ETV Bharat / entertainment

ನಂದಮೂರಿ ತಾರಕರತ್ನ ನಿಧನ: ಪ್ರಧಾನಿ ಮೋದಿ ಸೇರಿ ಚಿತ್ರರಂಗದ ಗಣ್ಯರ ಸಂತಾಪ - Death of nandamuri tarakaratna

ಟಾಲಿವುಡ್ ನಟ ನಂದಮೂರಿ ತಾರಕರತ್ನ ನಿಧನಕ್ಕೆ ಪಿಎಂ ಮೋದಿ ಸೇರಿದಂತೆ ಚಿತ್ರರಂಗ ಸಂತಾಪ ಸೂಚಿಸಿದೆ.

Death of nandamuri tarakaratna
ನಂದಮೂರಿ ತಾರಕರತ್ನ ನಿಧನಕ್ಕೆ ಸಂತಾಪ
author img

By

Published : Feb 19, 2023, 12:44 PM IST

ಕಳೆದ ಹಲವು ದಿನಗಳಿಂದ ಸಾವು-ಬದುಕಿನ ಮಧ್ಯೆ ನಿರಂತರ ಹೋರಾಟ ನಡೆಸುತ್ತಿದ್ದ ಟಾಲಿವುಡ್ ನಟ ನಂದಮೂರಿ ತಾರಕರತ್ನ ನಿನ್ನೆ ಸಂಜೆ ನಿಧನ ಹೊಂದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಹೈದರಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಿನಿಮಾರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

  • Pained by the untimely demise of Shri Nandamuri Taraka Ratna Garu. He made a mark for himself in the world of films and entertainment. My thoughts are with his family and admirers in this sad hour. Om Shanti: PM @narendramodi

    — PMO India (@PMOIndia) February 19, 2023 " class="align-text-top noRightClick twitterSection" data=" ">

ಮೋದಿ ಟ್ವೀಟ್: "ತಾರಕರತ್ನ ಅವರು ಚಲನಚಿತ್ರಗಳು ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ತಾರಕರತ್ನ ಅವರ ಕುಟುಂಬಸ್ಥರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

  • చిన్న వయసులో శ్రీ తారకరత్న పరమపదించటం వారి కుటుంబానికి తీరని లోటు. శ్రీ తారకరత్న ఆత్మకు శాంతి కలగాలని ప్రార్థిస్తూ వారి కుటుంబ సభ్యులకు, అభిమానులకు ప్రగాఢ సానుభూతి తెలియజేస్తున్నాను.
    ఓం శాంతి. pic.twitter.com/U2F3ycXtVn

    — M Venkaiah Naidu (@MVenkaiahNaidu) February 19, 2023 " class="align-text-top noRightClick twitterSection" data=" ">

ವೆಂಕಯ್ಯ ನಾಯ್ಡು ಸಂತಾಪ: "ಖ್ಯಾತ ನಟ ನಂದಮೂರಿ ತಾರಕರತ್ನ ಅವರು ನಿಧನರಾಗಿದ್ದಾರೆಂಬ ವಿಷಯ ತಿಳಿದು ನನಗೆ ಬಹಳ ದುಃಖವಾಗಿದೆ. ಅವರಿಗೆ ಹೃದಯಾಘಾತ ಆದಾಗಿನಿಂದ ನಾನು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆ. ಅವರು ಚೇತರಿಸಿಕೊಂಡು ನಮ್ಮೆಲ್ಲರ ಬಳಿಗೆ ಮರಳುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ಸುದ್ದಿ ಕೇಳಿ ಬೇಸರವಾಯಿತು. ತಾರಕರತ್ನ ಅವರು ಚಿಕ್ಕ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ನಂದಮೂರಿ ರಾಮಕೃಷ್ಣ ಸಂತಾಪ: ನಂದಮೂರಿ ತಾರಕರತ್ನ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ಪ್ರೀತಿ, ವಾತ್ಸಲ್ಯ ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿತ್ರ ನಿರ್ಮಾಪಕ ನಂದಮೂರಿ ರಾಮಕೃಷ್ಣ ತಿಳಿಸಿದ್ದಾರೆ.

