2019ರಲ್ಲಿ ಪ್ರಾರಂಭವಾದ ಚಿತ್ತಾರವೂ 10 ವರ್ಷ ಪೂರೈಸಿ, ದಶಕದ ಸಂಭ್ರಮ ಆಚರಿಸಿತ್ತು. ಸಿನಿ ವೃತ್ತಿಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಅವರನ್ನು ಗೌರವಿಸಲೆಂದೇ 'ಚಿತ್ತಾರ ಸ್ಟಾರ್ ಅವಾರ್ಡ್' ಕಾರ್ಯಕ್ರಮವನ್ನು 2019ರಿಂದಲೇ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷಗಳಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಪಟ್ಟಿ ಮಾಡಿ, ಪ್ರತಿ ವರ್ಗಕ್ಕೂ, ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಮತ್ತು ಗೌರವಿಸುವ ಯೋಜನೆ ಸ್ಟಾರ್ ಚಿತ್ತಾರದ್ದು.
ಕೋವಿಡ್ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಗೆ ಕಷ್ಟವಾಗಿದ್ದ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹಿಸುವ ಸಲುವಾಗಿ ಯಶಸ್ಸಿನ ಹೆಜ್ಜೆ ಇಟ್ಟಿತ್ತು. ಈ ವೇಳೆ, ಚಿತ್ರರಂಗಕ್ಕೆ ಹಾಗೂ ಸಿನಿರಸಿಕರಿಗೆ ಒಂದು ಪ್ರೋತ್ಸಾಹ ಮತ್ತು ಹುಮ್ಮಸ್ಸನ್ನು ನೀಡುವ ಉದ್ದೇಶದಿಂದ ಚಿತ್ತಾರ ಸ್ಟಾರ್ ಅವಾರ್ಡ್ 2022 ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವರ್ಷ ಚಿತ್ತಾರವು ತನ್ನ ಹದಿನಾಲ್ಕನೇ ವಾರ್ಷಿಕೋತ್ಸವವನ್ನು 'ಚಿತ್ತಾರ ಸ್ಟಾರ್ ಅವಾರ್ಡ್ 2023'ರ ಮೂಲಕ ಅದ್ದೂರಿಯಾಗಿ ನಡೆಸಿದೆ. ಚಿತ್ತಾರದ ಈ ಕಾರ್ಯಕ್ರಮಕ್ಕೆ ಚಂದನವನದ ಎಲ್ಲಾ ತಾರೆಯರ ಆಗಮನ ಮತ್ತಷ್ಟು ಮೆರುಗು ತಂದಿತ್ತು.
ಸ್ಟಾರ್ಗಳಿಂದ ಹಿಡಿದು ತಂತ್ರಜ್ಞರು ಸೇರಿದಂತೆ ಚಂದನವನ ತೋಟ ಚಿತ್ತಾರ ಅಂಗಳದಲ್ಲಿ ಗಮನ ಸೆಳೆಯಿತು. ಚಿತ್ತಾರದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಿಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಪ್ರಶಸ್ತಿ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದ್ದು, ಹಿರಿಯ ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಹಿರಿಯ ನಟರಾದ ಸುಂದರ್ ರಾಜ್, ಬಹುಭಾಷಾ ನಟಿಯಾದ ಭಾವನಾ ರಾವ್, ಸಿನಿಮಾ ಸಂಪರ್ಕಧಿಕಾರಿಯಾದ ಸುಧೀಂದ್ರ ವೆಂಕಟೇಶ್ ಹಾಗೂ ಚಿತ್ತಾರ ಪತ್ರಿಕೆಯ ತಂಡದವರು ಪ್ರಶಸ್ತಿ ಆಯ್ಕೆ ಮಾಡಿದ್ದಾರೆ.
