ಲಂಡನ್: ಆಂಟಿವಾರ್ ಜರ್ಮನ್ ಚಲನಚಿತ್ರ "ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್" ಭಾನುವಾರ ನಡೆದ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTA) ನಲ್ಲಿ ಅತ್ಯುತ್ತಮ ಚಿತ್ರ ಸೇರಿದಂತೆ ಏಳು ಬಹುಮಾನಗಳನ್ನು ಗೆದ್ದುಕೊಂಡಿತು. ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ ಚಿತ್ರವು ಇಂಗ್ಲಿಷ್ ಅಲ್ಲದ ಭಾಷೆಯ ಚಲನಚಿತ್ರವಾಗಿ ಹೆಚ್ಚಿನ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ ಎಂಬ ದಾಖಲೆ ನಿರ್ಮಿಸಿದೆ.
ಸೌತ್‌ಬ್ಯಾಂಕ್ ಸೆಂಟರ್‌ನಲ್ಲಿರುವ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ಭಾನುವಾರ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (BAFTA) ಪ್ರಶಸ್ತಿ ಪುರಾಸ್ಕಾರ ಸಮಾರಂಭ ನಡೆಯಿತು. ಸ್ಪರ್ಧೆಯಲ್ಲಿದ್ದ ದಿ ಬನ್ಶೀಸ್ ಆಫ್ ಇನಿಶೆರಿನ್, ಎಲ್ವಿಸ್, ಥಾರ್ ಮತ್ತು ಎವ್ರಿಥಿಂಗ್ ಎವ್ರಿವೇರ್ ಆಲ್ ಅಟ್ ಒನ್ಸ್ ಚಿತ್ರಗಳನ್ನು ಹಿಂದಿಕ್ಕಿ ಆಂಗ್ಲ ಭಾಷೆ ಅಲ್ಲದ ಸಿನಿಮಾ ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಯಿತು.
-
Anything but quiet for our Best Film winners! #EEBAFTAs pic.twitter.com/bzTCvDX68a
— BAFTA (@BAFTA) February 19, 2023 " class="align-text-top noRightClick twitterSection" data="
">Anything but quiet for our Best Film winners! #EEBAFTAs pic.twitter.com/bzTCvDX68a
— BAFTA (@BAFTA) February 19, 2023Anything but quiet for our Best Film winners! #EEBAFTAs pic.twitter.com/bzTCvDX68a
— BAFTA (@BAFTA) February 19, 2023
ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ ಸಿನಿಮಾವು ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿಯ ಜೊತೆಗೆ ನಿರ್ದೇಶನ, ಕಥೆ, ಸಂಕಲನ, ಸಿನಿಮಾಟೋಗ್ರಫಿ, ಹಿನ್ನೆಲೆ ಸಂಗೀತ ಮತ್ತು ಇಂಗ್ಲಿಷ್ ಅಲ್ಲದ ಭಾಷೆಯ ಅತ್ಯುತ್ತಮ ಚಲನಚಿತ್ರ ವಿಭಾಗಗಳಲ್ಲಿ ಜಯಿಸಿತು. ಐರಿಶ್ ಟ್ರಾಜಿಕಾಮಿಡಿ "ದಿ ಬನ್ಶೀಸ್ ಆಫ್ ಇನಿಶೆರಿನ್" ಮತ್ತು ರಾಕ್ ಬಯೋಪಿಕ್ "ಎಲ್ವಿಸ್" ತಲಾ ನಾಲ್ಕು ಬಹುಮಾನ ಗೆದ್ದುಕೊಂಡಿತು.
ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
ಅತ್ಯುತ್ತಮ ಚಿತ್ರ:
"ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್"
ಅತ್ಯುತ್ತಮ ನಟ
ಆಸ್ಟಿನ್ ಬಟ್ಲರ್ - "ಎಲ್ವಿಸ್"
ಅತ್ಯುತ್ತಮ ನಟಿ
ಕೇಟ್ ಬ್ಲಾಂಚೆಟ್ - "ಟಾರ್"
ನಿರ್ದೇಶಕ
"ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್" - ಎಡ್ವರ್ಡ್ ಬರ್ಗರ್
ಪೋಷಕ ನಟ
ಬ್ಯಾರಿ ಕಿಯೋಘನ್ - "ದಿ ಬನ್ಶೀಸ್ ಆಫ್ ಇನಿಶೆರಿನ್"
ಪೋಷಕ ನಟಿ
ಕೆರ್ರಿ ಕಾಂಡನ್ - "ದಿ ಬನ್ಶೀಸ್ ಆಫ್ ಇನಿಶರಿನ್"
ಕಥೆ
"ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್" - ಎಡ್ವರ್ಡ್ ಬರ್ಗರ್, ಲೆಸ್ಲಿ ಪ್ಯಾಟರ್ಸನ್, ಇಯಾನ್ ಸ್ಟೋಕೆಲ್
ಸಂಕಲನ
"ಎವೆರಿಥಿಂಗ್ ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒಮ್ಸ್" - ಪಾಲ್ ರೋಜರ್ಸ್ "ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್" - ಸ್ವೆನ್ ಬುಡೆಲ್ಮನ್
ಸಿನಿಮಾಟೋಗ್ರಫಿ
"ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್" - ಜೇಮ್ಸ್ ಫ್ರೆಂಡ್
ಅನಿಮೇಟೆಡ್ ಚಿತ್ರ
"ಗಿಲ್ಲೆರ್ಮೊ ಡೆಲ್ ಟೊರೊಸ್ ಪಿನೋಚ್ಚಿಯೋ" - ಗಿಲ್ಲೆರ್ಮೊ ಡೆಲ್ ಟೊರೊ, ಮಾರ್ಕ್ ಗುಸ್ಟಾಫ್ಸನ್, ಗ್ಯಾರಿ ಉಂಗಾರ್, ಅಲೆಕ್ಸ್ ಬಲ್ಕ್ಲಿ
ಚಿತ್ರಕಥೆ
"ದಿ ಬನ್ಶೀಸ್ ಆಫ್ ಇನಿಶೇರಿನ್" - ಮಾರ್ಟಿನ್ ಮೆಕ್ಡೊನಾಗ್
ಸಾಕ್ಷ್ಯಚಿತ್ರ
"ನವಾಲ್ನಿ" - ಡೇನಿಯಲ್ ರೋಹರ್, ಡಯೇನ್ ಬೆಕರ್, ಶೇನ್ ಬೋರಿಸ್, ಮೆಲಾನಿ ಮಿಲ್ಲರ್, ಒಡೆಸ್ಸಾ ರೇ
ಹಿನ್ನೆಲೆ ಸಂಗೀತ
"ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್" - ವೋಲ್ಕರ್ ಬರ್ಟೆಲ್ಮನ್
ಮೇಕಪ್
"ಎಲ್ವಿಸ್" - ಜೇಸನ್ ಬೈರ್ಡ್, ಮಾರ್ಕ್ ಕೌಲಿಯರ್, ಲೂಯಿಸ್ ಕೌಲ್ಸ್ಟನ್, ಶೇನ್ ಥಾಮಸ್
ಇದನ್ನೂ ಓದಿ: ಬಾಲಿವುಡ್ದಲ್ಲಿ ಬಾಹುಬಲಿ 2 ದಾಖಲೆ ಮುರಿದು ಮುನ್ನುಗ್ಗಿದ ಪಠಾಣ್..