ETV Bharat / entertainment

ದೀಪಾವಳಿ ಸಂಭ್ರಮ: ಮಾಲಾಶ್ರೀ ಜೊತೆ ಮಗಳು ಆರಾಧನಾ ಫೋಟೋಶೂಟ್​ - ಈಟಿವಿ ಭಾರತ ಕನ್ನಡ

Deepavali 2023: ದೀಪಾವಳಿ ಸಂಭ್ರಮದಲ್ಲಿರುವ ಮಾಲಾಶ್ರೀ ಮತ್ತು ಮಗಳು ಆರಾಧನಾ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Deepavali 2023 Malashri and her daughter aradhana photoshoot
ದೀಪಾವಳಿ ಸಂಭ್ರಮ: ಮಾಲಾಶ್ರೀ ಜೊತೆ ಮಗಳು ಆರಾಧನಾ ಫೋಟೋಶೂಟ್​
author img

By ETV Bharat Karnataka Team

Published : Nov 13, 2023, 12:46 PM IST

ಸ್ಯಾಂಡಲ್​ವುಡ್​ ಆ್ಯಕ್ಷನ್​ ಕ್ವೀನ್​ ಮಾಲಾಶ್ರೀ ಹಾಗೂ ರಾಮು ಅವರ ಪುತ್ರಿ ಆರಾಧನಾ ರಾಮ್​ 'ಕಾಟೇರ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತಿರುವ ವಿಚಾರ. ಈಗಾಗಲೇ ಈ ಚಿತ್ರದ ಶೂಟಿಂಗ್​ನಲ್ಲಿ ಆರಾಧನಾ ತೊಡಗಿಸಿಕೊಂಡಿದ್ದಾರೆ. 'ಕಾಟೇರ'ದ ವಿಭಿನ್ನ ಪೋಸ್ಟರ್​ಗಳು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಇದೀಗ ಆರಾಧನಾ ರಾಮ್​ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಅದ್ಧೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಿಸಿದ್ದಾರೆ. ಅಮ್ಮ ಮಾಲಾಶ್ರೀ ಜೊತೆ ನಿಂತು ಫೋಟೋಶೂಟ್​ ಮಾಡಿಸಿದ್ದಾರೆ.

ಈ ವರ್ಷದ ದೀಪಾವಳಿ ಮಾಲಾಶ್ರೀ ಹಾಗೂ ರಾಮು ಮನೆಯಲ್ಲಿ ಸಂಭ್ರಮ ಹೆಚ್ಚಿಸಿದೆ. ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್​ನಲ್ಲಿ ಮಿಂಚಿದ್ದಾರೆ. ಅಮ್ಮ ಮಗಳು ನಮ್ಮ‌ ದೇಶಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರ ಜೊತೆಗೆ ಮೈಸೂರಿನ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ಬೊಂಬಾಟ್ ಫೋಟೋಶೂಟ್​ ಮಾಡಿಸಿದ್ದಾರೆ.

Deepavali 2023 Malashri and her daughter aradhana photoshoot
ದೀಪಾವಳಿ ಸಂಭ್ರಮ: ಮಾಲಾಶ್ರೀ ಜೊತೆ ಮಗಳು ಆರಾಧನಾ ಫೋಟೋಶೂಟ್​

ಈ ಕಲರ್​ಫುಲ್​ ಫೋಟೋಶೂಟ್ ಬಗ್ಗೆ ಮಾತನಾಡಿರುವ ಮಾಲಾಶ್ರೀ, "ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ. ಮಗಳ ಜೊತೆಗೆ ಫೋಟೋ ತೆಗೆಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು ಕಾಟೇರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ" ಎಂದು ಹೇಳಿದರು.

ಇದನ್ನೂ ಓದಿ: ಡಿಬಾಸ್ ಅಭಿನಯದ 'ಕಾಟೇರ' ನಾಯಕಿ 'ಪದ್ಮಾವತಿ': ಫಸ್ಟ್​ ಲುಕ್​ ನೋಡಿ

ಇನ್ನು ಮೊದಲ ಸಿನಿಮಾ 'ಕಾಟೇರ'ದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಜೋಡಿಯಾಗಿರುವ ಆರಾಧನಾ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ‌. ಈಗಾಗಲೇ ಅಭಿನಯದಲ್ಲಿ ದರ್ಶನ್ ಬಾಯಲ್ಲಿ ಮೆಚ್ಚುಗೆ ಪಡೆದಿರುವ ಆರಾಧನಾ ಕೂಡ ಚೊಚ್ಚಲ ಸಿನಿಮಾದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ ಆರಾಧನಾ ಇನ್ನೂ ಎರಡು, ಮೂರು ಸಿಮಿಮಾಗಳಲ್ಲಿ ಅಭಿನಯಿಸಲು ಮಾತುಕತೆ ಆಗಿದೆ. ಬಹುಶಃ 'ಕಾಟೇರ' ರಿಲೀಸ್ ಹೊತ್ತಿಗೆ ಆರಾಧನಾ ಹೊಸ ಚಿತ್ರಗಳು ಅನೌಸ್ ಆಗುವ ಸಾಧ್ಯತೆ ಇದೆ.

  • ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು pic.twitter.com/GtMMZuj0lB

    — Darshan Thoogudeepa (@dasadarshan) November 12, 2023 " class="align-text-top noRightClick twitterSection" data=" ">

'ಕಾಟೇರ್​' ಪೋಸ್ಟರ್​ ಔಟ್​: 'ಕಾಟೇರ' ಚಿತ್ರತಂಡ ದೀಪಾವಳಿಗೆ ಜನತೆಗೆ ಶುಭಕೋರಲು ಹೊಸ ಪೋಸ್ಟರ್​ ಅನ್ನು ಹಂಚಿಕೊಂಡಿದೆ. "ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ಕನ್ನಡಿಗರಿಗೆ ಚಿತ್ರತಂಡ ಶುಭಕೋರಿದೆ.

ಇದನ್ನೂ ಓದಿ: ಅದೃಷ್ಟಕ್ಕಾಗಿ ಹೆಸರು ಬದಲಾಯಿಸಿದ ಮಾಲಾಶ್ರೀ ಪುತ್ರಿ: ರಾಧನಾ ರಾಮ್​ ಇನ್ಮುಂದೆ______

ETV Bharat Logo

Copyright © 2025 Ushodaya Enterprises Pvt. Ltd., All Rights Reserved.