ETV Bharat / entertainment

ತ್ರಿಶಾ ಬಗ್ಗೆ ಅವಹೇಳನಕಾರಿ ಹೇಳಿಕೆ: ಮನ್ಸೂರ್​ ಅಲಿ ಖಾನ್​ಗೆ ಚಿತ್ರರಂಗದಿಂದ ಛೀಮಾರಿ - ಮನ್ಸೂರ್​ ಅಲಿ ಖಾನ್ ಲೇಟೆಸ್ಟ್ ನ್ಯೂಸ್

Mansoor Ali Khan comments on Trisha Krishnan: ನಟಿ ತ್ರಿಶಾ ಕೃಷ್ಣನ್ ಬಗ್ಗೆ ಮನ್ಸೂರ್​ ಅಲಿ ಖಾನ್ ಅವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.

Mansoor Ali Khan on Trisha Krishnan
ತ್ರಿಶಾ ಬಗ್ಗೆ ಮನ್ಸೂರ್​ ಅಲಿ ಖಾನ್ ಹೇಳಿಕೆ
author img

By ETV Bharat Karnataka Team

Published : Nov 19, 2023, 4:30 PM IST

Updated : Nov 19, 2023, 4:37 PM IST

ಇತ್ತೀಚಿನ ಸಂದರ್ಶನವೊಂದರಲ್ಲಿ ಸೌತ್​ ಸಿನಿಮಾ ರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ನಟ ಮನ್ಸೂರ್ ಅಲಿ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಖ್ಯಾತನಾಮರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಿರ್ದೇಶಕ ಲೋಕೇಶ್ ಕನಕರಾಜ್, ಗಾಯಕಿ ಚಿನ್ಮಯಿ ಶ್ರೀಪಾದ, ನಟಿ ಖುಷ್ಬು ಸುಂದರ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್​​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

  • A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…

    — Trish (@trishtrashers) November 18, 2023 " class="align-text-top noRightClick twitterSection" data=" ">

ತ್ರಿಶಾ ಕೃಷ್ಣನ್ ಅಸಮಧಾನ: ನಟಿ ತ್ರಿಶಾ ಕೃಷ್ಣನ್ ಅವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ ಎಕ್ಸ್​ನಲ್ಲಿ ಮನ್ಸೂರ್ ಅಲಿ ಖಾನ್​​ ಅವರ ಹೇಳಿಕೆಗಳಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ನನ್ನ ಬಗ್ಗೆ ಮನ್ಸೂರ್ ಅಲಿ ಖಾನ್ ನೀಡಿದ ಅಗೌರವದ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಕಾಮೆಂಟ್​ಗಳು ಲೈಂಗಿಕವಾಗಿ, ಅಗೌರವವಾಗಿರುವುದಲ್ಲದೇ ಅತ್ಯಂತ ಕಳಪೆಯಾಗಿದೆ. ಅಂತಹ ನಡವಳಿಕೆಯುಳ್ಳವರೊಂದಿಗೆ ಕೆಲಸ ಮಾಡುವ ಉದ್ದೇಶವಿಲ್ಲ. ಮುಂದಿನ ಯಾವುದೇ ಸಿನಿಮಾಗಳಲ್ಲಿ ಅವರೊಂದಿಗೆ ನಟಿಸುವುದಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

ಮನ್ಸೂರ್​ ಹೇಳಿದ್ದೇನು? ವರದಿಗಳ ಪ್ರಕಾರ, ಸಂದರ್ಶನವೊಂದರಲ್ಲಿ ನಟ ಮನ್ಸೂರ್ ಅಲಿ ಖಾನ್ ಅವರು ನಟಿ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಚಿತ್ರದಲ್ಲಿ ತ್ರಿಷಾ ಅವರೊಂದಿಗೆ ಆತ್ಮೀಯ ದೃಶ್ಯಗಳಿಲ್ಲದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ಇತರೆ ನಟಿಯರೊಂದಿಗಿನ ಆತ್ಮೀಯ ದೃಶ್ಯಗಳ (intimate scenes) ಬಗ್ಗೆ ಉಲ್ಲೇಖಿಸಿ, ತ್ರಿಷಾ ಜೊತೆ ಅಂತಹ ದೃಶ್ಯವಿರಲಿಲ್ಲ ಎಂದು ತಮ್ಮ ನಿರಾಶೆ ವ್ಯಕ್ತಪಡಿಸಿದ್ದರು.

