ಬ್ರಿಟಿಷ್ ದಂಪತಿ ಜೋನ್ ಮತ್ತು ಜಿಮ್ಮಿ ಮದುವೆಯಾಗಿ 49 ವರ್ಷ ಕಳೆದರೂ ಇನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಮೂಲಕ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾದ ಹಿಟ್ ಹಾಡು ಜುಮೇ ಜೋ ಪಠಾಣ್ಗೆ ದಂಪತಿ ಡ್ಯಾನ್ಸ್ ಮಾಡಿದ್ದು, ಸಖತ್ ವೈರಲ್ ಆಗಿದೆ. ಆಂಗ್ಲ ದಂಪತಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದಿದೆ.
ಈ ವೃದ್ಧ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಹಿಟ್ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇದೀಗ ಪಠಾಣ್ ಹಾಡಿಗೆ ಇಬ್ಬರು ಜೊತೆಯಾಗಿ ಸೂಪರ್ ಸ್ಟೆಪ್ಸ್ ಹಾಕಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿರುವ ಈ ಜೋಡಿ, ನಮ್ಮ ಕೈಲಾದಷ್ಟು ನಾವು ಡ್ಯಾನ್ಸ್ ಮಾಡಿದ್ದೇವೆ ಎಂದು ಕ್ಯಾಪ್ಶನ್ ಹಾಕಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ದಂಪತಿ ಇನ್ಸ್ಟಾಗ್ರಾಮ್ನಲ್ಲಿ 1,53,000 ಅನುಯಾಯಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: 'ನಾಟು ನಾಟು' ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕುರಿತ ಆಸಕ್ತಿದಾಯಕ ವಿಚಾರಗಳು ಗೊತ್ತಾ?
ಇವರ ವಿಡಿಯೋವನ್ನು ನೋಡಿದ ನೆಟ್ಟಿಗರು ದಂಪತಿಯ ನೃತ್ಯವನ್ನು ಶ್ಲಾಘಿಸಿದ್ದಾರೆ. ವಿಡಿಯೋಗೆ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, "ನಿಮ್ಮ ಜೋಡಿ ಅದ್ಭುತವಾಗಿದೆ. ನಿಮ್ಮನ್ನು ನೋಡುವಾಗ ನಿಜಕ್ಕೂ ಸಂತೋಷವಾಗುತ್ತದೆ. ನಾನು ನಿಮ್ಮ ನೃತ್ಯವನ್ನು ಪ್ರೀತಿಸುತ್ತೇನೆ" ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಅನೇಕರು ಕೆಂಪು ಹೃದಯಗಳು ಮತ್ತು ಫೈರ್ ಎಮೋಜಿಯನ್ನು ಕೈ ಬಿಟ್ಟಿದ್ದಾರೆ.
- " class="align-text-top noRightClick twitterSection" data="
">
ಪಠಾಣ್ ಬಿಗ್ ಸಕ್ಸಸ್: ಪಠಾಣ್ ಜನವರಿ 25 ರಂದು ಬಿಡುಗಡೆ ಆಗಿತ್ತು. ಸೂಪರ್ ಸ್ಟಾರ್ ಶಾರುಖ್ ಖಾನ್, ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸೇರಿದಂತೆ ಇತರರು ನಟಿಸಿದ್ದಾರೆ. ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿರುವ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ. ಡಿಸೆಂಬರ್ 2 ನೇ ವಾರದಲ್ಲಿ ಬೇಶರಂ ರಂಗ್ ಹಾಡು ಬಿಡುಗಡೆ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ನಟಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಸ್ತ್ರ ವಿವಾದಕ್ಕೆ ಒಳಗಾಗಿತ್ತು. ಪರ-ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿತ್ತು. ಸಿನಿಮಾ ಮೇಲೆ ಬಹಿಷ್ಕಾರದ ಎಚ್ಚರಿಕೆ ಇತ್ತು.
ಆದರೂ ಚಿತ್ರತಂಡ ಮೌನವಾಗಿ, ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿತು. ಸಿನಿಮಾ ಬಿಡುಗಡೆ ಆಗಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡಿದೆ. ಒಂದೇ ತಿಂಗಳೊಳಗೆ ಒಂದು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇನ್ನು ಪಠಾಣ್ ಏಪ್ರಿಲ್ 24 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಆದರೆ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ 'ಪಠಾಣ್' ಅನ್ನು ಒಟಿಟಿನಲ್ಲಿ ತೋರಿಸಲಾಗುವುದಿಲ್ಲ. ಬದಲಿಗೆ ಚಿತ್ರಮಂದಿರಗಳಲ್ಲಿ ನೋಡದ ದೃಶ್ಯಗಳನ್ನು OTTನಲ್ಲಿ ತೋರಿಸಲಾಗುತ್ತದೆ.
ಇದನ್ನೂ ಓದಿ: ಬಂದೂಕಿನೊಂದಿಗೆ ಛತ್ರಿ ಹಿಡಿದು ಬಂದ 'ಎಕ್ಸ್‌ಕ್ಯೂಸ್ ಮೀ' ಹೀರೋ..'ವೀರ್ ಸಾವರ್ಕರ್ ಸಿನಿಮಾ'ದ ಫಸ್ಟ್ ಲುಕ್ ಬಿಡುಗಡೆ