ETV Bharat / entertainment

ಆಸ್ಕರ್​ ಅಂಗಳದಲ್ಲಿ ದೀಪಿಕಾ! ನಿರೂಪಕರಾಗಿ ಮಿಂಚು ಹರಿಸಲಿರುವ ಪಠಾಣ್​ ಬೆಡಗಿ - ಬೆಂಗಳೂರಿನ ಬೆಡಗಿ ಕೂಡ ಮಿಂಚು ಹರಿಸಲಿದ್ದಾರೆ

ಬಾಲಿವುಡ್​ ಬೆಡಗಿ ದೀಪಿಕಾ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ.

deepika-padukone-at-the-oscars-shine-as-a-presenter

author img

By

Published : Mar 3, 2023, 2:15 PM IST

ಈಗಾಗಲೇ ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'​ ಚಿತ್ರದ ನಾಟು ನಾಟು ಹಾಡು ಆಸ್ಕರ್ ಅಂಗಳ ತಲುಪಿದ್ದು, ಭಾರತೀಯರ ಹರ್ಷ ಮುಗಿಲುಮುಟ್ಟಿದೆ. ಈ ಸಂಭ್ರಮವನ್ನು ಇದೀಗ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ದುಪ್ಪಟ್ಟು ಮಾಡಿದ್ದಾರೆ. ಈ ಬಾರಿ ಸಿನಿಮಾ ರಂಗದ ಪ್ರತಿಷ್ಟಿತ ಅವಾರ್ಡ್​ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೆಡಗಿ ಕೂಡಾ ಮಿಂಚು ಹರಿಸಲಿದ್ದಾರೆ.!

ಇತ್ತೀಚೆಗಷ್ಟೇ ಬಿಡುಗಡೆಯಾದ ಪಠಾಣ್​ ಯಶಸ್ಸಿನಲ್ಲಿರುವ ದೀಪಿಕಾ ಇದೀಗ 95ನೇ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಸೆಲೆಬ್ರಿಟಿಗಳ ನಿರೂಪಣೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಆಸ್ಕರ್​ ಅಂಗಳದಲ್ಲಿ ನಿರೂಪಣೆ ಮಾಡುವವರ ಪಟ್ಟಿಯನ್ನು ನಟಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹಾಲಿವುಡ್​ ನಟ-ನಟಿಯರ ಜೊತೆ ನಟಿ ದೀಪಿಕಾ ಹೆಸರು ಕೂಡ ಪ್ರಕಟವಾಗಿದೆ. ಅಮೆರಿಕ ಕಾಲಮಾನದ ಅನುಸಾರ ಮಾರ್ಚ್​ 12 ರಂದು ಲಾಸ್​ ಏಂಜಲೀಸ್‌​ನ ಡಾಲ್ಬಿ ಥಿಯೇಟರ್​ನಲ್ಲಿ ದೀಪಿಕಾ ಇದೇ ಮೊದಲ ಬಾರಿಗೆ ಆಸ್ಕರ್​ ಅಂಗಳದಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಕೇವಲ ಹಾಲಿವುಡ್​ ಹಾಗು ವಿಶ್ವದ ಪ್ರಮುಖ ಸಿನಿಮಾ ನಟರಿಗೆ ಸೀಮಿತವಾಗಿರುವ ವೇದಿಕೆಯಲ್ಲಿ ದೀಪಿಕಾ ಸ್ಥಾನ ಪಡೆದಿದ್ದಾರೆ.

ದೀಪಿಕಾ ಪಡುಕೋಣೆ ಈ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಮತ್ತು ಅವರ ಸಹ ನಟ-ನಟಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಿವುಡ್​ ನಟಿ ನೇಹಾ ದೂಪಿಯಾ ಪ್ರತಿಕ್ರಿಯಿಸಿ, ದೀಪಿಕಾ ಅವರನ್ನು ನೋಡಲು ಕಾತುರರಾಗಿರುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಪಠಾಣ್​ ಬೆಡಗಿ ಆಸ್ಕರ್​ನಲ್ಲಿ! ನಮ್ಮ ದೀಪಿಕಾ ಸಮಯವಿದು ಎಂದಿದ್ದಾರೆ. ಕತಾರ್‌ನಲ್ಲಿ ಫಿಫಾ ವಿಶ್ವಕಪ್​ನಲ್ಲೂ ಕೂಡ ದೀಪಿಕಾ ಟ್ರೋಫಿಯನ್ನು ಅನಾವರಣಗೊಳಿಸಿದ್ದರು. ಕಳೆದ ವರ್ಷ ಕೇನ್ಸ್‌ನಲ್ಲಿ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿದ್ದರು. ಇದೀಗ ಆಸ್ಕರ್​ನಲ್ಲೂ ತಮ್ಮ ಮಿಂಚು ಹರಿಸಲಿದ್ದಾರೆ.

ನಾಟು ನಾಟು ಪ್ರದರ್ಶನ: ವಿಶ್ವದ ಎಲ್ಲಾ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಕ್ಷೇತ್ರದ ಅತಿ ದೊಡ್ಡ ವೇದಿಕೆಯಾಗಿರುವ ಆಸ್ಕರ್​ನಲ್ಲಿ ಈ ಬಾರಿ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಲೈವ್​ ಪ್ರದರ್ಶನಗೊಳ್ಳುತ್ತಿದೆ. ಈ ಹಾಡಿನ ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್ ಆಸ್ಕರ್ ವೇದಿಕೆ ಮೇಲೆ ಪ್ರದರ್ಶನ ತೋರುವ ಮೂಲಕ ಜಗತ್ತಿನ ಕಣ್ಸೆಳೆಯಲಿದ್ದಾರೆ.

ನಾಟು ನಾಟುಗೆ ಒಲಿದ ಪ್ರಶಸ್ತಿ: ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ 'ಗೋಲ್ಡನ್​ ಗ್ಲೋಬ್ಸ್​ ಪ್ರಶಸ್ತಿ'ಪಡೆದಿದೆ. ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ನಲ್ಲಿಯೂ ಎರಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್​ಆರ್​ಆರ್​ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ', 'ಅತ್ಯುತ್ತಮ ಆಕ್ಷನ್​ ಚಿತ್ರ, 'ಅತ್ಯುತ್ತಮ ಹಾಡು', 'ಅತ್ಯುತ್ತಮ ಸ್ಟಂಟ್'​ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಒಟ್ಟಿನಲ್ಲಿ ಭಾರತೀಯ ಚಿತ್ರವೊಂದು ಆಸ್ಕರ್‌ ರೇಸ್‌ನಲ್ಲಿರುವುದು ಒಂದು ಖುಷಿಯ ಸುದ್ದಿಯಾದರೆ, ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೆ ಕೋಟಿಗಟ್ಟಲೆ ಭಾರತೀಯರ ಕಣ್ಣುಗಳು ನೆಟ್ಟಿವೆ.

ಇದನ್ನೂ ಓದಿ: ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಂಗಲೆಗೆ ನುಗ್ಗಿದ ಇಬ್ಬರು ಪೊಲೀಸ್​ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.