ETV Bharat / entertainment

60 ಕೋಟಿ ರೂ. ಗಡಿ ದಾಟಿದ 'ಫುಕ್ರೆ 3' ಸಿನಿಮಾ.. ಹಿಂದೆ ಬಿದ್ದ 'ಚಂದ್ರಮುಖಿ 2', 'ದಿ ವ್ಯಾಕ್ಸಿನ್ ವಾರ್'

ಕಂಗನಾ ರಣಾವತ್ ಅವರ 'ಚಂದ್ರಮುಖಿ 2' ಹಾಗೂ ವಿವೇಕ್ ಅಗ್ನಿಹೋತ್ರಿ ಅವರ 'ದಿ ವ್ಯಾಕ್ಸಿನ್ ವಾರ್' ಜೊತೆಗಿನ ಘರ್ಷಣೆಯ ಹೊರತಾಗಿಯೂ ಕಾಮಿಡಿ ಚಿತ್ರ 'ಫುಕ್ರೆ 3' ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿದೆ. 5 ನೇ ದಿನದಲ್ಲಿ ಬಾಲಿವುಡ್​ನ ಈ ಚಿತ್ರಗಳು ಎಷ್ಟು ಕಲೆಕ್ಷನ್​ ಮಾಡಿವೆ ಎಂಬುದನ್ನು ನೋಡೋಣ ಬನ್ನಿ..

Fukrey 3 to cross Rs 60 crore mark, Chandramukhi 2 and The Vaccine War lag behind
60 ಕೋಟಿ ರೂ. ಗಡಿ ದಾಟಿದ 'ಫುಕ್ರೆ 3' ಸಿನಿಮಾ, ಹಿಂದೆ ಬಿದ್ದ 'ಚಂದ್ರಮುಖಿ 2', 'ದಿ ವ್ಯಾಕ್ಸಿನ್ ವಾರ್'...
author img

By ETV Bharat Karnataka Team

Published : Oct 2, 2023, 5:08 PM IST

ಹೈದರಾಬಾದ್: ಮೂರು ಪ್ರಮುಖ ಸಿನಿಮಾಗಳು ಸೆಪ್ಟೆಂಬರ್ 28 ರಂದು ಬೆಳ್ಳಿತೆರೆಗೆ ಅಪ್ಪಳಿಸಿದ್ದವು. ಗಲ್ಲಾಪೆಟ್ಟಿಗೆಯಲ್ಲಿ ಮುಖಾಮುಖಿ ಸ್ಪರ್ಧೆಯನ್ನು ಒಡ್ಡಿವೆ. ಕಂಗನಾ ರಣಾವತ್‌ ಅಭಿನಯದ ಚಂದ್ರಮುಖಿ 2 ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಜೊತೆಗೆ ಹಾಸ್ಯ ಚಲನಚಿತ್ರ ಫುಕ್ರೆ- 3 ಒಂದೇ ದಿನ ಥಿಯೇಟರ್‌ಗಳಿಗೆ ಪ್ರವೇಶಿಸಿದ್ದವು. ಬಾಕ್ಸ್ ಆಫೀಸ್‌ನಲ್ಲಿ ಮೂರು ಚಿತ್ರಗಳ ನಡುವೆ ಪೈಪೋಟಿ ಉಂಟಾಗಿತ್ತು. ಫುಕ್ರೆ- 3 ಚಿತ್ರವು ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನಿಂತಿದ್ದು, ಐದನೇ ದಿನವೂ ಬಾಕ್ಸ್ ಆಫೀಸ್​ನಲ್ಲಿ ತನ್ನ ಕಮಾಲ್​ ಮುಂದುವರೆಸಿದೆ.

7.47 ಕೋಟಿ ರೂ. ಬಾಚಿಕೊಂಡ ದಿ ವ್ಯಾಕ್ಸಿನ್ ವಾರ್: ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ''ಆರಂಭಿಕ ಅಂದಾಜಿನ ಪ್ರಕಾರ, ಕಡಿಮೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆರೆಕಂಡ ವ್ಯಾಕ್ಸಿನ್ ವಾರ್ ಚಿತ್ರ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಐದನೇ ದಿನ- ರೂ 1.73 ಕೋಟಿ ಗಳಿಕೆ ಮಾಡಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರವು ಈಗ ಅಂದಾಜು ಐದು ದಿನಗಳಲ್ಲಿ ಒಟ್ಟು 7.47 ಕೋಟಿ ರೂ. ಗಳಿಸಿದೆ. ಸುಮಾರು 10 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರ ತಯಾರಾಗಿದೆ ಎಂದು ವರದಿಯಾಗಿದೆ.

19.83 ಕೋಟಿ ರೂ. ಗಳಿಸಿದ ಚಂದ್ರಮುಖಿ 2: ಮತ್ತೊಂದೆಡೆ, ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಂದ್ರಮುಖಿ 2 ಚಿತ್ರ ತನ್ನ ನಾಲ್ಕು ದಿನಗಳ ಕಲೆಕ್ಷನ್‌ನಲ್ಲಿ ಯೋಗ್ಯವಾದ ಮೊತ್ತವನ್ನು ಕಲೆ ಹಾಕಿದೆ. ಸ್ಯಾಕ್ನಿಲ್ಕ್ ವರದಿ ಮಾಡಿದಂತೆ, ಆರಂಭಿಕ ಅಂದಾಜಿನ ಪ್ರಕಾರ, ಹಾರರ್-ಕಾಮಿಡಿ ಚಿತ್ರ ಐದನೇ ದಿನ- 4.92 ಕೋಟಿ ರೂ. ಗಳಿಸಿರುವ ಸಾಧ್ಯತೆಯಿದೆ. ಈವರೆಗೆ ಒಟ್ಟು 19.83 ಕೋಟಿ ರೂ. ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ.

ಫುಕ್ರೆ- 3 ಚಿತ್ರದ ಒಟ್ಟು ಕಲೆಕ್ಷನ್ 61.06 ಕೋಟಿ ರೂ.: ಮೇಲೆ ತಿಳಿಸಿದ ಚಲನಚಿತ್ರಗಳಿಗೆ ಹೋಲಿಸಿದರೆ, ಫುಕ್ರೆ 3 ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ನಂಬಲಾಗದಷ್ಟು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಸ್ಯಾಕ್ನಿಲ್ಕ್‌ನ ಆರಂಭಿಕ ಅಂದಾಜಿನ ಪ್ರಕಾರ, ಕಾಮಿಡಿ ಚಿತ್ರವು 5ನೇ ದಿನ- 16.41 ಕೋಟಿ ರೂ. ನಿವ್ವಳ ಲಾಭ ಗಳಿಸುವ ಸಾಧ್ಯತೆಯಿದೆ. ಇದು ಇಲ್ಲಿಯವರೆಗಿನ ಅತ್ಯಧಿಕ ಗಳಿಕೆಯಾಗಿದೆ. ಚಿತ್ರವು ಈವರೆಗೆ ಒಟ್ಟು ಕಲೆಕ್ಷನ್ 61.06 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: ತೇಜಸ್​ ಟೀಸರ್​ ರಿಲೀಸ್​: 'ಭಾರತದ ತಂಟೆಗೆ ಬಂದರೆ ಬಿಡುವ ಮಾತೇ ಇಲ್ಲ' ಅಂತಿದ್ದಾರೆ ಕಂಗನಾ ರಣಾವತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.