ETV Bharat / entertainment

ಮುಂದಿನ ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ತೆರೆಗೆ: ಧನುಷ್, ಶಿವಣ್ಣನ ಸಿನಿಮಾ ಮೇಲೆ ಪ್ರೇಕ್ಷಕರ ಕುತೂಹಲ - dhanush

ಮುಂದಿನ ಸಂಕ್ರಾಂತಿ ಸಂದರ್ಭ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಲಿದೆ.

captain miller release date
ಕ್ಯಾಪ್ಟನ್ ಮಿಲ್ಲರ್ ರಿಲೀಸ್​ ಡೇಟ್​
author img

By ETV Bharat Karnataka Team

Published : Nov 9, 2023, 1:38 PM IST

ಸೌತ್​ ಸೂಪರ್ ಸ್ಟಾರ್ ನಟ ಧನುಷ್ ಹಾಗೂ ಕರುನಾಡಿನ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಕ್ಯಾಪ್ಟನ್ ಮಿಲ್ಲರ್ ಬಿಡುಗಡೆ ದಿನಾಂಕ ಘೋಷಣೆ: ಇದೀಗ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಆಫಿಶಿಯಲ್ ರಿಲೀಸ್​ ಡೇಟ್​​ ಅನೌನ್ಸ್​ ಆಗಿದೆ. ಈಗಾಗಲೇ ದಕ್ಷಿಣ ಭಾರತದ ಹಲವು ಬಹುನಿರೀಕ್ಷಿತ ಸಿನಿಮಾಗಳು ತೆರೆಕಾಣಲು ದಿನ ನಿಗದಿ ಮಾಡಿವೆ. ಅವುಗಳ ಸಾಲಿಗೀಗ 'ಕ್ಯಾಪ್ಟನ್ ಮಿಲ್ಲರ್' ಕೂಡ ಸೇರಿಕೊಂಡಿದೆ.

ಸಂಕ್ರಾತಿ ಉಡುಗೊರೆಯಾಗಿ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆ: ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿ 'ಕ್ಯಾಪ್ಟನ್ ಮಿಲ್ಲರ್' ನಿರ್ಮಾಣಗೊಳ್ಳುತ್ತಿದೆ. ಬುಧವಾರದಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ನಿರ್ಮಾಪಕರು ತಮ್ಮ ಮುಂದಿನ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇದಕ್ಕೂ ಮೊದಲು, ಡಿಸೆಂಬರ್ 15 ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಸಿನಿಮಾ 2024ರ ಸಂಕ್ರಾತಿ ಸಂದರ್ಭ ಬಿಡುಗಡೆಯಾಗಲಿದೆ.

ಶಿವಣ್ಣನ ಎರಡನೇ ತಮಿಳು ಸಿನಿಮಾ: ಕ್ಯಾಪ್ಟನ್ ಮಿಲ್ಲರ್ ಸಿನಿಮಾವನ್ನು 1930-40ರ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರೀಕರಿಸಲಾಗಿದೆ. ಜೈಲರ್ ಬಳಿಕ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ ನಟಿಸಿರುವ ಎರಡನೇ ತಮಿಳು ಸಿನಿಮಾವಿದು. ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್, ನಿವೇದಿತಾ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಬಿಗ್‌ ಬಜೆಟ್ ಸಿನಿಮಾ: 'ಕ್ಯಾಪ್ಟನ್ ಮಿಲ್ಲರ್'ಗೆ ಅರುಣ್ ಮಾದೇಶ್ವರನ್ ಆ್ಯಕ್ಷನ್​ ಕಟ್ ಹೇಳಿದ್ದು, ಧನುಷ್ ವೃತ್ತಿಜೀವನದಲ್ಲಿ ಅತ್ಯಂತ ಬಿಗ್‌ ಬಜೆಟ್ ಸಿನಿಮಾವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಪ್ರೇಕ್ಷಕರ ಮನಸೂರೆಗೊಂಡಿದೆ. ಈ ಪ್ಯಾನ್ ಇಂಡಿಯಾ ಚಲನಚಿತ್ರವು 2024ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ನಿನ್ನೆ ಘೋಷಿಸಿದ್ದು, ಸಿನಿಮಾ ಮೇಲಿನ ಕಾತರ ಹೆಚ್ಚಾಗಿದೆ.

ಇದನ್ನೂ ಓದಿ: ಶಾರುಖ್​ ಪುತ್ರಿಯ 'ದಿ ಆರ್ಚೀಸ್'​ ಟ್ರೇಲರ್​ ರಿಲೀಸ್​: ಬಾಲಿವುಡ್​ ಸ್ಟಾರ್​ಗಳ ಮಕ್ಕಳು, ಮೊಮ್ಮಕ್ಕಳ ಸಂಗಮ

ಟಿ ಜಿ ತ್ಯಾಗರಾಜನ್, ಸೆಂಥಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಗೆ ಜಿ ಸರವಣನ್ ಮತ್ತು ಸಾಯಿ ಸಿದ್ಧಾರ್ಥ್ ಸಹ ಹಣ ಹಾಕಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದು, ಸಿದ್ಧಾರ್ಥ್ ಅವರ ಕ್ಯಾಮರಾ ವರ್ಕ್ ಇದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಂತ್ಯಗೊಂಡ ದಾಂಪತ್ಯ, ಅನಾರೋಗ್ಯ: ಕಠಿಣ ದಿನಗಳ ಬಗ್ಗೆ ಸಮಂತಾ ರುತ್​​ ಪ್ರಭು ಮನದಾಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.