ಮುಂಬೈ: ಪೌರಾಣಿಕ ಫ್ಯಾಂಟಸಿ ಸಾಹಸ ಚಿತ್ರ 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾದ ಟ್ರೈಲರ್ ಜೂನ್. 15 ರಂದು ಅನಾವರಣಗೊಳ್ಳಲಿದೆ. ಈ ಬಗ್ಗೆ ಸಿನಿಮಾದ ತಯಾರಕರು ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
VFX-ಹೆವಿ ಸ್ಪೆಷಲ್ ವಿಡಿಯೋದಲ್ಲಿ ರಣಬೀರ್ ಅವರನ್ನು ಶಿವನಾಗಿ ಮತ್ತು ಆಲಿಯಾ ಅವರನ್ನು ಇಶಾಳಾಗಿ ಬಿರುಸಿನ ತೋರಿಸಲಾಗಿದೆ. ಇದು ಅಯನ್ ಮುಖರ್ಜಿ ನಿರ್ದೇಶನದ ಪ್ರಮುಖ ಅಂಶಗಳನ್ನು ಸಹ ಪ್ರಸ್ತುತಪಡಿಸಲಾಗಿದೆ. ಚಿತ್ರ ಬಿಡುಗಡೆಗೆ 100 ದಿನಗಳು ಇರುವ ಬೆನ್ನಲೇ ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
- " class="align-text-top noRightClick twitterSection" data="
">
ಈ ಚಿತ್ರವು ಭಗವಾನ್ ಶಿವನ ಪುರಾಣ ಮತ್ತು ಸರ್ವಶಕ್ತ ಬ್ರಹ್ಮಾಸ್ತ್ರ ಆಧರಿಸಿದ ಫ್ಯಾಂಟಸಿ ಟ್ರೈಲಾಜಿಯ ಮೊದಲ ಭಾಗವಾಗಿದೆ. ಚಿತ್ರದ ಅಧಿಕೃತ ಸಾರಾಂಶದ ಪ್ರಕಾರ, 'ಬ್ರಹ್ಮಾಸ್ತ್ರ ಭಾಗ 1: ಶಿವ' ಎಂಬುದು ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು ಮತ್ತು ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು, ಪ್ರೀತಿ, ಭರವಸೆ ಎಲ್ಲವನ್ನೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಹೇಳಲಾಗಿದೆ ಹಾಗೂ ಹಿಂದೆಂದೂ ನೋಡಿರದ ದೃಶ್ಯ ಇದರಲ್ಲಿ ಇವೆಯಂತೆ.
ಎಸ್.ಎಸ್ ರಾಜಮೌಳಿ ಅವರು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.