ನವದೆಹಲಿ: ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ಗೆ ಜಾಮೀನು ಸಿಕ್ಕಿದೆ. ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ಮಂಗಳವಾರ ನಟಿಗೆ ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನಟಿಗೆ ಜಾಮೀನು ನೀಡಿದ್ದಾರೆ.
-
#WATCH | Jacqueline Fernandez leaves from Delhi's Patiala House Court after getting bail in Rs 200 crores money laundering case involving alleged conman Sukesh Chandrashekhar pic.twitter.com/d1qjSaLZeg
— ANI (@ANI) November 15, 2022 " class="align-text-top noRightClick twitterSection" data="
">#WATCH | Jacqueline Fernandez leaves from Delhi's Patiala House Court after getting bail in Rs 200 crores money laundering case involving alleged conman Sukesh Chandrashekhar pic.twitter.com/d1qjSaLZeg
— ANI (@ANI) November 15, 2022#WATCH | Jacqueline Fernandez leaves from Delhi's Patiala House Court after getting bail in Rs 200 crores money laundering case involving alleged conman Sukesh Chandrashekhar pic.twitter.com/d1qjSaLZeg
— ANI (@ANI) November 15, 2022
ಸ್ನೇಹಿತ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸೇರಿ ಅಕ್ರಮ ಹಣ ವರ್ವಾವಣೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ನ್ಯಾಯಾಲಯ ಕೆಲವು ತಿಂಗಳಿನಿಂದ ವಿಚಾರಣೆ ನಡೆಸುತ್ತಿದೆ. ಕೋರ್ಟ್‌ಗೆ ಹಾಜರಾಗಿ ಜಾಕ್ವೆಲಿನ್ ಕೂಡಾ ವಿಚಾರಣೆ ಎದುರಿಸಿದ್ದರು. ಜೊತೆಗೆ ಬಹಳ ದಿನಗಳ ಹಿಂದೆಯೇ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಕೊನೆಗೂ ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ನೀಡಿದ್ದು ಕಾನೂನು ಕುಣಿಕೆಯಿಂದ ಅವರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.
ಪ್ರಕರಣದಲ್ಲಿ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲು ಪಾಲಾಗಿದ್ದು ಈತನಿಂದ ಹಣ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಜಾಕ್ವೆಲಿನ್ಗೆ ತನಿಖೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಅಲ್ಲದೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಪೂರಕ ಆರೋಪಿಗಳ ಪಟ್ಟಿಯಲ್ಲಿ ನಟಿಯ ಹೆಸರನ್ನು ಸೇರಿಸಲಾಗಿತ್ತು.
ಇದನ್ನು ಓದಿ: ನಟನೆಯಿಂದ ಕೊಂಚ ವಿರಾಮ.. ಕುಟುಂಬಕ್ಕೆ ಸಮಯ ಕೊಡಲು ನಿರ್ಧರಿಸಿದ ಅಮಿರ್ ಖಾನ್