ಆರ್ಆರ್ಆರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ಅಭಿಮಾನಿ ಮೇಡಿಶೆಟ್ಟಿ ಶ್ಯಾಮ್ ಸಾಯಿ ಮಣಿಕಂಠ ಅನುಮಾನಾಸ್ಪದವಾಗಿ ಸಾವನ್ನದ್ದಾರೆ. ಆಂಧ್ರಪ್ರದೇಶದ ಕೊತ್ತಪೇಟ್ ಮಂಡಲದ ಮೊಡೆಕುರು ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದೇ ತಿಂಗಳ 25ರಂದು ಘಟನೆ ನಡೆದಿದೆ. ಜೂನಿಯರ್ ಎನ್‌ಟಿಆರ್ ಅಭಿಮಾನಿಯ ಮೃತದೇಹ ತಡವಾಗಿ, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿದೆ. ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎಲ್ಲಾ ಆಯಾಮಗಳಿಂದಲೂ ತನಿಖೆ: ಮೇಡಿಶೆಟ್ಟಿ ಶ್ಯಾಮ್ ಸಾಯಿ ಮಣಿಕಂಠ ಅವರ ಹುಟ್ಟೂರು ಕತ್ರೆನಿಕೋಣ ಮಂಡಲದ ಕುಪ್ಪಗುಂಟ ಗ್ರಾಮ. ಹತ್ತು ವರ್ಷಗಳಿಂದ ಈ ಕುಟುಂಬ ತಿರುಪತಿಯಲ್ಲಿ ವಾಸವಾಗಿದೆ. ಮೊಡೆಕುರು ಗ್ರಾಮದ ಅಜ್ಜಿ ಮನೆಗೆ ಬಂದ ಮಣಿಕಂಠ ಶವವಾಗಿ ಪತ್ತೆಯಾಗಿದ್ದಾರೆ. ಕೈಯಲ್ಲಿನ ನರ ಕತ್ತರಿಸಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದು, ಮಣಿಕಂಠ ಅವರ ಜೇಬಿನಿಂದ ಬ್ಲೇಡ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಕೊತ್ತಪೇಟೆ ಡಿಎಸ್ಪಿ ರಮಣ ತಿಳಿಸಿದ್ದಾರೆ.
-
Finally my life time Dream achived 🤗
— _S_h_Y_a_M_ (@shyambadboy6) March 19, 2023 " class="align-text-top noRightClick twitterSection" data="
My inspiration ♥️
My hero 😎
My God 🙏🏻
My Everything @tarak9999 😍
Anaa this is the best Moment in life
Love you annaaaaa love you forever #ManOfMassesNTR#MassAmmaMoguduNtr pic.twitter.com/4RcGIxPmff
">Finally my life time Dream achived 🤗
— _S_h_Y_a_M_ (@shyambadboy6) March 19, 2023
My inspiration ♥️
My hero 😎
My God 🙏🏻
My Everything @tarak9999 😍
Anaa this is the best Moment in life
Love you annaaaaa love you forever #ManOfMassesNTR#MassAmmaMoguduNtr pic.twitter.com/4RcGIxPmffFinally my life time Dream achived 🤗
— _S_h_Y_a_M_ (@shyambadboy6) March 19, 2023
My inspiration ♥️
My hero 😎
My God 🙏🏻
My Everything @tarak9999 😍
Anaa this is the best Moment in life
Love you annaaaaa love you forever #ManOfMassesNTR#MassAmmaMoguduNtr pic.twitter.com/4RcGIxPmff
ಚಂದ್ರಬಾಬು ನಾಯ್ಡು ಸಂತಾಪ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಮಣಿಕಂಠನ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಹಿಂದಿನ ಕಾರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಚಿಂತಲೂರಿನಲ್ಲಿ ಶ್ಯಾಮ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಸಾವಿನ ಸುತ್ತಲಿನ ಅನುಮಾನಾಸ್ಪದ ಸನ್ನಿವೇಶಗಳು ಆತಂಕಕಾರಿಯಾಗಿದೆ. ಈ ವಿಷಯದ ಬಗ್ಗೆ ಕೂಲಂಕಷ ತನಿಖೆ ನಡೆಸಿ, ನ್ಯಾಯ ಸಿಗುವಂತೆ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ವೈಎಸ್‌ಆರ್‌ಸಿಪಿ ಸದಸ್ಯರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
-
