ತಾವು ಸಾಕಿದ ಪ್ರೀತಿಯ ಬೆಕ್ಕು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಶ್ಯಾಡೋ ಎಂಬ ಹೆಸರಿನ ಕಪ್ಪು ಬೆಕ್ಕು ಇದಾಗಿದ್ದು, ಬೆಕ್ಕಿನ ಮಾಹಿತಿ ಹಂಚಿಕೊಳ್ಳುವ ಮೂಲಕ ಹುಡುಕಿಕೊಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ದೀಪಿಕಾ ದಾಸ್ ಪೋಸ್ಟ್ ಹೀಗಿದೆ..: ಕಾಣೆಯಾಗಿದೆ ಎಂಬ ಶೀರ್ಷಿಕೆಯುಳ್ಳ ಈ ಪೋಸ್ಟ್ನಲ್ಲಿ, 18 - 02 - 2023ನೇ ಶನಿವಾರ ರಾತ್ರಿಯಿಂದ, ವಿಶ್ವೇಶ್ವರ ಲೇಔಟ್, 3ನೇ ಬ್ಲಾಕ್, ಉಲ್ಲಾಳು, ಬೆಂಗಳೂರು - 560056, ಬೆಕ್ಕು ಕಾಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಬೆಕ್ಕಿನ ಹೆಸರು - ಶ್ಯಾಡೋ, ಬಣ್ಣ - ಕಪ್ಪು ಬೆಕ್ಕು (ಕತ್ತಿನ ಸುತ್ತ ಕಂದುಬಣ್ಣವಿರುತ್ತದೆ), ಬೀಡ್ - ಪರ್ಷಿಯನ್ (ಗಂಡು ಬೆಕ್ಕು, 9 ತಿಂಗಳು) ಎಂದು ಬೆಕ್ಕಿನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
15,000 ರೂ. ಬಹುಮಾನ: ಬೆಕ್ಕು ಹುಡುಕಿಕೊಟ್ಟವರಿಗೆ ಹತ್ತು ಸಾವಿರದಿಂದ 15 ಸಾವಿರ ರೂಪಾಯಿ ಬಹುಮಾನ ಕೊಡಲಾಗುವುದು. ಮೊಬೈಲ್ ನಂಬರ್ - 7019191110, 7338505489, 9535598198. ದಯವಿಟ್ಟು ಈ ಬೆಕ್ಕು ಯಾರಿಗಾದರೂ ಕಾಣಿಸಿದರೆ ಈ ಮೇಲಿನ ಮೊಬೈಲ್ ನಂಬರ್ಗೆ ಸಂಪರ್ಕಿಸಬೇಕಾಗಿ ವಿನಂತಿ ಎಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ದೀಪಿಕಾ ದಾಸ್ ಎಂದ ಕೂಡಲೇ ಮೊದಲು ನೆನಪಿಗೆ ಬರೋದು ನಾಗಿಣಿ ಸೀರಿಯಲ್ ಮತ್ತು ಬಿಗ್ ಬಾಸ್. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರ ಅಮೃತಾಳಾಗಿ ರಾಜ್ಯಾದ್ಯಂತ ಮನೆ ಮಾತಾಗಿದ್ದರು. ಅಭಿನಯ ಚಕ್ರವರ್ತಿ ಸುದೀಪ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಸಾಕಷ್ಟು ಹೆಸರು ಮಾಡಿದ್ದರು. ಬಿಗ್ ಬಾಸ್ ಶೋನ ಮತ್ತೊಂದು ಸೀಸನ್ನಲ್ಲೂ ಭಾಗಿಯಾಗಿ ಪ್ರತಿಸ್ಪರ್ಧಿಗಳಿಗೆ ಕಠಿಣ ಸರ್ಧೆ ನೀಡಿದ್ದರು. ಹೊಸ ಸ್ಪರ್ಧಿ ಮತ್ತು ಹಳೇ ಸ್ಪರ್ಧಿಗಳನ್ನು ಒಟ್ಟುಗೂಡಿಸಿ ಕಳೆದ ಕೊನೆ ಶೋ ನಡೆಸಲಾಗಿತ್ತು. ಆ ಶೋನಲ್ಲೂ ದೀಪಿಕಾ ದಾಸ್ ಮಿಂಚಿದ್ದರು. ಇನ್ನೂ ದೀಪಿಕಾ ದಾಸ್ ಕೇವಲ ನಟಿ ಮಾತ್ರವಲ್ಲ, ಉದ್ಯಮಿ ಕೂಡ ಹೌದು.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರಯೋಗ: ಶೀಘ್ರದಲ್ಲೇ ಜೂಲಿಯೆಟ್ 2 ತೆರೆಗೆ, ಪಾರ್ಟ್ 1 ಶೂಟಿಂಗ್ ಚುರುಕು!
ತಮ್ಮ ಫ್ಯಾಷನ್ನಿಂದ ಪ್ರೇಕ್ಷಕರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ತಮ್ಮದೇ ಆದ ಕ್ಲಾಥಿಂಗ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಸಹ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಇವರು ಆಗಾಗ್ಗೆ ತಮ್ಮ ಚೆಂದದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾ ಬಿಸಿ ಏರಿಸುತ್ತಾರೆ. ಅವರ ಪ್ರತೀ ಫೋಟೋಗಳು ಸಾಜಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಮೆಚ್ಚುಗೆ ಗಳಿಸುತ್ತದೆ.
ಇದನ್ನೂ ಓದಿ: ಆದಿಲ್‌ಗೆ 5 ದಿನ ಪೊಲೀಸ್ ಕಸ್ಟಡಿ: ಪತ್ನಿ ರಾಖಿಯಿಂದ ಆರೋಪಗಳ ಸುರಿಮಳೆ, ಕಣ್ಣೀರು
ಇದೀಗ ತಮ್ಮ ಕಾಣೆಯಾದ ಬೆಕ್ಕನ್ನು ಹುಡುಕಿಕೊಡುವಂತೆ ನೆಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ. ಬೆಕ್ಕು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ತಿಳಿಸಿದ್ದಾರೆ. ನಿಮಗೇನಾದರು ಈ ಬೆಕ್ಕು ಕಂಡರೆ ಮೇಲಿನ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಿ.