ETV Bharat / entertainment

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ನಟಿ ತಾಪ್ಸಿ ಪನ್ನು ವಿರುದ್ಧ ದೂರು! - Taapsee Pannu photo

ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಆರೋಪದಡಿ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲಾಗಿದೆ.

MP: Complaint against actor Taapsee Pannu
ನಟಿ ತಾಪ್ಸಿ ಪನ್ನು ವಿರುದ್ಧ ದೂರು
author img

By

Published : Mar 28, 2023, 8:56 PM IST

ಇಂದೋರ್‌ (ಮಧ್ಯಪ್ರದೇಶದ): ಬಾಲಿವುಡ್​ ನಟಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಕ್ಕೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ನಟಿ ತಾಪ್ಸಿ ಪನ್ನು ವಿರುದ್ಧ ಬಿಜೆಪಿ ಶಾಸಕರಾದ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಗೌರ್ ಮಾರ್ಚ್ 27 ರಂದು (ನಿನ್ನೆ, ಸೋಮವಾರ) ದೂರು ದಾಖಲಿಸಿದ್ದಾರೆ.

ಏಕಲವ್ಯ ಗೌರ್ ಆರೋಪ: ಮಾರ್ಚ್ 12 ರಂದು ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರಾಂಪ್ ವಾಕ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಈ ದೂರು ದಾಖಲಾಗಿದೆ. ಏಕಲವ್ಯ ಗೌರ್ (ಹಿಂದ್ ರಕ್ಷಕ ಸಂಘಟನೆ ಸಂಚಾಲಕ) ದೂರಿನಲ್ಲಿ, ಲ್ಯಾಕ್ಮೆ ಫ್ಯಾಷನ್ ವೀಕ್‌ನ ರಾಂಪ್ ವಾಕ್ ಸಮಯದಲ್ಲಿ ದೇಹ ಪ್ರದರ್ಶಿಸುವ ಉಡುಗೆ ತೊಟ್ಟು, ಅದಕ್ಕೆ ಲಕ್ಷ್ಮಿ ದೇವಿ ವಿನ್ಯಾಸದ ನೆಕ್ಲೇಸ್ ಧರಿಸಿದ್ದರು. ಇದು ಧಾರ್ಮಿಕ ಭಾವನೆಗಳು ಮತ್ತು ಸನಾತನ ಧರ್ಮದ ಗೌರವವನ್ನು ಘಾಸಿಗೊಳಿಸಿದೆ ಎಂದು ಏಕಲವ್ಯ ಗೌರ್​ ಆರೋಪಿಸಿದ್ದಾರೆ.

ಪೊಲೀಸ್ ಮಾಹಿತಿ: ನಟಿ ತಾಪ್ಸಿ ಪನ್ನು ವಿರುದ್ಧ ಏಕಲವ್ಯ ಗೌರ್ (ಬಿಜೆಪಿ ಎಂಎಲ್​ಎ ಮಾಲಿನಿ ಗೌರ್ ಪುತ್ರ) ಅವರಿಂದ ದೂರು ಸ್ವೀಕರಿಸಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಛತ್ರಿ ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಕಪಿಲ್ ಶರ್ಮಾ ತಿಳಿಸಿದ್ದಾರೆ.

ತಾಪ್ಸಿ ಪನ್ನು ಬಹು ಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿರುವ ಇವರು ಸದ್ಯ ಬಾಲಿವುಡ್‌ನ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಈವರೆಗೆ ಸರಿಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿನ ನಟನೆಗೆ ಹಲವು ಪ್ರಶಸ್ತಿ ಕೂಡ ಪಡೆದಿದ್ದಾರೆ. ಅಭಿನಯದಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಸಿನಿಮಾಗಳ ಹೊರತಾಗಿ ಹೇಳಿಕೆಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಇವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತವೆ. ಇದೀಗ ತಮ್ಮ ಫ್ಯಾಷನ್​ ಲುಕ್​ನಿಂದ ವಿವಾದಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: 'ಬಿಗ್ ಬ್ಯಾಂಗ್ ಥಿಯರಿ'ಯಲ್ಲಿ ಮಾಧುರಿ ದೀಕ್ಷಿತ್​ಗೆ ಅವಮಾನ ಆರೋಪ: ನೆಟ್‌ಫ್ಲಿಕ್ಸ್‌ಗೆ ಲೀಗಲ್​​ ನೋಟಿಸ್

ಡಂಕಿ ಈ ವರ್ಷ ತೆರೆ ಕಾಣಲಿರುವ ಚಿತ್ರ. ರಾಜ್‌ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರ ಡಂಕಿ ಅಲ್ಲಿ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಜೊತೆ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಡಂಕಿ ಎಮೋಶನಲ್​​ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದು ಹೇಳಲಾಗಿದೆ. ಕೆನಡಾಕ್ಕೆ ವಲಸೆ ಹೋಗುವ ಪಂಜಾಬಿ ಹುಡುಗನ ಬಗ್ಗೆ ಈ ಚಿತ್ರ ಹೇಳಲಿದೆ. ಶಾರುಖ್​ ಖಾನ್​ ಸದ್ಯ ಪಠಾಣ್​ ಯಶಸ್ಸಿನಲ್ಲಿದ್ದು, ಡಂಕಿ ಮತ್ತು ಜವಾನ್​ ದೊಡ್ಡ ಮಟ್ಟದ ಯಶಸ್ಸು ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ನಟಿ ತಾಪ್ಸಿ ಪನ್ನು ಅವರಿಗೂ ಈ ಚಿತ್ರ ದೊಡ್ಡ ಗೆಲುವು ತಂದು ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ದೇಶ ತೊರೆಯಲು ಕರಣ್ ಕಾರಣ: ಕಂಗನಾ ರಣಾವತ್ ಟ್ವೀಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.