ಇನ್ನೂ ವೋಟಿಂಗ್ಗೆಂದೇ ವಿಶೇಷ ವೆಬ್ಸೈಟ್ ಪ್ರಾರಂಭಿಸಲಾಗಿದ್ದು, ಆ ಮೂಲಕ ಪ್ರೇಕ್ಷಕರು ತಮ್ಮಿಷ್ಟದ ಚಿತ್ರ, ನಟ/ನಟಿ, ತಂತ್ರಜ್ಞರಿಗೆ ಆನ್ಲೈನ್ ಮೂಲಕ ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಬಿತ್ತಿಪತ್ರಗಳ ಮೂಲಕವೂ ಕರ್ನಾಟಕದಾದ್ಯಂತ ಶಾಲಾ- ಕಾಲೇಜು ಮತ್ತು ಪ್ರಮುಖ ಸ್ಥಳಗಳಲ್ಲಿ ವೋಟಿಂಗ್ ವ್ಯವಸ್ಥೆ ಮಾಡಿ, ಅದನ್ನೂ ಆಯ್ಕೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಈಶ್ವರ್ ಖಂಡ್ರೆ, ಸುನೀಲ್ ಕುಮಾರ್ ದೇಸಾಯಿ, ದತ್ತಣ್ಣ, ಸದಾಶಿವ ಶೆಣೈ, ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರು, ಶ್ರೀರಾಜೇಂದ್ರ ಸಿಂಗ್ ಬಾಬು, ವಿ.ಮನೋಹರ್, ವಾಣಿ ಹರಿಕೃಷ್ಣ, ಸುಮನಾ ಕಿತ್ತೂರು, ಪದ್ಮಾ ವಾಸಂತಿ, ಭಾವನಾರಾವ್, ಎ.ಪಿ.ಅರ್ಜುನ್, ಅನು ಪ್ರಭಾಕರ್, ವಿಜಯ ರಾಘವೇಂದ್ರ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮ.ಹರೀಶ್, ಉಮೇಶ್ ಬಣಕಾರ್, ಹಾಜರಿದ್ದು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ರಿಷಬ್ ಶೆಟ್ಟಿ, ಧ್ರುವ ಸರ್ಜಾ, ರಚಿತಾ ರಾಮ್, ಪಂಚಭಾಷಾ ತಾರೆ ಪ್ರಿಯಾಮಣಿ, ವೇದಿಕಾ, ಅಶಿಕಾ ರಂಗನಾಥ್, ಅಭಿಷೇಕ್ ಅಂಬರೀಶ್, ರೀಷ್ಮಾ ನಾಣಯ್ಯ, ನಿಶ್ವಿಕಾ ನಾಯ್ಡು, ಅಜನೀಶ್ ಲೋಕನಾಥ್, ಅರವಿಂದ್ ಕಶ್ಯಪ್, ನಿರ್ದೇಶಕರಾದ ಕಿರಣ್ ರಾಜ್, ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ, ಲಹರಿ ಸಂಸ್ಥೆಯ ವೇಲು ಅವರಿಗೂ ಸೇರಿದಂತೆ ಅನೇಕರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಒಟ್ಟು 50 ಪ್ರಶಸ್ತಿಗಳು ಇದ್ದವು. ಇನ್ನೂ ಭಾರತದ ಹೆಮ್ಮೆಯನ್ನು ಜಗತ್ತಿನೆತ್ತರಕ್ಕೆ ಏರಿಸಿ, ಆಸ್ಕರ್ ಅವಾರ್ಡ್ ಪಡೆದುಕೊಂಡ `ದಿ ಎಲಿಫೆಂಟ್ ವಿಸ್ಪರರ್ಸ್’ ಮತ್ತು `ಆರ್ಆರ್ಆರ್’ ಚಿತ್ರಗಳಿಗೆ ‘ಚಿತ್ತಾರ ಫ್ರೆಂಡ್ ಆಫ್ ಇಂಡಿಯಾ’ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: Dhoomam: ಇಂದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ 'ಧೂಮಂ' ಬಿಡುಗಡೆ