ETV Bharat / entertainment

'ನಾಟು ನಾಟು' ಹಾಡಿಗೆ ಧ್ವನಿಗೂಡಿಸಿದ BTS ಗಾಯಕ ಜಾಂಗ್​ಕೂಕ್.. ವಿಡಿಯೋ ವೈರಲ್​ - ಈಟಿವಿ ಭಾರತ ಕನ್ನಡ

ಆರ್​ಆರ್​ಆರ್​ ಸಿನಿಮಾದ ಸೂಪರ್​ ಹಿಟ್​ ನಾಟು ನಾಟು ಹಾಡಿಗೆ ದಕ್ಷಿಣ ಕೊರಿಯಾದ ಪಾಪ್​ ಗಾಯಕ ಜಾಂಗ್​ಕೂಕ್ ಧ್ವನಿಗೂಡಿಸಿದ್ದಾರೆ.

rrr
ನಾಟು ನಾಟು
author img

By

Published : Mar 4, 2023, 1:17 PM IST

ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಮೆಗಾ ಸೂಪರ್​ ಹಿಟ್​ ಸಿನಿಮಾ ಆರ್​ಆರ್​ಆರ್​​ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸೌತ್​ ಸೂಪರ್​ ಸ್ಟಾರ್​ಗಳಾದ ರಾಮ್​ಚರಣ್​ ಮತ್ತು ಜೂನಿಯರ್​ ಎನ್​ಟಿಆರ್ ಅಭಿನಯದ ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜೊತೆಗೆ ಸಿನಿಮಾದ ನಾಟು ನಾಟು ಹಾಡು ಎಲ್ಲರ ಮನ ಗೆಲ್ಲುವುದರ ಜೊತೆಗೆ ಅತ್ಯುತ್ತಮ ಗೀತೆ ಎಂಬ ಪ್ರಶಸ್ತಿಯನ್ನು ಸಾಕಷ್ಟು ಬಾರಿ ತನ್ನದಾಗಿಸಿಕೊಂಡಿದೆ. ಇದೀಗ ಈ ಹಾಡನ್ನು ದಕ್ಷಿಣ ಕೊರಿಯಾದ ಪಾಪ್​ ಗಾಯಕ ಜಾಂಗ್​ಕೂಕ್ ಕೂಡ ಮೆಚ್ಚಿಕೊಂಡಿದ್ದಾರೆ.​

ಹೌದು. ಭಾರತೀಯ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಆರ್​ಆರ್​ಆರ್​ ಸಿನಿಮಾಗೆ ಸಲ್ಲುತ್ತದೆ. ​ಜೊತೆಗೆ ಈ ಸಿನಿಮಾದ ನಾಟು ನಾಟು ಹಾಡು ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದೀಗ BTS ಗಾಯಕ ಜಾಂಗ್​ಕೂಕ್ ಕೂಡ ನಾಟು ನಾಟು ಹಾಡಿಗೆ ಧ್ವನಿಗೂಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಕ್ಷಿಣ ಕೊರಿಯಾದ ಫೇಮಸ್​ ಗಾಯಕರೊಬ್ಬರು ಸೌತ್​ ಹಾಡಿಗೆ ಧ್ವನಿಗೂಡಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಇದನ್ನು ಕಂಡ ಬಿಟಿಎಸ್​ ಫ್ಯಾನ್ಸ್​ ಮತ್ತು ಭಾರತೀಯರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿರಾಟ್​ ಕೊರಳಲ್ಲಿ ರುದ್ರಾಕ್ಷಿ ಸರ, ಭಸ್ಮ ಆರತಿಯಲ್ಲಿ ವಿರುಷ್ಕಾ ಭಾಗಿ.. ಮಹಾಕಾಳೇಶ್ವರನ ದರ್ಶನ ಪಡೆದ ದಂಪತಿ

