ಬೆಂಗಳೂರು: ಒಂದು ಸಮಯದಲ್ಲಿ ಕನ್ನಡ ಮಾತ್ರವಲ್ಲದೇ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಸದ್ಯ ಸಂಸದೆಯಾಗಿ ಸೇವೆ ಸಲ್ಲಿಸುತ್ತಿರುವ ಸುಮಲತಾ ಅಂಬರೀಶ್ ಅವರು ಇಂದು 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸುಮಲತಾ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ - ಸುದೀಪ್: ಮಂಡ್ಯದ ಗಂಡು ದಿ. ಅಂಬರೀಶ್ ಪತ್ನಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಿನ್ನೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬರ್ತ್ ಡೇ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಸೆಲೆಬ್ರೇಶನ್ಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಸಾಕ್ಷಿಯಾಗಿದ್ದರು. ಇವರಿಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
-
Challenging Star @dasadarshan and Abhinaya Chakravarthy @KicchaSudeep were spotted together after a six-year hiatus at the celebration of #Sumalatha 's Birthday #KicchaSudeep #DarshanThoogudeepa #KichchaSudeepa #DBoss #Kiccha46 #Kaatera pic.twitter.com/7q2qkpbA0C
— Bhargavi (@IamHCB) August 27, 2023 " class="align-text-top noRightClick twitterSection" data="
">Challenging Star @dasadarshan and Abhinaya Chakravarthy @KicchaSudeep were spotted together after a six-year hiatus at the celebration of #Sumalatha 's Birthday #KicchaSudeep #DarshanThoogudeepa #KichchaSudeepa #DBoss #Kiccha46 #Kaatera pic.twitter.com/7q2qkpbA0C
— Bhargavi (@IamHCB) August 27, 2023Challenging Star @dasadarshan and Abhinaya Chakravarthy @KicchaSudeep were spotted together after a six-year hiatus at the celebration of #Sumalatha 's Birthday #KicchaSudeep #DarshanThoogudeepa #KichchaSudeepa #DBoss #Kiccha46 #Kaatera pic.twitter.com/7q2qkpbA0C
— Bhargavi (@IamHCB) August 27, 2023
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ಸ್ಟಾರ್ಗಳಾಗಿ ಗುರುತಿಸಿಕೊಂಡಿರುವ ನಟರಾದ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುತ್ತಾರಾ? ಎಂಬ ಪ್ರಶ್ನೆ ಸೆಲೆಬ್ರಿಟಿಗಳೂ ಸೇರಿದಂತೆ ಅಭಿಮಾನಿಗಳಲ್ಲಿ ಮೂಡಿದೆ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸುದೀಪ್ ಹಾಗೂ ದರ್ಶನ್ ಜೋಡಿ ಹೆಚ್ಚಿನ ಸಭೆ-ಸಮಾರಂಭ, ಕ್ರಿಕೆಟ್ ಹೀಗೆ ಜುಗಲ್ ಬಂಧಿಯಾಗಿ ಗುರುತಿಸಿಕೊಂಡಿದ್ದರು. ಆದ್ರೀಗ ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ. ವೈಯಕ್ತಿಕ ಮನಸ್ತಾಪ ಎಂಬುದು ಅಭಿಮಾನಿಗಳ ಊಹೆ. ಇದೀಗ ಈ ಕುಚಿಕುಗಳು ಮತ್ತೆ ಒಂದಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಆ ಒಂದು ಬರ್ತ್ ಡೇ ಪಾರ್ಟಿ.
ಹೌದು, ಹಿರಿಯ ನಟಿ ಹಾಗೂ ಸಂಸದೆಯಾಗಿ ಸುಮಲತಾ ಅವರ ಜನ್ಮದಿನ ಹಿನ್ನೆಲೆ, ನಿನ್ನೆ ಖಾಸಗಿ ಹೋಟೆಲ್ನಲ್ಲಿ ಬರ್ತಡೇ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್ವುಡ್ ಸ್ಟಾರ್ಸ್ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಸಿನಿರಂಗದ ಹೆಚ್ಚಿನ ಗಣ್ಯರು ಆಗಮಿಸಿದ್ದರು. ಹಲವು ವರ್ಷಗಳ ಬಳಿಕ ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಮಲತಾ ಅಂಬರೀಶ್: Photos ನೋಡಿ
ಸುಮಲತಾ ಅವರ ಕೇಕ್ ಕಟ್ ಬಳಿಕ ಒಂದೇ ಸ್ಥಳದಲ್ಲಿ ಇವರಿಬ್ಬರ ವಿಡಿಯೋ, ಫೋಟೋ ಕ್ಲಿಕ್ ಆಗಿದ್ದು ಅವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಎಲ್ಲಾ ದ್ವೇಷ ಮರೆತು ಮತ್ತೆ ಒಂದಾಗುತ್ತಾರಾ? ಎಂಬ ಗುಸು-ಗುಸು ಕೇಳಿಬರುತ್ತಿದೆ. ಅವರ ಅಭಿಮಾನಿಗಳು ಒಂದಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಹಾಗೂ ಮಾಧ್ಯಮ ಪ್ರಮುಖರ ನಡುವೆ ರಾಜಿ ಸಂಧಾನ ಮಾಡಿಸಿದ್ದ ರಾಕ್ ಲೈನ್ ವೆಂಕಟೇಶ್, ಸುದೀಪ್ - ದರ್ಶನ್ ಮಧ್ಯೆ ಪ್ರವೇಶಿಸಿ ರಾಜಿ ಸಂಧಾನ ಮಾಡಿಸುತ್ತಾರಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬಾಚರಿಸಿದ ಯಶ್ ರಾಧಿಕಾ ದಂಪತಿ: Photos!