ETV Bharat / entertainment

ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ: ರಣ್​​ಬೀರ್ ವಿರುದ್ಧ ದೂರು - Ranbir Kapoor

Complaint against Ranbir Kapoor: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಬಾಲಿವುಡ್​​ ನಟ ರಣ್​​ಬೀರ್​ ಕಪೂರ್​ ವಿರುದ್ಧ ದೂರು ದಾಖಲಾಗಿದೆ.

Complaint against Ranbir Kapoor
ರಣ್​​ಬೀರ್​ ಕಪೂರ್ ವಿರುದ್ಧ ದೂರು
author img

By ETV Bharat Karnataka Team

Published : Dec 28, 2023, 9:51 AM IST

ಮುಂಬೈ (ಮಹಾರಾಷ್ಟ್ರ): 'ಅನಿಮಲ್​​' ಯಶಸ್ಸಿನಲೆಯಲ್ಲಿ ತೇಲುತ್ತಿರುವ ಬಾಲಿವುಡ್​​ ನಟ ರಣ್​​ಬೀರ್​ ಕಪೂರ್​ಗೆ ಸಂಕಷ್ಟ ಎದುರಾಗಿದೆ. ಕ್ರಿಸ್ಮಸ್ ಸೆಲೆಬ್ರೇಶನ್​ಗೆ ಸಂಬಂಧಿಸಿದಂತೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ 'ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ'ದ ಮೇರೆಗೆ ಕಪೂರ್ ವಿರುದ್ಧ ಘಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಂಬೆ ಹೈಕೋರ್ಟ್‌ನ ವಕೀಲರಾದ ಆಶಿಶ್ ರೈ ಮತ್ತು ಪಂಕಜ್ ಮಿಶ್ರಾ ಅವರು ದೂರು ಸಲ್ಲಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ)ಯ 295 ಎ, 298, 500 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಆದ್ರೆ, ಪೊಲೀಸರು ಈ ಪ್ರಕರಣದಲ್ಲಿ ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ.

ವೈರಲ್​​ ವಿಡಿಯೋದಲ್ಲೇನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ, ನಟ ರಣ್​ಬೀರ್​​ ಕಪೂರ್​ ಅವರು ವೈನ್ ಮತ್ತು ಮದ್ಯವನ್ನು ಕೇಕ್ ಮೇಲೆ ಸುರಿದು 'ಜೈ ಮಾತಾ ದಿ' ಎಂದು ಹೇಳಿ ಕೇಕ್​​ಗೆ ಬೆಂಕಿ ಹಚ್ಚಿದ್ದಾರೆ. ಕುಟುಂಬಸ್ಥರು ಕೂಡ ಆ ವಾಕ್ಯವನ್ನೇ ಜಪಿಸಿದ್ದಾರೆ. ದೂರಿನಲ್ಲಿ, ದೇವತೆಗಳನ್ನು ಆವಾಹಿಸುವ ಮೊದಲು ಹಿಂದೂ ಧರ್ಮದಲ್ಲಿ ಅಗ್ನಿ ದೇವರನ್ನು ಆವಾಹಿಸಲಾಗುತ್ತದೆ. ಆದರೆ ನಟ ರಣಬೀರ್ ಕಪೂರ್ ಮತ್ತು ಅವರ ಕುಟುಂಬಸ್ಥರು ಉದ್ದೇಶಪೂರ್ವಕವಾಗಿ ಕ್ರಿಸ್ಮಸ್ ಆಚರಿಸುವಾಗ ಅಮಲು ಪದಾರ್ಥಗಳನ್ನು ಬಳಸಿ, "ಜೈ ಮಾತಾ ದಿ" ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ವಿಡಿಯೋ ಮಾಡಿ ವೈರಲ್​​ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಾಜಿ ಪತಿ ಮದುವೆ ಬೆನ್ನಲ್ಲೇ ಮಲೈಕಾ ಅರೋರಾ 'ಲವ್​​' ಸ್ಟೋರಿ

ನಟ ರಣ್​​ಬೀರ್​ ಕಪೂರ್ ಸದ್ಯ ಅನಿಮಲ್​ ಸಿನಿಮಾ ಮತ್ತು ರಾಹಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಈ ತಿಂಗಳ ಆರಂಭದಲ್ಲಿ ತೆರೆಕಂಡ ಅನಿಮಲ್​ ಅಭೂತಪೂರ್ವ ಯಶಸ್ಸು ಕಂಡಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 540 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಸಂದೀಪ್​​ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಅನಿಲ್​ ಕಪೂರ್​​, ಬಾಬಿ ಡಿಯೋಲ್​​ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಕೆಂಗುಲಾಬಿಯಂತೆ ಕಂಗೊಳಿಸಿದ ಜಾಹ್ನವಿ: ಫೋಟೋಗಳನ್ನು ನೋಡಿ

ಇನ್ನೂ, ಕ್ರಿಸ್ಮಸ್​​ ದಿನದಂದೇ ತಮ್ಮ ಮಗಳನ್ನು ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದಾರೆ. ಕಳೆದ ನವೆಂಬರ್​​ನಲ್ಲಿ ರಾಹಾ ಜನಿಸಿದ್ದು, ಈವರೆಗೆ ಮಗಳ ಫೋಟೋವನ್ನು ಶೇರ್ ಮಾಡಿರಲಿಲ್ಲ. ಕ್ರಿಸ್ಮಸ್ ದಿನದಂದು ಮೊದಲ ಬಾರಿ ಕ್ಯಾಮರಾ ಎದುರು ಮಗಳನ್ನು ಕರೆತಂದಿದ್ದಾರೆ. ಪತ್ನಿ ಆಲಿಯಾ ಭಟ್ ಮತ್ತು ಮಗಳು ರಾಹಾ ಜೊತೆಗಿನ ವಿಡಿಯೋ ವೈರಲ್​ ಆಗಿ ಸಖತ್ ಸದ್ದು ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.