ETV Bharat / entertainment

ಆಸ್ಟ್ರೇಲಿಯಾದ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಅರಳಿದ ಬ್ರಹ್ಮಕಮಲ - ನಿರ್ದೇಶಕ ಸಿದ್ದು ಪೂರ್ಣಚಂದ್ರ

ನೈಜ ಘಟನೆಯಾಧರಿಸಿ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರು ಬ್ರಹ್ಮಕಮಲ ಸಿನಿಮಾ ತಯಾರಿಸಿದ್ದಾರೆ.

brahmakamala in australias indian film festtival
ಆಸ್ಟ್ರೇಲಿಯಾದ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಅರಳಿದ ಬ್ರಹ್ಮಕಮಲ
author img

By

Published : May 15, 2023, 7:11 PM IST

ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಇದೀಗ ಬ್ರಹ್ಮಕಮಲ ಚಿತ್ರ ಮಾಡಿರೋದು ಗೊತ್ತಿರುವ ವಿಚಾರ. ಚಿತ್ರದ ಟೈಟಲ್​ನಿಂದಲೇ ಸದ್ದು ಮಾಡುತ್ತಿರುವ ಬ್ರಹ್ಮಕಮಲ ಚಿತ್ರ ಬಿಡುಗಡೆಗೂ ಮುಂಚೆ ಸಾಕಷ್ಟು ಫಿಲ್ಮ್ ಫೆಸ್ಟಿವಲ್​ಗಳಲ್ಲಿ ಪ್ರದರ್ಶನಗೊಳ್ಳುವ ಮುಖಾಂತರ ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿದೆ. ಇದೀಗ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ಕನ್ನಡದ ಬ್ರಹ್ಮಕಮಲ ಚಿತ್ರ ಆಯ್ಕೆಯಾಗಿದೆ.

ಪ್ರಪಂಚದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ‌ ಇದೂ ಒಂದು. ಇಂತಹ ಫೆಸ್ಟಿವಲ್​ನಲ್ಲಿ ಬ್ರಹ್ಮಕಮಲ ಚಿತ್ರ ಸ್ಕ್ರೀನಿಂಗ್ ಆಗುತ್ತಿದೆ. ಈಗಾಗಲೇ ಫ್ರಾನ್ಸ್​ನಲ್ಲಿ ನಡೆದ ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಸಿಡ್ನಿಯ ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ, ನೇಪಾಳದ ಓಲ್ಡ್ ಮಂಕ್ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​ನಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ.

ಇಂಡೋ‌ ಸಿಂಗಪುರ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಅದ್ವಿತಿ ಶೆಟ್ಟಿಗೂ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ದಾದಾ ಸಾಹೇಬ್ ಫಾಲ್ಕೆ, ಅರುಣೋದಯ, ಕಲಕರಿ, ಚಲನಚಿತ್ರೋತ್ಸವಗಳನ್ನು ಒಳಗೊಂಡಂತೆ ಹಲವು ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿರುವುದು ಖುಷಿ ತಂದಿದೆ ಅಂತಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಇನ್ನು ವಿಶೇಷವಾದ ಕಥಾ ಹಂದರ ಈ ಚಿತ್ರದಲ್ಲಿರುವುದರಿಂದ ನನಗೆ ಮೊದಲಿನಿಂದಲೂ ಈ ಕಥೆಯ ಮೇಲೆ ನಂಬಿಕೆ ಇತ್ತು. ಈ ಚಿತ್ರ ಇನ್ನೂ ಹಲವು ಪ್ರಶಸ್ತಿಗಳನ್ನು ತಂದು ಕೊಡುತ್ತದೆ ಎಂಬ ವಿಶ್ವಾಸ ಇದೆ.

ಈ ಕಥೆ ನಮ್ಮ ರಾಮನಗರದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಹೆಣೆದಿದ್ದೇನೆ. ಆ ಕುಟುಂಬ ಮಾಡಿದ ಒಂದು ತಪ್ಪಿನಿಂದಾಗಿ ಆ ಮನೆಯವರೆಲ್ಲರೂ ಈಗಲೂ ಜೈಲಿನಲ್ಲಿದ್ದಾರೆ. ಇಂತಹ ಸೂಕ್ಷ್ಮ ಕಥೆಯನ್ನು ಸಿನಿಮಾ ಮಾಡೋದು ನಿರ್ದೇಶಕ ಸಿದ್ದು ಪೂರ್ಣಚಂದ್ರಗೆ ಒಂದು ಚಾಲೆಂಜಿಂಗ್ ಆಗಿತ್ತು ಅಂತಾರೆ.

ಇದನ್ನೂ ಓದಿ: ಸೈಲೆಂಟ್ ಆಗಿ ಮುಹೂರ್ತ ಮುಗಿಸಿದ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಅಜಾಗ್ರತ‌'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.