'ನಿಜಕ್ಕೂ ಬೇಸರದ ಸಂಗತಿ': ನಂದಮೂರಿ ತಾರಕರತ್ನ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಚಿಕ್ಕ ವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ನಿಜಕ್ಕೂ ಬೇಸರದ ಸಂಗತಿ. ತಾರಕರತ್ನ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಹಾರೈಸುತ್ತೇನೆ ಎಂದು ನಟ ಮಹೇಶ್ ಬಾಬು ಹೇಳಿದ್ದಾರೆ.

ನಟ ರವಿತೇಜ ಟ್ವೀಟ್: ಸಾವಿನಲ್ಲೂ ಹೋರಾಡಿ ಬಳಿಕ ನಿಧನದ ದುಃಖದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಕರುಣಾಮಯಿ ಸ್ವಭಾವದವರು. ಕುಟುಂಬ ಸದಸ್ಯರಿಗೆ ನನ್ನ ಸಂತಾಪ ಎಂದು ನಟ ರವಿತೇಜ ಟ್ವೀಟ್ ಮಾಡಿದ್ದಾರೆ.

ನಟ ಚಿರಂಜೀವಿ ಟ್ವೀಟ್: ನಂದಮೂರಿ ತಾರಕರತ್ನ ಅವರ ಅಕಾಲಿಕ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಭರವಸೆಯ, ಪ್ರತಿಭಾವಂತ, ಪ್ರೀತಿಯ ಯುವಕ ಬಹಳ ಬೇಗ ನಮ್ಮನ್ನು ಅಗಲಿದರು. ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ನಟ ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ನಟ ರಾಮ್ ಚರಣ್ ಟ್ವೀಟ್: 'ತಾರಕರತ್ನ ಅವರ ನಿಧನದ ಸುದ್ದಿ ಕೇಳಿ ನಿಜಕ್ಕೂ ದುಃಖವಾಯಿತು. ಅವರ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ನಟ ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.

ನಟ ಅಲ್ಲು ಅರ್ಜುನ್​ ಟ್ವೀಟ್: 'ತಾರಕರತ್ನ ಸಾವಿನ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಕುಟುಂಬಸ್ಥರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಅಲ್ಲು ಅರ್ಜುನ್​ ಟ್ವೀಟ್ ಮಾಡಿದ್ದಾರೆ.

  • Deeply saddened to learn about the untimely demise of renowned Telugu Actor Shri. Nandamuri Taraka Ratna. Despite best efforts, his passing away came as a misfortune. My sincere condolences to his family. Praying for the sadgati of the departed soul. Om Shanti. pic.twitter.com/3STbQGrk4K

    — Dr Sudhakar K (@mla_sudhakar) February 18, 2023 " class="align-text-top noRightClick twitterSection" data=" ">

ಡಾ.ಕೆ.ಸುಧಾಕರ್ ಟ್ವೀಟ್: ಖ್ಯಾತ ತೆಲುಗು ನಟರ ಅಕಾಲಿಕ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಅವರ ನಿಧನ ಸಂಗತಿ ದುರದೃಷ್ಟಕರ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅಗಲಿದ ಆತ್ಮದ ಸದ್ಗತಿಗಾಗಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ತಾರಕರತ್ನ ಅವರು ಹೃದಯಾಘಾತದ ಬಳಿಕ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ಥಿವ ಶರೀರವನ್ನು ಕುಟುಂಬಸ್ಥರು ಹೈದರಾಬಾದ್‌ಗೆ ಸ್ಥಳಾಂತರಿಸಿದ್ದಾರೆ. ಸಂಬಂಧಿಕರು ಮತ್ತು ಚಿತ್ರರಂಗದ ಗಣ್ಯರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ರಂಗಾರೆಡ್ಡಿ ಜಿಲ್ಲೆಯ ಮೊಕಿಲಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಫಲಿಸದ ಚಿಕಿತ್ಸೆ.. ಟಾಲಿವುಡ್ ನಟ ನಂದಮೂರಿ ತಾರಕರತ್ನ ನಿಧನ

ಸೋಮವಾರ ನಂದಮೂರಿ ತಾರಕರತ್ನ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಸೋಮವಾರ ಬೆಳಗ್ಗೆ 7 ರಿಂದ ಸಂಜೆ 4 ರವರೆಗೆ ತೆಲುಗು ಫಿಲಂ ಚೇಂಬರ್‌ನಲ್ಲಿ ಇರಿಸಲಾಗುವುದು. ನಂತರ ಸಂಜೆ 5 ಗಂಟೆಗೆ ಮಹಾಪ್ರಸ್ಥಾನಂನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.