ಹೈದರಾಬಾದ್: ಸಂಕ್ರಾಂತಿ ಸಂಭ್ರಮದಲ್ಲಿರುವ ಟಾಲಿವುಡ್ನ ಮೆಗಾಸ್ಟಾರ್ ಚಿರಂಜೀವಿ ಹಬ್ಬದ ಸವಿ ನೆನಪಿಗಾಗಿ ತಮ್ಮ ತುಂಬು ಕುಟುಂಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ರಾಮ್ ಚರಣ್ ಅವರ ಕಿರಿಯ ಪುತ್ರಿ ಕ್ಲಿನ್ ಕಾರಾ ಕೊನಿಡೆಲಾ ಸೇರಿ ಎಲ್ಲರನ್ನು ಒಳಗೊಂಡಿದೆ.
-
పాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024 " class="align-text-top noRightClick twitterSection" data="
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZ
">పాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZపాడి పంటల,భోగ భాగ్యాల ఈ సంక్రాంతి

ಒಂದೇ ಫ್ರೇಮ್‌ನಲ್ಲಿ 'ಮೆಗಾ' ಫ್ಯಾಮಿಲಿ ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮೆಗಾ ಉತ್ತರಾಧಿಕಾರಿ ಕ್ಲಿನ್ ಕಾರಾ ಜನಿಸಿದ್ದರಿಂದ ಸಂಕ್ರಾಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ವರ್ಷ ವರುಣ್ ತೇಜ್ ಮತ್ತು ಲಾವಣ್ಯ ಅವರ ಮದುವೆ ಕುಟುಂಬಕ್ಕೆ ವಿಶೇಷತೆ ತರಿಸಿದೆ.
ಸಂಕ್ರಾಂತಿ ನಿಮಿತ್ತ ಬೆಂಗಳೂರಿನಲ್ಲಿರುವ ರಾಮ್ ಚರಣ್ ಅವರ ಫಾರ್ಮ್ಹೌಸ್ನಲ್ಲಿ ಸೇರಿದ್ದ 'ಮೆಗಾ' ಫ್ಯಾಮಿಲಿ, ಕಳೆದ ನಾಲ್ಕು ದಿನಗಳಿಂದ ಹಬ್ಬದ ಸಡಗರದಲ್ಲಿ ಮುಳುಗಿದೆ. ಚಿರಂಜೀವಿ ಮತ್ತು ಅಲ್ಲು ಅರವಿಂದ್ ಕುಟುಂಬದ ಸದಸ್ಯರು ಹೈದರಾಬಾದ್ನಿಂದ ಫಾರ್ಮ್‌ಹೌಸ್‌ಗೆ ತೆರಳಿದ್ದು ಎಲ್ಲರೂ ಸೇರಿ ಸಂಕ್ರಾಂತಿ ಆಚರಿಸಿದ್ದಾರೆ. ಈ ಸವಿ ನೆನಪಿಗಾಗಿ ನಟ ಚಿರಂಜೀವಿ ತಮ್ಮ ತುಂಬು ಕುಟುಂಬದ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
ಫ್ರೇಮ್‌ನಲ್ಲಿ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನ, ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ರೆಡ್ಡಿ, ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇದ್ದಾರೆ. ಮಹಿಳೆಯರು ಕೆಂಪು ಸೀರೆ ಧರಿಸಿದ್ದರೆ, ಪುರುಷರು ಕುರ್ತಾ-ಪೈಜಾಮಾ ಧರಿಸಿದ್ದನ್ನು ಫೋಟೋದಲ್ಲಿ ಕಾಣಬಹುದು. 'ಈ ಸಂಕ್ರಾಂತಿಯು ಪ್ರತಿ ಮನೆಯಲ್ಲೂ ಸಂತೋಷದ ಸುಗ್ಗಿಯನ್ನು ತರಲಿ, ಎಲ್ಲರಿಗೂ ಸಂಕ್ರಾಂತಿ ಶುಭಾಶಯಗಳು' ಎಂದು ತೆಲುಗಿನಲ್ಲಿ ಚೀರು ಶೀರ್ಷಿಕೆ ಬರೆದುಕೊಂಡಿದ್ದಾರೆ.
-
పాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024 " class="align-text-top noRightClick twitterSection" data="
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZ
">పాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZపాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZ
ಹಿಂದಿನ ಸಾಲಿನ ಮಧ್ಯದಲ್ಲಿ ನಾಗ ಬಾಬು, ಸಹೋದರ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ, ಮಧ್ಯದ ಸಾಲಿನಲ್ಲಿ ಪುತ್ರಿ ಕ್ಲಿನ್ ಕಾರಾ ಜೊತೆಗೆ ರಾಮ್ ಚರಣ್ ಮತ್ತು ಪತ್ನಿ ಉಪಾಸನ, ಬಳಿಕ ಅಲ್ಲು ಅರ್ಜುನ್ ದಂಪತಿ ಕುಳಿತಿರುವುದನ್ನು ಕಾಣಬಹುದು. ಅವರ ಪಕ್ಕದಲ್ಲಿ ಹೊಸ ಜೋಡಿ ವರುಣ್ ತೇಜ್ ನೇರಳೆ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡರೆ, ಲಾವಣ್ಯ ಕೆಂಪು ಸೀರೆಯೊಂದಿಗೆ ಕ್ಯಾಮರದಲ್ಲಿ ಸೆರೆಯಾಗಿದ್ದಾರೆ. ಕೆಳಗಿನ ಸಾಲಿನ ಎಡ ಭಾಗದಲ್ಲಿ ರಾಮ್ ಚರಣ್ ಅವರ ಸಾಕು ನಾಯಿ ರೈಮ್ ಅನ್ನು ಸಹ ಕಾಣಬಹುದು.
-
పాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024 " class="align-text-top noRightClick twitterSection" data="
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZ
">పాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZపాడి పంటల,భోగ భాగ్యాల ఈ సంక్రాంతి
— Chiranjeevi Konidela (@KChiruTweets) January 15, 2024
ప్రతి ఇంటా ఆనందాల పంటలు పండించాలని ఆశిస్తూ అందరికీ సంక్రాంతి శుభాకాంక్షలు ! pic.twitter.com/4rpfN0s6lZ
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಕುರುಚಲು ಕೂದಲು, ಸಣ್ಣ ಗಡ್ಡ, ಚಿಗುರು ಮೀಸೆ ಹೊಂದಿರುವ ಅಕಿರಾ ನಂದನ್ ವಿಶೇಷ ಆಕರ್ಷಣೆ ಎಂದು ಕೆಲವು ನೆಟಿಜನ್ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಪವನ್ ಕಲ್ಯಾಣ್ ಕೂಡ ಇದ್ದಿದ್ದರೆ ಫ್ರೇಮ್ ಪರ್ಫೆಕ್ಟ್ ಆಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳ ಹೊಗಳಿಕೆಗೆ ಸಾಕ್ಷಿಯಾಗಿರುವ ಕೊನಿಡೆಲಾ ಕುಟುಂಬದ 'ಮೆಗಾ' ಫ್ಯಾಮಿಲಿ ಫೋಟೋ ಜಾಲತಾಣದಲ್ಲಿ ಜಾಗ ಪಡೆದಿದೆ.
ಇದನ್ನೂ ಓದಿ: ಮಾಲ್ಡೀವ್ಸ್ ಟಿಕೆಟ್ ರದ್ದುಗೊಳಿಸಿ, ಲಕ್ಷದ್ವೀಪ ಪ್ರವಾಸ ಕೈಗೊಂಡ ನಟ ನಾಗಾರ್ಜುನ