ETV Bharat / entertainment

ಯುವ ನಟ ಅಭಿಲಾಷ್​​ಗೆ ಒಳ್ಳೆ ಭವಿಷ್ಯ ಇದೆ.. ನಟ‌, ನಿರ್ದೇಶಕ ಓಂ ಪ್ರಕಾಶ್ ರಾವ್ - ಬಾಲಾಜಿ ಮಾಧವ ಶೆಟ್ಟಿ

ಯುವನಟ ಅಭಿಲಾಷ್​ ನಟನೆಯ, ಬಾಲಾಜಿ ಮಾಧವ ಶೆಟ್ಟಿ ನಿರ್ದೇಶನ ಮತ್ತು ನಿರ್ಮಾಣದ "ಕ್ರೇಜಿ ಕೀರ್ತಿ" ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

crazy-keerthi-kannada-movie-will-hit-the-theatres-soon
ಯುವ ನಟ ಅಭಿಲಾಷ್​​ಗೆ ಒಳ್ಳೆ ಭವಿಷ್ಯ ಇದೆ : ನಟ‌,ನಿರ್ದೇಶಕ ಓಂ ಪ್ರಕಾಶ್ ರಾವ್
author img

By ETV Bharat Karnataka Team

Published : Sep 2, 2023, 8:44 PM IST

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆಗಳು ಇರುವ ಸಿನಿಮಾಗಳು‌ ಬಂದಿವೆ. ಆ ಸಾಲಿಗೆ ಈಗ 'ಕ್ರೇಜಿ ಕೀರ್ತಿ' ಎಂಬ ಸಿನಿಮಾ‌ ಸೇರಿದೆ. ಈ ಮೂಲಕ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟುಹಾಕುವ ಉತ್ಸುಕದಲ್ಲಿದೆ. ಈ ಚಿತ್ರವನ್ನು ಬಾಲಾಜಿ ಮಾಧವ ಶೆಟ್ಟಿ ಅವರು ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜನ ಮೆಚ್ಚುಗೆ ಪಡೆದಿದೆ.

ಸಿನಿಮಾ ಬಗ್ಗೆ ಮಾತನಾಡಿದ ಬಾಲಾಜಿ ಮಾಧವ ಶೆಟ್ಟಿ, ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಶ್ರಮವಹಿಸಿ ಸಿನಿಮಾ‌ ಮಾಡಿದ್ದೇವೆ. ಇದೊಂದು ಯುವಜನತೆಯ ಮೇಲೆ ಮಾಡಿರುವ ಸಿನಿಮಾ. ಕಾಲೇಜಿನ ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಕುರಿತ ಕಥೆಯನ್ನು ಹೊಂದಿದೆ. ಒಂದೊಳ್ಳೆಯ ರೊಮ್ಯಾಂಟಿಕ್ ಕಥಾಹಂದರ ಸಿನಿಮಾದಲ್ಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಹಾಡುಗಳು ಸಿನಿಮಾದ ಪ್ಲಸ್ ಪಾಯಿಂಟ್​​. ಇನ್ನು, ಈ ಸಿನಿಮಾ ಇಷ್ಟೊಂದು‌ ಚೆನ್ನಾಗಿ ಮೂಡಿ ಬರಲು ಕಾರಣ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್. ಅವರಿಗೆ ಇಲ್ಲೊಂದು ವಿಶೇಷ ಎನಿಸುವ ಪಾತ್ರವಿದೆ. ಪಾತ್ರದ ಜೊತೆಗೆ ಸಿನಿಮಾ ಹೇಗೆ ಬರಬೇಕು, ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ತಿಳಿಹೇಳುವ ಮೂಲಕ ಓಂ ಪ್ರಕಾಶ್ ರಾವ್ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬರಲು ಕಾರಣರಾಗಿದ್ದಾರೆ ಎಂದು ಹೇಳಿದರು.

crazy-keerthi-kannada-movie-will-hit-the-theatres-soon
ಕ್ರೇಜಿ ಕೀರ್ತಿ ಸಿನೆಮಾ ಚಿತ್ರತಂಡ

ನಟ ಹಾಗು ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿ, ಈ ಸಿನಿಮಾದಲ್ಲಿ ನನಗೆ ಕೆಲಸ ಮಾಡಲು ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಮೊದಲು ಒಂದು ಪಾತ್ರವಿದೆ. ಅದನ್ನು ನೀವೇ ಮಾಡಬೇಕು ಅಂತ ಹೇಳಿದಾಗ, ಕಥೆ ಕೇಳಿದೆ. ಚೆನ್ನಾಗಿತ್ತು. ಒಪ್ಪಿಕೊಂಡೆ. ಇನ್ನು, ಕೊರೊನಾ ಸಮಯದಲ್ಲಿ ನನಗೆ ಈ ಸಿನಿಮಾದಲ್ಲಿ ಕೆಲಸ‌ ಮಾಡಲು ಅವಕಾಶ ಕೊಟ್ಟರು. ಆ ಕಾರಣಕ್ಕೆ ನಾನು ಸಿನಿಮಾದ ತೆರೆಯ ಮೇಲೂ ಮತ್ತು ಹಿಂದೆಯೂ ಇದ್ದು, ಒಂದೊಳ್ಳೆಯ ಸಿನಿಮಾ ಆಗಲು ಅವರ ಜೊತೆ ಕೈ ಜೋಡಿಸಿದ್ದೇನೆ. ಹೀರೋ ಅಭಿಲಾಷ್​ ಅವರಿಗೆ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ‌ ಮಾಡಿದ್ದಾರೆ. ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸಿದರು.

