ETV Bharat / entertainment

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ದಂಪತಿ‌ ವಿರುದ್ಧ ಪ್ರಕರಣ ದಾಖಲು - Ashok Kashyap couple

ನಿಂದನೆ, ಹಲ್ಲೆ ಆರೋಪದಡಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

case filed against Karnataka Film Academy President Ashok Kashyap couple
ಅಶೋಕ್ ಕಶ್ಯಪ್ ದಂಪತಿ‌ ವಿರುದ್ಧ ಪ್ರಕರಣ ದಾಖಲು
author img

By

Published : May 7, 2023, 12:54 PM IST

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ನಿರ್ಮಾಪಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್ ಹಾಗೂ ಅವರ ಪತ್ನಿ ರೇಖಾರಾಣಿ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

ಮಾರ್ಚ್‌ 25ರಂದು ಸಂಜೆ 6.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದ ಒರಾಯನ್‌ ಮಾಲ್‌ಗೆ ತೆರಳಿದ್ದ ತನಗೆ ಅಶೋಕ್‌ ಕಶ್ಯಪ್‌ ಹಾಗೂ ಅವರ ಪತ್ನಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಮತ್ತು ಹೊರಗೆ ತಳ್ಳಿದ್ದಾರೆ ಎಂದು ನಿರ್ಮಾಪಕ ಕುಮಾರ್.ಎಸ್ ಆರೋಪಿಸಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: 'ಕಿರುತೆರೆ' ಈ ನಟಿಯರಿಗೆ ವರ್ಚಸ್ಸಿನ ಜೊತೆಗೆ ಜೀವನವನ್ನೇ ಬದಲಾಯಿಸಿತು..

ನಗರದ 39ನೇ ಎಸಿಎಂಎಂ ನ್ಯಾಯಾಲಯದ ಆದೇಶದನ್ವಯ ಸುಬ್ರಹ್ಮಣ್ಯನಗರ ಠಾಣಾ ಪೊಲೀಸರು ಅಶೋಕ್ ಕಶ್ಯಪ್ ದಂಪತಿ ವಿರುದ್ಧ ಐಪಿಸಿ ಸೆಕ್ಷನ್ 34, 324, 326 ಹಾಗೂ 506 (B) ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 10 ವರ್ಷದ ಬಳಿಕ ಸೂಪರ್​ ಹಿಟ್​ ಸಿನಿಮಾದ ಸೀಕ್ವೆಲ್​​: ಮತ್ತೆ ಪ್ರೀತಿಯಲ್ಲಿ ದೀಪಿಕಾ-ರಣ್​ಬೀರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.