  • Disheartened and enraged to hear the misogynistic comments made by Mr.Mansoor Ali Khan, given that we all worked in the same team. Respect for women, fellow artists and professionals should be a non-negotiable in any industry and I absolutely condemn this behaviour. https://t.co/PBlMzsoDZ3

    — Lokesh Kanagaraj (@Dir_Lokesh) November 18, 2023 " class="align-text-top noRightClick twitterSection" data=" ">

ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್: ತಮಿಳು ಚಲನಚಿತ್ರೋದ್ಯಮದಲ್ಲಿ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳುವುದರ ಬಗ್ಗೆ ಧ್ವನಿಯೆತ್ತುವ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಮನ್ಸೂರ್ ಅಲಿ ಖಾನ್ ನಡವಳಿಕೆಯನ್ನು ಖಂಡಿಸಿದ್ದಾರೆ. ಪ್ರಭಾವಿ ಪುರುಷರ ಇಂತಹ ವರ್ತನೆಗಳು ಏಕೆ ಪ್ರಶ್ನಿಸಲ್ಪಡುವುದಿಲ್ಲ ಎಂದು ಕೇಳಿದ್ದಾರೆ. ಮನ್ಸೂರ್ ಅವರ ಈ ಹಿಂದಿನ ಘಟನೆಗಳನ್ನು ಹಂಚಿಕೊಂಡು, ಈ ಉದ್ಯಮದಲ್ಲಿ ಇದು ಸಾಮಾನ್ಯವಾಗಿಬಿಟ್ಟಿದೆ ಎಂದು ಕಿಡಿಕಾರಿದ್ದಾರೆ.

  • As a member of NCW, I have already taken up the issue of Mansoor Ali khan with my senior and will be taking an action on it. Nobody can get away with such a filthy mind. I stand with @trishtrashers and my other colleagues where this man speaks in such a sexist disgusting mindset…

    — KhushbuSundar (@khushsundar) November 19, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ಧೂಮ್' ಸಿನಿಮಾ ನಿರ್ದೇಶಕ ಸಂಜಯ್ ಗಧ್ವಿ ಹೃದಯಾಘಾತದಿಂದ ನಿಧನ

ಖುಷ್ಬು ಸುಂದರ್ ಕಿಡಿ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ಹಿರಿಯ ನಟಿ ಖುಷ್ಬು ಸುಂದರ್ ಅವರು ಮನ್ಸೂರ್ ಅವರ ಸ್ತ್ರೀದ್ವೇಷದ ಹೇಳಿಕೆಗಳಿಗಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತಮ್ಮನ್ನು, ತಮ್ಮ ಸಹೋದ್ಯೋಗಿಗಳನ್ನು ಒಳಗೊಂಡಂತೆ ಮಹಿಳೆಯರನ್ನು ಅವಮಾನಿಸುವ ಇಂತಹ ನಡವಳಿಕೆಗೆ ಕಡಿವಾಣ ಹಾಕುವ ಬಗ್ಗೆ ದನಿ ಎತ್ತಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂಗೆ ತಾರೆಗಳ ಮೆರುಗು: ಅನುಷ್ಕಾ, ದೀಪ್​ವಿರ್​ ಸೇರಿ ಹಲವರು- ವಿಡಿಯೋ

ಲೋಕೇಶ್ ಕನಕರಾಜ್ ಖಂಡನೆ: ತ್ರಿಶಾ ಅವನ್ನೊಳಗೊಂಡ ಲಿಯೋ ಸಿನಿಮಾ ನಿರ್ದೇಶಿಸಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಸಹ ಮನ್ಸೂರ್​ ಹೇಳಿಕೆ ಖಂಡಿಸಿದ್ದಾರೆ. ಎಲ್ಲರನ್ನು (ಸಹೋದ್ಯೋಗಿ) ಗೌರವಿಸುವ ಮತ್ತು ಮನರಂಜನಾ ಉದ್ಯಮದಲ್ಲಿ ಯಾವುದೇ ರೀತಿಯ ಅಗೌರವವನ್ನು ಖಂಡಿಸುವ ಅಗತ್ಯತೆ ಬಗ್ಗೆ ಒತ್ತಿಹೇಳಿದರು. ಎಕ್ಸ್​​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ನಿರ್ದೇಶಕರು, "ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದೇವೆ. ಆದರೆ ಮನ್ಸೂರ್ ಅಲಿ ಖಾನ್ ಅವರ ಸ್ತ್ರೀದ್ವೇಷದ ಕಾಮೆಂಟ್‌ಗಳನ್ನು ಕೇಳಿ ಅಸಮಾಧಾನಗೊಂಡಿದ್ದೇನೆ, ಕೋಪಗೊಂಡಿದ್ದೇನೆ. ಮಹಿಳೆಯರು, ಸಹ ಕಲಾವಿದರು ಮತ್ತು ವೃತ್ತಿಪರರಿಗೆ ಗೌರವ ನೀಡಬೇಕು. ನಾನು ಮನ್ಸೂರ್ ಅವರ ಈ ನಡವಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಗಳು ತ್ರೀವ್ರ ವಿರೋಧಕ್ಕೆ ಒಳಗಾಗಿದೆ. ಮನರಂಜನಾ ಉದ್ಯಮದಲ್ಲಿ ಗೌರವಕರ ವಾತಾವರಣದ ತುರ್ತು ಅಗತ್ಯತೆ ಬಗ್ಗೆ ಸ್ಟಾರ್ ಸೆಲೆಬ್ರಿಟಿಗಳು ದನಿ ಎತ್ತುತ್ತಿದ್ದಾರೆ.

Last Updated : Nov 19, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.