ನಾಯಕ ಅಭಿಲಾಷ್​ ಮಾತನಾಡಿ, ಚಿತ್ರದಲ್ಲಿ ಸಾಕಷ್ಟು ತಿರುವುಗಳಿವೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಎಲ್ಲಾ ವರ್ಗದವರು ನೋಡಬಹುದಾದ ಸಿನಿಮಾ. ಇದರಲ್ಲಿ ಸಾಕಷ್ಟು ಮನೋರಂಜನೆ ಇದೆ. ಕ್ರೇಜಿ ಹುಡುಗಿ ಏನೆಲ್ಲಾ ಮಾಡುತ್ತಾಳೆ ಎಂಬುದನ್ನು‌ ಈ ಸಿನಿಮಾದಲ್ಲಿ ನೋಡಬಹುದು ಎಂದು ಹೇಳಿದರು.

ನಾಯಕಿ ಸಾರಿಕ ರಾವ್ ಅವರಿಗೆ ಚಿತ್ರದಲ್ಲಿ ಲವಲವಿಕೆಯ ಪಾತ್ರ ಇದೆಯಂತೆ. ಕೀರ್ತಿ ಎಂಬುದು ಅವರ ಪಾತ್ರದ ಹೆಸರು. ಅವರೇ ಹೇಳುವಂತೆ, ಸಿನಿಮಾದಲ್ಲಿ‌ ಸಾಕಷ್ಟು ಅನುಭವ ಆಗಿದೆ. ಓಂಪ್ರಕಾಶ್ ರಾವ್ ಅವರಿಂದ ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ. ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ‌ ಮಾಡಿದ್ದಾರೆ. ಇದು ಹೊಸ ಜಾನರ್ ಸಿನಿಮಾ. ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದರು.

ಮತ್ತೊಬ್ಬ ನಾಯಕಿ ರಿಶಾ ಗೌಡ ಮಾತನಾಡಿ, ಇದು‌ ಮೊದಲ ಸಿನಿಮಾ. ನನ್ನ ಪಾತ್ರ ಸಿನಿಮಾದಲ್ಲಿ ಹೈಲೈಟ್. ಇದನ್ನೂ ಸಿನಿಮಾದಲ್ಲೇ ನೋಡಬೇಕು ಎಂದು ಹೇಳಿದರು. ಈ ಚಿತ್ರದಲ್ಲಿ ಅಭಿಲಾಶ್, ಸಾರಿಕ ರಾವ್, ರಿಶಾ ಗೌಡ ಅಲ್ಲದೇ ಸಂದೀಪ್ ಮಾಧವ ಶೆಟ್ಟಿ, ರಂಗಾಯಣ ರಘು, ಪದ್ಮಜಾ ರಾವ್, ಪ್ರಕಾಶ್ ಶೆಣೈ, ಆಶಾ ಸುಜಯ್ ಮತ್ತಿತರರು ನಟಿಸಿದ್ದಾರೆ.

ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್ ಸಿನಿಮಾ ನಿರ್ಮಾಣ ಮಾಡಿದೆ. ಮನೋಹರ್ ಅವರ ಛಾಯಾಗ್ರಹಣ, ಲಕ್ಷ್ಮಿನಾರಾಯಣ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಈ ಚಿತ್ರಕ್ಕೆ ಲಯ ಕೋಕಿಲ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸದ್ಯ ಟ್ರೈಲರ್​​ನಿಂದ ಗಮನ ಸೆಳೆಯುತ್ತಿರೋ ಕ್ರೇಜಿ ಕೀರ್ತಿ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಬರಲಿದೆ‌.

ಇದನ್ನೂ ಓದಿ : ಸ್ಯಾಂಡಲ್​ವುಡ್​ 'ಬಾದ್​ ಷಾ'ಗೆ ಜನ್ಮದಿನದ ಸಂಭ್ರಮ: ಸ್ಟೈಲಿಶ್​ ಫೋಟೋಸ್​ ಜೊತೆ ಕಿಚ್ಚನ ಬಗ್ಗೆ ಮತ್ತಷ್ಟು ತಿಳಿಯಿರಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.