Deeply saddened by the tragic and untimely demise of Shyam in Chintaluru, EG District. The suspicious circumstances surrounding his death are alarming. I strongly urge for a thorough investigation into this matter, ensuring justice is served. It has been alleged that YSRCP… pic.twitter.com/55bpR9cgvR
— N Chandrababu Naidu (@ncbn) June 27, 2023 " class="align-text-top noRightClick twitterSection" data="
">Deeply saddened by the tragic and untimely demise of Shyam in Chintaluru, EG District. The suspicious circumstances surrounding his death are alarming. I strongly urge for a thorough investigation into this matter, ensuring justice is served. It has been alleged that YSRCP… pic.twitter.com/55bpR9cgvR
— N Chandrababu Naidu (@ncbn) June 27, 2023Deeply saddened by the tragic and untimely demise of Shyam in Chintaluru, EG District. The suspicious circumstances surrounding his death are alarming. I strongly urge for a thorough investigation into this matter, ensuring justice is served. It has been alleged that YSRCP… pic.twitter.com/55bpR9cgvR
— N Chandrababu Naidu (@ncbn) June 27, 2023
ಇದನ್ನೂ ಓದಿ: ಟಾಕಿ ಕಾಲದಲ್ಲಿ ಮೂಕಿ 'ಮಹಾಗುರು': 36 ವರ್ಷಗಳ ಬಳಿಕ ಕನ್ನಡದಲ್ಲಿ ಬರ್ತಿದೆ ಮೂಕಿಚಿತ್ರ
ನ್ಯಾಯ ಸಿಗುವವರೆಗೂ ಹೋರಾಟ: ಯುವಕನ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಒತ್ತಾಯಿಸಿದ್ದಾರೆ. ಎರಡು ದಿನಗಳ ಹಿಂದೆ ಶ್ಯಾಮ್ ಎಂಬ ಯುವಕ ಅನುಮಾನಾಸ್ಪದವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನಿರುದ್ಯೋಗಿ ಯುವಕ ಶ್ಯಾಮ್ ಅನುಮಾನಾಸ್ಪದ ಸಾವು ದುಃಖ ತಂದಿದೆ. ಶ್ಯಾಮ್ ಅವರ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪಗಳು. ಕೆಲ ರಾಜಕೀಯ ಮುಖಂಡರು ಶಾಮೀಲಾಗಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ. ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಶ್ಯಾಮ್ ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ನಾರಾ ಲೋಕೇಶ್ ತಿಳಿಸಿದರು.
ಇದನ್ನೂ ಓದಿ: '7 ಸ್ಟಾರ್ ಸುಲ್ತಾನ' ಕುರುಬಾನಿ ಕೊಡದಿರಲು ನಿರ್ಧಾರ: ಫಲಿಸಿತು 'ಟಗರು ಪಲ್ಯ' ಚಿತ್ರತಂಡದ ಮನವಿ
ನಟ ಜೂನಿಯರ್ ಎನ್‌ಟಿಆರ್ ಕೂಡ ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ. ಜೊತೆಗೆ ಅಭಿಮಾನಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ಶ್ಯಾಮ್ ಅವರ ಸಾವು ನಿಜವಾಗಿಯೂ ತುಂಬಾ ದುಃಖಕರವಾಗಿದೆ, ಶ್ಯಾಮ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು, ಅವರ ಸಾವಿನ ಪರಿಸ್ಥಿತಿ ಎಲ್ಲರಿಗೂ ನೋವುಂಟು ಮಾಡಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ನಾನು ವಿನಂತಿಸುತ್ತೇನೆ' ಎಂದು ತಮ್ಮ ಅಧಿಕೃತ ಹೇಳಿಕೆಯಲ್ಲಿ ನಟ ತಿಳಿಸಿದ್ದಾರೆ.