ETV Bharat / entertainment

ಬಾಲಿವುಡ್​ಗೆ ಬ್ರಹ್ಮಾಸ್ತ್ರ ಟಾನಿಕ್​.. ಎರಡು ದಿನಗಳಲ್ಲಿ 160 ಕೋಟಿ ರೂ. ಕಲೆಕ್ಷನ್!

ಬ್ರಹ್ಮಾಸ್ತ್ರ ಸಿನಿಮಾ ಕಳೆದೆರಡು ದಿನಗಳಲ್ಲಿ 160 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ.

brahmastra movie collection
ಬ್ರಹ್ಮಾಸ್ತ್ರ ಸಿನಿಮಾ
author img

By

Published : Sep 11, 2022, 4:21 PM IST

Updated : Sep 11, 2022, 4:38 PM IST

ರಣ್​ಬೀರ್​ ಕಪೂರ್​, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿರುವ ಬ್ರಹ್ಮಾಸ್ತ್ರ ಸಿನಿಮಾ ಶುಕ್ರವಾರದಂದು ವಿಶ್ವಾದ್ಯಂತ 8,913 ಸ್ಕ್ರೀನ್​​​ಗಳಲ್ಲಿ ಬಿಡುಗಡೆ ಆಗಿ ಮೊದಲ ದಿನವೇ ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿತ್ತು. ಕಳೆದೆರಡು ದಿನಗಳಲ್ಲಿ 160 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ.

ಅಯಾನ್‌ ಮುಖರ್ಜಿ ನಿರ್ದೇಶನ 'ಬ್ರಹ್ಮಾಸ್ತ್ರ ಭಾಗ 1 ಶಿವ' ಚಿತ್ರದಲ್ಲಿ ರಣ್​​ಬೀರ್,​ ಆಲಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಮಿತಾಬ್​ ಬಚ್ಚನ್​, ನಾಗಾರ್ಜುನ್​​ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರ ನಿರ್ಮಾಣಕ್ಕೆ ಒಂಭತ್ತು ವರ್ಷಗಳ ಸಮಯ ಹಿಡಿದಿದೆ. 400 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಮೊದಲ ದಿನ 25 ರೂ. ಗಳಿಸಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಆದರೆ ನಿರೀಕ್ಷೆಗೂ ಮೀರಿ ಮೊದಲ ದಿನ 75 ಕೋಟಿ, ಎರಡನೇ ದಿನ 85 ಕೋಟಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ನಿರ್ಮಾಪಕ ಕರಣ್​ ಜೋಹರ್ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.​

ಜೂನಿಯರ್​ ಎನ್​​ಟಿಆರ್​ ಹಾಗೂ ರಾಮ್​ ಚರಣ್​ ಅಭಿನಯದ ಆರ್​​ಆರ್​ಆರ್​ ಸಿನಿಮಾ ಮೊದಲ ದಿನ 20 ಕೋಟಿ ಗಳಿಕೆ ಮಾಡಿತ್ತು. ಸ್ವತಃ ರಣ್​ಬೀರ್​ ಕಪೂರ್​ ಅಭಿನಯದ ಸಂಜು ಚಿತ್ರ 34.75 ಕೋಟಿ ಗಳಿಸಿತ್ತು. ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಕಲೆಕ್ಷನ್ ಮಾಡಿದ್ದು, ಈ ಎರಡು ದಿನಗಳ ಭರ್ಜರಿ ಕಲೆಕ್ಷನ್ ಮೂಲಕ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ತಳ್ಳಿದೆ.

ಇದನ್ನೂ ಓದಿ: ಟೀಕೆಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ಬ್ರಹ್ಮಾಸ್ತ್ರ..ಮೊದಲ ದಿನವೇ 75 ಕೋಟಿ ಕಲೆಕ್ಷನ್

ಬ್ರಹ್ಮಾಸ್ತ್ರ ಸಿನಿಮಾಗೆ ಬಹಿಷ್ಕಾರದ ಬಿಸಿ ತಾಗಿತ್ತು. ಅಲ್ಲದೇ ನಟ, ನಟಿಯ ಹೇಳಿಕೆಗಳು ವಿವಾದಕ್ಕೆ ಈಡಾಗಿತ್ತು. ಆದರೂ ಆಶಾಭಾವನೆಯೊಂದಿಗೆ ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿತ್ತು. ಈ ಸಿನಿಮಾವೀಗ ರಣ್​ಬೀರ್​ ಕಪೂರ್​ ಅಭಿನಯದ 100 ಕೋಟಿ ದಾಟಿದ ಸಿನಿಮಾಗಳ ಪಟ್ಟಿ ಸೇರಿದೆ.

Last Updated : Sep 11, 2022, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.