ETV Bharat / entertainment

ನಿರ್ದೇಶಕ ರೋಹಿತ್ ಜುಗರಾಜ್​ಗೆ ಜೀವ ಬೆದರಿಕೆ

Chamak director Rohit Jugraj: ಚಮಕ್ ನಿರ್ದೇಶಕ ರೋಹಿತ್ ಜುಗರಾಜ್ ತಮಗೆ ಬೆದರಿಕೆಗಳು ಬರುತ್ತಿವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

Chamak director Rohit Jugraj getting threat calls
ನಿರ್ದೇಶಕ ರೋಹಿತ್ ಜುಗರಾಜ್​ಗೆ ಜೀವ ಬೆದರಿಕೆ
author img

By ETV Bharat Karnataka Team

Published : Dec 19, 2023, 7:37 AM IST

ಇತ್ತೀಚೆಗೆ ಬಿಡುಗಡೆಯಾದ 'ಚಮಕ್' ಸಿನಿಮಾದ ನಿರ್ದೇಶಕ ರೋಹಿತ್ ಜುಗರಾಜ್​​​​​ ತಮ್ಮ ವೈಯಕ್ತಿಕ, ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಂಜಾಬ್‌ ಸಿನಿಮಾ ಕ್ಷೇತ್ರದ ಜನಪ್ರಿಯನಿರ್ದೇಶಕ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ನಿರ್ದೇಶಕನ ಹೇಳಿಕೆಗೆ ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬರುತ್ತಿರುವ ಬೆದರಿಕೆಗಳ ಹಿಂದಿನ ಕಾರಣವನ್ನೂ ಸಹ ನಿರ್ದೇಶಕರು ವಿವರಿಸಿದ್ದಾರೆ. ಪಂಜಾಬಿ ಉದ್ಯಮದ ಕರಾಳ ಮುಖವನ್ನು ತೋರಿಸಿದ್ದಕ್ಕಾಗಿ ತನಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಎಂಬುದಾಗಿ ಗಾಯಕ ತಿಳಿಸಿದ್ದಾರೆ. 'ಚಮಕ್' ಸರಣಿಯು ಪಂಜಾಬಿ ಸಂಗೀತ ಉದ್ಯಮ ಮತ್ತು ಕ್ಷೇತ್ರದೊಳಗಿನ ಘಟನೆಗಳ ಮೇಲೆ ಬೆಳಕು ಚೆಲ್ಲುತ್ತದೆ.

'ಬೆದರಿಕೆ ಕರೆಗಳು ಬರುತ್ತಿದ್ದರೂ, ನಿರ್ಭೀತವಾಗಿ ಕಥೆ ಹೇಳುವ ನನ್ನ ಕೆಲಸದ ಬದ್ಧತೆ ಅಚಲವಾಗಿ ಉಳಿದುಕೊಂಡಿದೆ. ನಾನು ಸತ್ಯದ ಶಕ್ತಿಯನ್ನು ಬಹಳ ನಂಬುತ್ತೇನೆ. ನಮ್ಮ ಕಥೆಯನ್ನು ಹತ್ತಿಕ್ಕಲು ಬಯಸುವ ನಕಾರಾತ್ಮಕ ಶಕ್ತಿಗ ಹೆದರದೆ ಕೆಲಸ ಮುಂದುವರಿಸುತ್ತೇನೆ. ಅಂತಹ ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ನಿರ್ಭೀತಿಯಿಂದ ಕಥೆ ಹೇಳುವ ನಿರ್ದೇಶಕ ನಾನು' ಎಂದು ಹೇಳಿದ್ದಾರೆ.

ಇದನ್ನೂ ಓದಿ: 2024ಕ್ಕೆ ತೆರೆ ಮೇಲೆ ಅಬ್ಬರಿಸಲು ಸಿದ್ಧಗೊಳ್ಳುತ್ತಿದೆ ಬ್ಲಾಕ್​ಬಸ್ಟರ್​ ಸಿನಿಮಾಗಳ ಸೀಕ್ವೆಲ್ಸ್​

ಇಲ್ಲಿ ನಾನು ಯಾರನ್ನೂ ಎಕ್ಸ್ ಪೋಸ್ ಮಾಡುತ್ತಿಲ್ಲ. ಬದಲಾಗಿ, ಇಂಡಸ್ಟ್ರಿಯ ನೈಜ ಮುಖವನ್ನಷ್ಟೇ ಬಹಿರಂಗಪಡಿಸುತ್ತಿದ್ದೇನೆ. 'ಬೆಳಕಿನ' ಹಿಂದೆ ಅಂಧಕಾರ ಮತ್ತು ಉತ್ಸಾಹದ ಹಿಂದೆ ಅಸೂಯೆ ಇದೆ. ಯಾವುದೇ ಕಲಾವಿದ ತನ್ನ ಕಲೆಯನ್ನು ಪ್ರಸ್ತುತಪಡಿಸುವ ಮಾರ್ಗದಲ್ಲಿ ಸಾವನ್ನಪ್ಪುವುದನ್ನು ನಾನು ಎಂದಿಗೂ ಬಯಸುವುದಿಲ್ಲ. ಕಲಾವಿದರ ಕಲೆ ಎಂದಿಗೂ ಕೊಲೆಯಾಗಬಾರದು. ಚಿತ್ರೋದ್ಯಮದ ಹೊಳಪು ಮತ್ತು ಗ್ಲಾಮರ್‌ನ ಹಿಂದಿನ ವಾಸ್ತವತೆಯನ್ನು ಬಹಿರಂಗಪಡಿಸುವ ಬದ್ಧತೆಯಿಂದ ನನ್ನ ಕೆಲಸವವನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 'ಡಂಕಿ' ಬಿಡುಗಡೆಗೆ ದಿನಗಣನೆ: ಶಾರುಖ್​ ಸಿನಿಮಾದ ಮತ್ತೊಂದು ಹಾಡು​ ರಿಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.