ETV Bharat / entertainment

ಹಾಸ್ಟೆಲ್ ಹುಡುಗರಿಂದ ಪ್ರೇಕ್ಷಕರಿಗೆ ಬಿಗ್​ ಆಫರ್​.. ಬುಕ್​ ಮೈ ಶೋನಲ್ಲಿ 2 ಟಿಕೆಟ್​ ತಗೊಂಡ್ರೆ 1 ಫ್ರೀ - ಈಟಿವಿ ಭಾರತ ಕನ್ನಡ

Hostel Hudugaru bekagiddare cinema: ಬುಕ್​ ಮೈ ಶೋನಲ್ಲಿ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾದ 2 ಟಿಕೆಟ್ ತೆಗೆದುಕೊಂಡರೆ 1 ಉಚಿತವಾಗಿ ಕೊಡುತ್ತಿದ್ದೇವೆ ಎಂದು ಚಿತ್ರತಂಡ ಹೇಳಿದೆ.

hostel hudugaru bekagiddare
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ
author img

By

Published : Aug 8, 2023, 5:06 PM IST

ಯುವ ಪ್ರತಿಭೆಗಳ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಬಳಿಕ ಅಭಿಮಾನಿಯಾಗಿ ಈ ಸಿನಿಮಾದ ಸಕ್ಸಸ್ ಸೆಲೆಬ್ರೇಟ್ ಮಾಡುವುದಾಗಿ ಹೇಳಿದರು.

hostel hudugaru bekagiddare
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ

'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಸಕ್ಸಸ್ ಬಗ್ಗೆ ಮಾತನಾಡಿದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ "ನಮ್ಮ ಸಿನಿಮಾ ಗೆಲ್ಲೋದಿಕ್ಕೆ ಕಾರಣ ರಿಪೀಟ್ ಆಡಿಯನ್ಸ್. ಡೈಲಾಗ್ ಮಿಸ್ ಆಗಿದ್ದಕ್ಕೆ ಸುಮಾರು ಜನ 2 ರಿಂದ 3 ಬಾರಿ ಚಿತ್ರವನ್ನು ನೋಡಿದ್ದಾರೆ. ಮೊದಲ 2 ವಾರದಲ್ಲಿ 12 ಲಕ್ಷ ಜನ ಸಿನಿಮಾ ವೀಕ್ಷಿಸಿದ್ದಾರೆ. ಇನ್ನೂ 20 ಲಕ್ಷ ಜನ ನೋಡ್ತಾರೆ ಎಂಬ ಭರವಸೆ ಇದೆ. ಹೊಸ ಸಿನಿಮಾಗೆ ಅದ್ಭುತ ರೆಸ್ಪಾನ್ಸ್. ಅಪ್ಪು ಸರ್ ಆಶೀರ್ವಾದ, ಇಡೀ ತಂಡದ ಎಫರ್ಟ್​ಗೆ ಸಿನಿಮಾ ಹೌಸ್ ಫುಲ್ ಆಗಿ ಓಡುತ್ತಿದೆ. ಬುಕ್ ಮೈ ಶೋನಲ್ಲಿ 2 ಟಿಕೆಟ್ ತೆಗೆದುಕೊಂಡರೆ 1 ಉಚಿತವಾಗಿ ಕೊಡುತ್ತಿದ್ದೇವೆ" ಎಂದು ತಿಳಿಸಿದರು.

"ನಮ್ಮ ಸಿನಿಮಾ ತುಂಬಾ ಚೆನ್ನಾಗಿ ಓಡುತ್ತಿದೆ. ಈ ಚಿತ್ರ ಶುರು ಮಾಡಲು ಕಾರಣ ಅಪ್ಪು ಸರ್. ಅವರ ಆಶೀರ್ವಾದದಿಂದ ಶುರು ಮಾಡಿದ್ದು, ಅವರ ಆಶೀರ್ವಾದಿಂದ ಚಿತ್ರ ತುಂಬಾ ಚೆನ್ನಾಗಿ ಹೋಗುತ್ತಿದೆ. ಪರವಃ ಜೀ ಸ್ಟುಡಿಯೋಸ್​ಗೆ ಧನ್ಯವಾದ" ಎಂದು ನಿರ್ಮಾಪಕ ವರುಣ್ ಗೌಡ ಹೇಳಿದರು.

ಇದನ್ನೂ ಓದಿ: ಪ್ರೇಕ್ಷಕರ ಜೊತೆ ಕುಳಿತು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ವೀಕ್ಷಿಸಿದ ಡಾಲಿ ಧನಂಜಯ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಪ್ರೇಕ್ಷಕರಿಂದ ಸಿಕ್ಕಿದ ಅದ್ಭುತ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಾಗಿದೆ. ಇದೇ ಕಾರಣಕ್ಕೆ ಮತ್ತಷ್ಟು ಜನ ಸಿನಿಮಾ ನೋಡಲಿ ಎನ್ನುವ ಕಾರಣ ಫ್ರೀ ಟಿಕೆಟ್ ಆಫರ್ ಕೊಡುತ್ತಿದೆ. ಚಿತ್ರದ 2 ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಫ್ರೀ ಕೊಡಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಚಿತ್ರತಂಡ, 'ಇಡೀ ಥಿಯೇಟರ್ ತುಂಬ್ಕೊಂಡು ಎಲ್ಲರೂ ನಗಾಡ್ಕೊಂಡು, ತೇಲಾಡ್ಕೊಂಡು ಖುಷಿ ಖುಷಿಯಾಗಿ ಇರ್ಬೇಕು ಅಂತ ನಮ್ ಆಸೆ' ಎಂದು ಹೇಳಿದೆ.

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಕನಸಿಗೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್​​ನಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸಾಥ್ ಕೊಟ್ಟಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ: ಹಾಸ್ಟೆಲ್​ ಹುಡುಗರ ಸಕ್ಸಸ್​ ಪಾರ್ಟಿಗೆ ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್​ ಸಾಥ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.