ETV Bharat / entertainment

'ಪಾದರಾಯ' ಸಿನಿಮಾದಿಂದ ಹೊರ ನಡೆದ ಚಕ್ರವರ್ತಿ ಚಂದ್ರಚೂಡ..ಯಾಕೆ ಗೊತ್ತಾ?

author img

By

Published : Feb 28, 2023, 2:08 PM IST

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರೀಕರಣಕ್ಕೆ ಸಿದ್ಧವಾಗಿದ್ದ 'ಪಾದರಾಯ' ಸಿನಿಮಾದಿಂದ ಚಕ್ರವರ್ತಿ ಚಂದ್ರಚೂಡ ಹೊರನಡೆದಿದ್ದಾರೆ.

padaraya
ಪಾದರಾಯ

ರಿಯಾಲಿಟಿ ಶೋ ಹಾಗೂ ಕೆಲ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಚಕ್ರವರ್ತಿ ಚಂದ್ರಚೂಡ ಅವರು ನಟ ಮತ್ತು ನಿರ್ದೇಶಕ ನಾಗಶೇಖರ್ ಜೊತೆ 'ಪಾದರಾಯ' ಎಂಬ ಸಿನಿಮಾ ಮಾಡುತ್ತಿರುವುದು ಸ್ಯಾಂಡಲ್​ವುಡ್​ನಲ್ಲಿ ಸುದ್ದಿಯಲ್ಲಿದೆ. ಅಷ್ಟೇ ಅಲ್ಲದೆ ಈ ಚಿತ್ರಕ್ಕೆ ನಾಯಕಿಯಾಗಿ ತೆಲುಗು ಖ್ಯಾತ ಗಾಯಕಿ ಮಂಗ್ಲಿ ಕೂಡ ಫೈನಲ್ ಆಗಿದ್ದರು‌. ಆದರೆ, ಈ ಸಿನಿಮಾ‌ ಮೂಲಕ ನಿರ್ದೇಶಕ ಪಟ್ಟ ಅಲಂಕರಿಸಲು‌ ರೆಡಿಯಾಗಿದ್ದ ಚಕ್ರವರ್ತಿ ಚಂದ್ರಚೂಡ ಚಿತ್ರೀಕರಣದ ಮುನ್ನವೇ ಸಿನಿಮಾದಿಂದ ಹೊರನಡೆದಿದ್ದಾರೆ. ನಟ‌, ನಿರ್ದೇಶಕ ನಾಗಶೇಖರ್ ನಡುವಿನ ಮನಸ್ತಾಪ ಹಾಗೂ ಹಣಕಾಸಿನ ಅವ್ಯವಹಾರದ ವಿಷಯಕ್ಕಾಗಿ ನಾನು 'ಪಾದರಾಯ' ಚಿತ್ರದಿಂದ ಹೊರ ಬಂದಿದ್ದೇನೆ ಎಂದು ನಿರ್ದೇಶಕ ಚಂದ್ರಚೂಡ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಪಾದರಾಯ ಸಿನಿಮಾ ಮಾಡುವ ಎಲ್ಲ ತಯಾರಿ ಮಾಡಿಕೊಂಡಿದ್ದೆ. ಯಾರಿಗೂ ಅಡ್ವಾನ್ಸ್ ಕೊಡದೇ ಇದ್ದರೂ, ಎಲ್ಲರನ್ನು ಒಟ್ಟಾಗಿಸಿಕೊಂಡು ಸಿನಿಮಾ ಕೆಲಸ ಶುರು ಮಾಡಿದ್ದೆ. ಆದರೆ, ನಾಗಶೇಖರ್ ಮತ್ತು ಅವರಿಗೆ ಗೊತ್ತಿರುವ ಕೆಲವರು ಸಿನಿಮಾ ಹೆಸರಿನಲ್ಲಿ ಹಣ ಮಾಡಲು ಶುರು ಮಾಡಿರುವ ವಿಷಯ ನನ್ನ ಗಮನಕ್ಕೆ ಬಂತು. ಈ ಸಿನಿಮಾ ಹೆಸರಿನಲ್ಲಿ ಅವರು ಸಾಲ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಯಿತು. ಒಬ್ಬ ನಿರ್ದೇಶಕನ ಗಮನಕ್ಕೆ ಬಾರದೇ ವ್ಯವಹಾರಗಳು ನಡೆಯುತ್ತಿರುವುದನ್ನು ಗಮನಿಸಿ ನಾನು ಸಿನಿಮಾದಿಂದ ಹೊರ ನಡೆದಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಪುನೀತ್​ ಸಿನಿಮಾಗೆ ನಿರ್ದೇಶನ ಮಾಡುವ ಕನಸು ಈಡೇರಲಿಲ್ಲ: ಉಪೇಂದ್ರ

ಇನ್ನೂ ಸಿನಿಮಾ ಹೆಸರಿನಲ್ಲಿ ನಡೆದಿರುವ ವ್ಯವಹಾರಗಳು ಮತ್ತು ನಾಗಶೇಖರ್ ಹಾಗೂ ತಂಡ ಮಾಡಿರುವ ಕೆಲಸಗಳ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ. ಅವರು ಮಾಡಿರುವ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ನಾನು ಸ್ಪಷ್ಟ ಪಡಿಸಬೇಕಿತ್ತು. ಜೊತೆಗೆ ನನ್ನ ಕಥೆಯನ್ನು ಭದ್ರಪಡಿಸಿಕೊಳ್ಳಬೇಕಿತ್ತು. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದರು.

ಇದರ ಜೊತೆಗೆ ಪಾದರಾಯ ಸಿನಿಮಾದಲ್ಲಿ ಉದ್ಭವಿಸಿರುವ ಸಮಸ್ಯೆ ಬಗ್ಗೆ ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಮೂರು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಈ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಪ್ಲಾನ್​: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಾದರಾಯ ಸಿನಿಮಾ ಮಾಡಲಾಗುತ್ತಿದೆ ಎಂದು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಜೊತೆಗೆ ಈ ಸಿನಿಮಾವನ್ನು 'ವಿಕ್ರಾಂತ್ ರೋಣ' ಖ್ಯಾತಿಯ ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ನಿರ್ಮಿಸುತ್ತಿಲ್ಲ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಬಳಿಕ ಕಬ್ಜ ಚಿತ್ರದ ನಿರ್ದೇಶಕ ಆರ್​ ಚಂದ್ರ ಪಾದರಾಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದಾಗಿ ಸ್ವತಃ ಚಕ್ರವರ್ತಿ ಚಂದ್ರಚೂಡ ಹೇಳಿದ್ದರು. ಇದೀಗ ಮತ್ತೆ ಪಾದರಾಯ ಸಿನಿಮಾ ನಾಯಕ‌ ನಟ‌ ನಾಗಶೇಖರ್ ಅವರಿಂದ ಆಗಿರುವ ಹಣಕಾಸಿನ ಸಮಸ್ಯೆ ವಿರುದ್ದ ಚಂದ್ರಚೂಡ ಅವರೇ ಹೊರ ಬಂದಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಹಾಗು ಕೀರವಾಣಿ ಅವರಿಂದ ಮೆಚ್ಚುಗೆ ಪಡೆದ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ: ಶತಕದ ಖುಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.