ಇತ್ತೀಚೆಗೆ ನೈಜ ಘಟನೆ ಹಾಗೂ ಸಾಧಕರ ಜೀವನ ಚರಿತ್ರೆ ಆಧಾರಿತ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಬಾಲಿವುಡ್ನಲ್ಲಿ ಬಯೋಪಿಕ್ ಸಿನಿಮಾ ಮಾಡುವುದೇ ಒಂದು ಟ್ರೆಂಡ್ ಆಗಿದೆ. ಇದೀಗ ಕರ್ನಾಟಕವಲ್ಲದೇ ದೇಶ ವಿದೇಶಗಳಲ್ಲಿ ಕಾಫಿ ಡೇ ಮೂಲಕ ಹೆಸರಾಗಿದ್ದ ಉದ್ಯಮಿ ವಿ.ಜಿ.ಸಿದ್ದಾರ್ಥ ಹೆಗ್ಡೆಯವರ ಬಯೋಪಿಕ್ ತೆರೆ ಮೇಲೆ ತರಲು ವೇದಿಕೆ ಸಜ್ಜಾಗಿದೆ.
ಬಾಲಿವುಡ್ ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗೂ ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಂಸ್ಥೆ ಕಾಫಿ ಕಿಂಗ್ ಸಿದ್ದಾರ್ಥ ಹೆಗ್ಡೆ ಅವರ ಜೀವನಾಧಾರಿತ ಚಿತ್ರ ಮಾಡಲು ಸಿದ್ಧವಾಗಿವೆ.
ಕಾಫಿ ಡೇ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಸಿದ್ದಾರ್ಥ ಹೆಗ್ಡೆ, ಉದ್ಯಮ ಲೋಕದಲ್ಲಿ ಅಗ್ರ ಸಾಧನೆ ಮಾಡಿದ್ದವರು. ಸಿದ್ದಾರ್ಥ ಕಟ್ಟಿದ ಕಾಫಿ ಡೇ ಸಾಮ್ರಾಜ್ಯ, ಅವರು ಸಾಗಿಬಂದ ದಾರಿ ನಿಜಕ್ಕೂ ಕೋಟ್ಯಂತರ ಯುವಕರು ಹಾಗೂ ಉದ್ಯಮಿಗಳಿಗೆ ಮಾದರಿ. ಆದರೆ, ಹೆಗ್ಡೆಯವರು 2019ರ ಜುಲೈ 31ರಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಜೀವನದ ಏಳು-ಬೀಳು, ಕಾಫಿ ಡೇ ಕಟ್ಟಿ ಬೆಳೆಸಿದ ರೀತಿ, ಹೀಗೆ ಹಲವಾರು ವಿಚಾರಗಳನ್ನು ಸಿನೆಮಾದಲ್ಲಿ ತೆರೆದಿಡಲಾಗುತ್ತಿದೆ.
-
Showcasing the life account of Coffee Mogul who brewed millions!
— T-Series (@TSeries) June 17, 2022 " class="align-text-top noRightClick twitterSection" data="
T-Series Films ,Prabhleen Sandhu & Almighty Motion Picture in association with Karma Media Entertainment are delighted to have acquired the AV rights to the biography of Entrepreneur par excellence,
---> pic.twitter.com/8MN0uzBkzv
">Showcasing the life account of Coffee Mogul who brewed millions!
— T-Series (@TSeries) June 17, 2022
T-Series Films ,Prabhleen Sandhu & Almighty Motion Picture in association with Karma Media Entertainment are delighted to have acquired the AV rights to the biography of Entrepreneur par excellence,
---> pic.twitter.com/8MN0uzBkzvShowcasing the life account of Coffee Mogul who brewed millions!
— T-Series (@TSeries) June 17, 2022
T-Series Films ,Prabhleen Sandhu & Almighty Motion Picture in association with Karma Media Entertainment are delighted to have acquired the AV rights to the biography of Entrepreneur par excellence,
---> pic.twitter.com/8MN0uzBkzv
ಮತ್ತೊಂದೆಡೆ ಸಿದ್ದಾರ್ಥ ಜೀವನದ ಕುರಿತಾಗಿ 'ಕಾಫಿ ಕಿಂಗ್' ಎಂಬ ಪುಸ್ತಕವನ್ನೂ ಬರೆಯಲಾಗುತ್ತಿದೆ. ಈ ಪುಸ್ತಕದಲ್ಲಿನ ವಿವರಗಳನ್ನು ಆಧಾರವಾಗಿಟ್ಟುಕೊಂಡು ಟಿ ಸಿರೀಸ್ ಮತ್ತು ಆಲ್ಮೈಟಿ ಮೋಷನ್ ಪಿಕ್ಚರ್ ಸಂಸ್ಥೆಗಳು ಸಿನಿಮಾಗೆ ಬಂಡವಾಳ ಹೂಡಲಿವೆ. ಜೊತೆಗೆ ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಕೂಡ ಕೈಜೋಡಿಸುತ್ತಿದೆ. ಈ ಕುರಿತು ಟಿ ಸಿರೀಸ್ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಸಾಕಷ್ಟು ಅಧ್ಯಯನ ನಡೆಸಿ ಕಾಫಿ ಕಿಂಗ್ ಪುಸ್ತಕ ಬರೆಯಲಾಗಿದೆ. ಮಹಾನ್ ಉದ್ಯಮಿ ಸಿದ್ದಾರ್ಥ ಹೆಗ್ಡೆ ಬದುಕಿನ ಬಗ್ಗೆ ಗೊತ್ತಿರದ ಅನೇಕ ವಿಚಾರಗಳನ್ನು ಪುಸ್ತಕ ಒಳಗೊಂಡಿದೆ ಎಂದು ನಿರ್ಮಾಪಕ ಪ್ರಭಲೀನ್ ಕೌರ್ ಸಂಧು ಹೇಳಿದ್ದಾರೆ. ಚಿತ್ರದಲ್ಲಿ ಹೆಗ್ಡೆಯವರ ಪಾತ್ರ ಯಾರು ಮಾಡಲಿದ್ದಾರೆ ಎಂಬುದರ ಬಗ್ಗೆ ಬಾಲಿವುಡ್ನಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸದ್ಯ ಹಿಂದಿ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕಾಫಿ ಕಿಂಗ್ ಜೀವನ ಆಧಾರಿತ ಸಿನಿಮಾ ಮಾಡುತ್ತಿರುವುದು ದೊಡ್ಡ ನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲಿ ಕೋಟ್ಯಂತರ ಗಳಿಕೆ; ರಕ್ಷಿತ್ ಸಾಲ ತೀರಿಸಿದ '777 ಚಾರ್ಲಿ'!