ಒಂದು ಕಾಲದಲ್ಲಿ ಸಿನಿಮಾ ನೋಡಬೇಕೆಂದರೆ ಜನರು ಥಿಯೇಟರ್ಗಳೆದುರು ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯುತ್ತಿದ್ದರು. ಆದರೆ, ಕಾಲ ಬದಲಾಗಿದೆ. ಟಿಕೆಟ್ ಖರೀದಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಥಿಯೇಟರ್ಗೆ ಹೋಗುವ ಬದಲು ಫೋನ್ನಲ್ಲೇ ಜನರು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ತಮಗೆ ಬೇಕಿರುವ ಆಸನ ಆಯ್ದುಕೊಂಡು ಟಿಕೆಟ್ ಖರೀದಿಸಿದರೆ ಕೆಲಸ ಸಲೀಸು. ಶೋ ಶುರುವಾಗುವ 5 ನಿಮಿಷಕ್ಕೂ ಮುನ್ನ ಥಿಯೇಟರ್ನೊಳಗೆ ಎಂಟ್ರಿ ಕೊಟ್ಟರೆ, ಆರಾಮವಾಗಿ ಕುಳಿತು ನಿಮ್ಮಿಷ್ಟದ ಸಿನಿಮಾ ವೀಕ್ಷಿಸಬಹುದು.
ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ನಾವು ಬುಕ್ ಮಾಡಿದ್ದ ಟಿಕೆಟ್ ರದ್ದು ಮಾಡಬೇಕಾದ ಸಂದರ್ಭ ಎದುರಾಗುತ್ತದೆ. ಆಗ ನಾವು ವ್ಯಯಿಸಿದ ಹಣದ ಬಗ್ಗೆ ಚಿಂತೆ ಮಾಡುತ್ತೇವೆ. ಈ ವಿಚಾರದಲ್ಲಿ ಅನೇಕರು ಟೆನ್ಶನ್ ಮಾಡಿಕೊಳ್ಳುವರು. ಅಷ್ಟೆಲ್ಲಾ ದುಡ್ಡು ಕೊಟ್ಟು ಟಿಕೆಟ್ ಬುಕ್ ಮಾಡಿದ್ದೆ, ವೇಸ್ಟ್ ಆಯ್ತು ಎಂಬೆಲ್ಲಾ ಆಲೋಚನೆಗೆ ಬೀಳುತ್ತಾರೆ. ಆದರೆ ಚಿಂತೆ ಪಡಬೇಕಾಗಿಲ್ಲ. ಏಕೆಂದರೆ, ನೀವು ಸುಲಭವಾಗಿ ಟಿಕೆಟ್ ಕ್ಯಾನ್ಸಲ್ ಮಾಡಿ, ಹಣವನ್ನೂ ಕೂಡ ಹಿಂಪಡೆದುಕೊಳ್ಳಬಹುದು.
'ಬುಕ್ಮೈಶೋ'ನಲ್ಲಿ ಹೀಗೆ ಟಿಕೆಟ್ ಕ್ಯಾನ್ಸಲ್ ಮಾಡಿ:
- ನಿಮ್ಮ ಮೊಬೈಲ್ನಲ್ಲಿ 'ಬುಕ್ಮೈಶೋ' ಆ್ಯಪ್ ತೆರೆಯಿರಿ.
- ನೀವು ಲಾಗ್ ಔಟ್ ಆಗಿದ್ದರೆ, ಲಾಗ್ ಇನ್ ಆಗಿ ಆ್ಯಪ್ ಓಪನ್ ಮಾಡಿ.
- ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
- Your Orders ಎಂಬ ಆಯ್ಕೆಯನ್ನು ಒತ್ತಿ.
- ಪರದೆಯಲ್ಲಿ ನೀವು ಬುಕ್ ಮಾಡಿದ ಟಿಕೆಟ್ ಲಿಸ್ಟ್ ಕಾಣಿಸುತ್ತದೆ.
- ಅದರಲ್ಲಿ ನೀವು ಸಿನಿಮಾ ನೋಡಲು ಬುಕ್ ಮಾಡಿರುವ ಟಿಕೆಟ್ ಆಯ್ದುಕೊಳ್ಳಿ.
- ನಂತರ Cancel Booking Option ಕ್ಲಿಕ್ಕಿಸಿ.
- ಸ್ಕ್ರೀನ್ ಕೆಳಗೆ ಸ್ಕ್ರಾಲ್ ಮಾಡಿ, Refund Payment method ಆಯ್ಕೆ ಮಾಡಿ.
- Get refund ಕ್ಲಿಕ್ ಮಾಡಿ.
