣದ ಜಾಕೆಟ್​​ನಲ್ಲಿ ಮಿಂಚಿರುವ ದೀಪಿಕಾ ನಗುವಿನ ಆಭರಣ ತೊಟ್ಟು ಫೋಟೋಗ್ರಾಫರ್‌ಗಳಿಗೆ ಪೋಸ್ ಕೊಟ್ಟರು. ಹಸಿರು ಬಣ್ಣದ ಟೀ ಶರ್ಟ್​​, ಸನ್​ಗ್ಲಾಸ್​ ತೊಟ್ಟ ಚೆಲುವೆ ಹೊಸ ಚಿತ್ರಕ್ಕಾಗಿ ಹೇರ್​ ಎಕ್ಸ್​​ಟೆನ್ಶನ್​ (ಕೂದಲು ಉದ್ದ) ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದಿನ ತಮ್ಮ ಎರಡು ಚಿತ್ರಗಳಾದ ಗೆಹರಿಯಾನ್​ ಮತ್ತು ಪಠಾಣ್​ ಚಿತ್ರದಲ್ಲಿ ಕಡಿಮೆ ಕೂದಲು ಅಂದರೆ ಶಾರ್ಟ್​ ಹೇರ್​ನಲ್ಲಿ ಮಿಂಚಿದ್ದರು.

ಸಾಲು ಸಾಲು ಚಿತ್ರ: 'ಪಠಾಣ್'​ ಸಿನಿಮಾದಲ್ಲಿ ಆ್ಯಕ್ಷನ್​ ಪಾತ್ರಗಳಲ್ಲಿ ನಟಿಸಿರುವ ದೀಪಿಕಾ, ಬಾಲಿವುಡ್​ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆಯ ಚಿತ್ರದಲ್ಲಿ ನಟಿಸಿದ ಖ್ಯಾತಿ ಹೊಂದಿದ್ದಾರೆ. ಈ ಖುಷಿಯ ನಡುವೆ ಇದೀಗ 'ಫೈಟರ್'​ ಚಿತ್ರದ ಶೂಟಿಂಗ್‌ಗೆ ಮರಳಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಹೃತಿಕ್​ ರೋಷನ್​ ಅವರೊಂದಿಗೆ ಹೊಸ​ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅನಿಲ್​ ಕಪೂರ್​, ಕರಣ್​​ ಸಿಂಗ್​ ಗ್ರೋವರ್​ ಮತ್ತು ಅಕ್ಷಯ್​ ಒಬೆರಾಯ್​ ಪ್ರಮುಖ ಪಾತ್ರದಲ್ಲಿದ್ದು, ಮುಂದಿನ ವರ್ಷದ ಜನವರಿಗೆ ತೆರೆ ಕಾಣಲಿದೆ.

ಫೈಟರ್​ ಹೊರತಾಗಿ ದೀಪಿಕಾ 'ಪ್ರಾಜೆಕ್ಟ್​ ಕೆ'ಯಲ್ಲಿ ನಟಿಸುತ್ತಿದ್ದು, ಪ್ರಭಾಸ್​ ಮತ್ತು ಅಮಿತಾಬ್​ ಬಚ್ಚನ್​ಗೆ ಜೊತೆಯಾಗುವರು. ಇತ್ತಿಚೆಗೆ ಬಹುತಾರಾಂಗಣದ ಚಿತ್ರದ ಪೋಸ್ಟರ್​ ಅನ್ನು ದೀಪಿಕಾ ಹಂಚಿಕೊಂಡಿದ್ದರು. ಇದಾದ ಬಳಿಕ ಮತ್ತೆ ಶಾರುಖ್​ ಖಾನ್​ ಅವರ ಮುಂದಿನ ಚಿತ್ರ ಜವಾನ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮಹಾ ಶಿವರಾತ್ರಿಯಂದು ಚಿತ್ರದ ಪೋಸ್ಟರ್​ ಶೇರ್ ಮಾಡಿರುವ ಸಿನಿಮಾ ತಂಡ ಸಂತಸದ ಸುದ್ದಿಯನ್ನು ಬಹಿರಂಗ ಮಾಡಿತ್ತು.

ಪಠಾಣ್​ ವಿಶೇಷ ಚಿತ್ರ: 'ಪಠಾಣ್'​​ ಕುರಿತು ಮಾತನಾಡಿರುವ ನಟಿ, "ಈ ಸಿನಿಮಾ ನನ್ನ ಸಿನಿಮಾ ಜೀವನದಲ್ಲಿ ವಿಶೇಷವಾಗಿರಲಿದೆ" ಎಂದರು. ಶಾರುಖ್​ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿರುವ ನಾಲ್ಕನೇ ಚಿತ್ರ ಇದಾಗಿದೆ.

ಇದನ್ನೂ ಓದಿ: ಬಾಲಿವುಡ್​ದಲ್ಲಿ ಬಾಹುಬಲಿ 2 ದಾಖಲೆ ಮುರಿದು ಮುನ್ನುಗ್ಗಿದ ಪಠಾಣ್​..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.