ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ (58) ಬುಧವಾರ ನಿಧನರಾಗಿದ್ದಾರೆ. ಇಂದು ದೆಹಲಿಯ ನಿಗಮ್ ಬೋಧ್ ಘಟ್ನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಸ್ಟ್ಯಾಂಡ್-ಅಪ್ ಕಾಮಿಡಿಯನ್(stand-up comedian) ಆಗಿರುವ ರಾಜು ಶ್ರೀವಾಸ್ತವ್ ಆಗಸ್ಟ್ 10 ರಂದು ಜಿಮ್ನಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ದೆಹಲಿ ಏಮ್ಸ್‌ಗೆ ಕರೆತರಲಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಲಾಗಿತ್ತು. ಇದಕ್ಕೂ ಮುನ್ನ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಆಗಸ್ಟ್ 25ರಂದು ಅವರಿಗೆ ಪ್ರಜ್ಞೆ ಬಂದಿತ್ತು ಎಂದು ಆಸ್ಪತ್ರೆಯ ವೈದ್ಯ ಗರ್ವಿತ್ ನರಂಗ್ ಮಾಹಿತಿ ನೀಡಿದ್ದರು. ಏಮ್ಸ್ನಲ್ಲಿ ಕಳೆದ 49 ದಿನಗಳಿಂದ ಚಿಕಿತ್ಸೆ ಪಡೆದುಯುತ್ತಿದ್ದ ರಾಜು ಅವರು ಇದೀಗ ಇಹಲೋಕದ ಪಯಣ ಮುಗಿಸಿದ್ದು, ಇಂದು ಅಂತಿಮ ವಿಧಿ ವಿಧಾನಗಳನ್ನು ಮಾಡಲಾಗಿದೆ.
-
Delhi | Mortal remains of comedian #RajuSrivastav being taken to Nigambodh Ghat crematorium for last rites.
— ANI (@ANI) September 22, 2022 " class="align-text-top noRightClick twitterSection" data="
He passed away at AIIMS yesterday after being admitted here on August 10 after experiencing chest pain & collapsing while working out at the gym. pic.twitter.com/xosdquZoAY
">Delhi | Mortal remains of comedian #RajuSrivastav being taken to Nigambodh Ghat crematorium for last rites.
— ANI (@ANI) September 22, 2022
He passed away at AIIMS yesterday after being admitted here on August 10 after experiencing chest pain & collapsing while working out at the gym. pic.twitter.com/xosdquZoAYDelhi | Mortal remains of comedian #RajuSrivastav being taken to Nigambodh Ghat crematorium for last rites.
— ANI (@ANI) September 22, 2022
He passed away at AIIMS yesterday after being admitted here on August 10 after experiencing chest pain & collapsing while working out at the gym. pic.twitter.com/xosdquZoAY
ಅವರ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಪಾಲ್ಗೊಂಡರು. ಅಗಲಿದ ಆತ್ಮದ ಪಾರ್ಥಿವ ಶರೀರವು ದೆಹಲಿಯ ದಶರಥಪುರಿ ಪ್ರದೇಶದಿಂದ ನಿಗಮ್ ಬೋಧ್ ಘಾಟ್‌ನಲ್ಲಿ ದಹನಕ್ಕಾಗಿ ಬೆಳಗ್ಗೆ 8 ಗಂಟೆಗೆ ಹೊರಟಿತು. ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅಗಲಿದ ತಾರೆಯ ಅಂತಿಮ ದರ್ಶನವನ್ನು ಇಂದು ಪಡೆದರು. ದುಃಖ ಮನೆ ಮಾಡಿತ್ತು.
ಅಂತ್ಯಕ್ರಿಯೆಗಾಗಿ ಅವರ ಪಾರ್ಥಿವ ಶರೀರವನ್ನು ಬಿಳಿ ಹೂವುಗಳಿಂದ ಮುಚ್ಚಿದ ಆಂಬ್ಯುಲೆನ್ಸ್‌ನಲ್ಲಿ ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಅವರ ಪುತ್ರ ಆಯುಷ್ಮಾನ್ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ರಾಜು ಶ್ರೀವಾಸ್ತವ್ ಅವರ ಮರಣೋತ್ತರ ಪರೀಕ್ಷೆಯನ್ನು ನವೀನ ತಂತ್ರಜ್ಞಾನ ಬಳಸಿ (ವರ್ಚುವಲ್ ಶವಪರೀಕ್ಷೆ) ಮಾಡಲಾಗಿದೆ. ಹೈಟೆಕ್ ಡಿಜಿಟಲ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಸಹಾಯದಿಂದ ಮಾಡಲಾಗುವ ವರ್ಚುವಲ್ ಶವಪರೀಕ್ಷೆಯು ಸಾಂಪ್ರದಾಯಿಕ ಮರಣೋತ್ತರ ಪರೀಕ್ಷೆಗೆ ಹೋಲಿಸಿದರೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಮೃತ ದೇಹವನ್ನು ಶೀಘ್ರವಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲು ಅನುವು ಮಾಡಿಕೊಡುತ್ತದೆ ಎಂದು ಏಮ್ಸ್ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ನಿನ್ನೆ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಶವಪರೀಕ್ಷೆಯನ್ನು ಏಕೆ ಮಾಡಬೇಕೆಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆರಂಭದಲ್ಲಿ ಅವರನ್ನು ಏಮ್ಸ್‌ಗೆ ತಂದಾಗ ಅವರು ಪ್ರಜ್ಞೆಯಲ್ಲಿ ಇರಲಿಲ್ಲ. ಅವರು ಬಿದ್ದಿದ್ದ ಸ್ಪಷ್ಟ ಇತಿಹಾಸವನ್ನು ಅರಿಯಲು ಸಾಧ್ಯವಾಗಲಿಲ್ಲ. ಇದು ವೈದ್ಯಕೀಯ-ಕಾನೂನು ಪ್ರಕರಣವಾಗುತ್ತದೆ. ಅಂತಹ ಪ್ರಕರಣಗಳಲ್ಲಿ ವ್ಯಕ್ತಿಯು ಸತ್ತರೆ ಪೋಲಿಸರು ಮರಣೋತ್ತರ ಪರೀಕ್ಷೆಯನ್ನು ಆರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ...ಮೋದಿ ಸೇರಿ ಅನೇಕರ ಸಂತಾಪ
ಇನ್ನೂ ಶವಪರೀಕ್ಷೆಯ ಸಮಯದಲ್ಲಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯು ನೊಂದ ಕುಟುಂಬಕ್ಕೆ ಸ್ವಲ್ಪ ನೋವನ್ನು ನೀಡುತ್ತದೆ. ಆದರೆ ವರ್ಚುವಲ್ ಶವಪರೀಕ್ಷೆಯಲ್ಲಿ ಹಾಗಿಲ್ಲ. ಇದು ಇತರೆ ತಂತ್ರಜ್ಞಾನಗಳು ಪತ್ತೆಮಾಡದ ಸಮಸ್ಯೆಗಳನ್ನು ಸಹ ಪತ್ತೆ ಮಾಡುತ್ತದೆ. ಕಳೆದ ಎರಡು ವರ್ಷಗಳಿಂದ ಆಗ್ನೇಯ ಏಷ್ಯಾದಲ್ಲಿ AIIMS ದೆಹಲಿಯು ವರ್ಚುವಲ್ ಶವಪರೀಕ್ಷೆಯನ್ನು ಮಾಡುತ್ತಿರುವ ಏಕೈಕ ಸಂಸ್ಥೆಯಾಗಿದೆ ಎಂದು ಹೇಳಿದರು.