ಬಿಟಿಎಸ್​ ಗಾಯಕ ಜಾಂಗ್​ಕೂಕ್​ ಅವರು ಆರ್​ಆರ್​ಆರ್​ ಸಿನಿಮಾವನ್ನು ವೀಕ್ಷಿಸಿದ್ದು, ನಾಟು ನಾಟು ಹಾಡನ್ನು ಮೆಚ್ಚಿಕೊಂಡಿರುವುದಾಗಿ ಸ್ವತಃ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದೀಗ ನಾಟು ನಾಟು ಹಾಡಿಗೆ ಜಾಂಗ್​ಕೂಕ್​ ಧ್ವನಿಗೂಡಿಸಿರುವ ವಿಡಿಯೋವನ್ನು ಆರ್​ಆರ್​ಆರ್​ ತಂಡವು ತಮ್ಮ ಅಧಿಕೃತ ಸೋಶಿಯಲ್​ ಮೀಡಿಯಾ ಪೇಜ್​ನಲ್ಲಿ ಹಂಚಿಕೊಂಡಿದೆ. "ಜಾಂಗ್​ಕೂಕ್​ ಅವರೇ ನೀವು ನಾಟು ನಾಟು ಹಾಡು ಮೆಚ್ಚಿಕೊಂಡಿರುವುದನ್ನು ತಿಳಿದು ನಿಜಕ್ಕೂ ಆಶ್ಚರ್ಯವಾಗಿದೆ. ನಾವು ನಿಮಗೆ, ಬಿಟಿಎಸ್​ ತಂಡಕ್ಕೆ ಮತ್ತು ದಕ್ಷಿಣ ಕೋರಿಯಾ ಜನತೆಗೆ ತುಂಬು ಹೃದಯದ ಪ್ರೀತಿಯನ್ನು ಕಳುಹಿಸುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.​

ಆರ್​ಆರ್​ಆರ್​ ತಂಡವು ವಿಡಿಯೋ ಅಪ್​ಲೋಡ್​ ಮಾಡಿದ ಕೂಡಲೇ ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕ ಮತ್ತು ನೆಚ್ಚಿನ ಸಿನಿಮಾ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, "ಈ ಅದ್ಭುತ ಹಾಡಿಗೆ ಧನ್ಯವಾದಗಳು! ಇದು ಭಾರತೀಯರು ಮತ್ತು ಬಿಟಿಎಸ್​ ಅಭಿಮಾನಿಗಳಿಗೆ ನಿಜಕ್ಕೂ ಖುಷಿಯನ್ನು ತಂದುಕೊಟ್ಟಿದೆ" ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಆರ್​ಆರ್​ಆರ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಬಿಟಿಎಸ್​ ಅಭಿಮಾನಿಗಳಂತೂ ತಮ್ಮ ನೆಚ್ಚಿನ ಗಾಯಕನ ರಿಯಾಕ್ಷನ್​ ನೋಡಿ ಫುಲ್​ ಖುಷಿಯಾಗಿದ್ದಾರೆ.

ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಆಸ್ಕರ್​ ಮೂಲ ಹಾಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಈ ಒಂದು ಹಾಡನ್ನು ರಚಿಸಲು ಚಂದ್ರಬೋಸ್​ ಅವರು 1 ವರ್ಷ 7 ತಿಂಗಳು ವ್ಯಯಿಸಿದ್ದಾರೆ. ಶೇ 90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದು ಮುಗಿಸಿದ ಅವರು ಶೇ.10 ರಷ್ಟು ಹಾಡನ್ನು ಬರೆಯಲು 19 ತಿಂಗಳು ತೆಗೆದುಕೊಂಡಿದ್ದಾರೆ. ಕೊನೆಗೂ ಅವರ ಸತತ ಪ್ರಯತ್ನಕ್ಕೆ ಫಲವೆಂಬಂತೆ ಅನೇಕ ಪ್ರಶಸ್ತಿಗಳನ್ನು ನಾಟು ನಾಟು ಪಡೆದುಕೊಂಡಿದೆ.

ಇದನ್ನೂ ಓದಿ: 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ಶೂಟಿಂಗ್​ಗಾಗಿ ಕಾಶ್ಮೀರದಲ್ಲಿ ಕಾಣಿಸಿಕೊಂಡ ಆಲಿಯಾ ಭಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.