'ಬುಕ್ಮೈಶೋ' ಅಧಿಕೃತ ವೆಬ್ಸೈಟ್ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ?: ಬುಕ್ಮೈಶೋ ಮೊಬೈಲ್ ಆ್ಯಪ್ ಬಳಸದವರೂ ಇದ್ದಾರೆ. ಸಿನಿಮಾ ಟಿಕೆಟ್ಗಳನ್ನು ಬುಕ್ ಮಾಡಲು ಬುಕ್ ಮೈ ಶೋ ಅಧಿಕೃತ ವೆಬ್ಸೈಟ್ ಅನ್ನೇ ಬಳಸುವರೂ ಇದ್ದಾರೆ. ನೀವು ಅಧಿಕೃತ ವೆಬ್ಸೈಟ್ನಿಂದ ಸಿನಿಮಾ ಟಿಕೆಟ್ ಬುಕ್ ಮಾಡಿದ್ದರೆ, ಅದನ್ನು ಕ್ಯಾನ್ಸಲ್ ಮಾಡಬಹುದು. ಹೇಗೆ ಗೊತ್ತೇ?
- ಬುಕ್ ಮೈ ಶೋ ಅಧಿಕೃತ ವೆಬ್ಸೈಟ್ ತೆರೆಯಿರಿ.
- ನಿಮ್ಮ ಖಾತೆಗೆ ಲಾಗಿನ್ ಆಗಿ.
- ಬಲಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಓಪನ್ ಮಾಡಿ.
- Purchase History ಆಯ್ದುಕೊಳ್ಳಿ.
- ಟಿಕೆಟ್ ಮೇಲೆ ಕ್ಲಿಕ್ಕಿಸಿ.
- ಸ್ಕ್ರೀನ್ ಕೆಳಗೆ ಸ್ಕ್ರಾಲ್ ಮಾಡಿ, ರದ್ದು ಆಯ್ಕೆ ಒತ್ತಿ.
- Refund Payment method ಸೆಲೆಕ್ಟ್ ಮಾಡಿ.
- Confirm ಮೇಲೆ ಕ್ಲಿಕ್ ಮಾಡಿ.
- ಸೂಚನೆ: ಕೆಲವೊಮ್ಮೆ ಈ ವೆಬ್ಸೈಟ್ ಓಪನ್ ಆಗುವುದಿಲ್ಲ.
ನೀವು ಸೂಪರ್ಸ್ಟಾರ್ ಕಸ್ಟಮರ್ ಆಗಿದ್ದಲ್ಲಿ ಟಿಕೆಟ್ ಕ್ಯಾನ್ಸಲ್ ಹೇಗೆ?: ಬುಕ್ಮೈಶೋ ಅಪ್ಲಿಕೇಶನ್ ತನ್ನ ಸೂಪರ್ಸ್ಟಾರ್ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನ ನೀಡುತ್ತದೆ. ಒಬ್ಬ ವ್ಯಕ್ತಿ ಸೂಪರ್ಸ್ಟಾರ್ ಕಸ್ಟಮರ್ ಆಗಿದ್ದಲ್ಲಿ ಟಿಕೆಟ್ಗೆ ಪಾವತಿಸಿದ ಸಂಪೂರ್ಣ ಹಣ ಅವರಿಗೆ ಸಿಗುತ್ತದೆ. ಯಾವುದೇ ಗ್ರಾಹಕ ಒಂದು 1 ವರ್ಷದೊಳಗೆ ಬುಕ್ ಮೈ ಶೋದಿಂದ 10ಕ್ಕಿಂತ ಹೆಚ್ಚು ಟಿಕೆಟ್ಗಳನ್ನು ಬುಕ್ ಮಾಡಿದ್ದಲ್ಲಿ, ಅವರನ್ನು 'ಸೂಪರ್ಸ್ಟಾರ್ ಕಸ್ಟಮರ್' ಎಂದು ಕರೆಯಲಾಗುತ್ತದೆ. ಹಾಗಿದ್ದರೆ ಈ ಸೂಪರ್ಸ್ಟಾರ್ ಕಸ್ಟಮರ್ ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ? ಸಂಪೂರ್ಣ ಹಣವನ್ನು ಹಿಂಪಡೆಯುವುದು ಹೇಗೆಂದು ತಿಳಿಯಿರಿ.
- ಬುಕ್ಮೈಶೋ ಅಪ್ಲಿಕೇಶನ್ ತೆರೆಯಿರಿ.
- ನಿಮ್ಮ ಪ್ರೊಫೈಲ್ಗೆ ಹೋಗಿ.
- Your Orders ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಟಿಕೆಟ್ ಆಯ್ಕೆ ಮಾಡಿ.
- Superstar Cancelation ಮೇಲೆ ಕ್ಲಿಕ್ ಮಾಡಿ.
- Original Payment method ಆಯ್ದುಕೊಳ್ಳಿ.
- Get refund ಕ್ಲಿಕ್ಕಿಸಿ.
- ನಿಮ್ಮ ಟಿಕೆಟ್ ಕ್ಯಾನ್ಸಲ್ ಅನ್ನು ಕನ್ಫರ್ಮ್ ಮಾಡಿ.
BookMyShow Ticket Cancellation Rules: ಬುಕ್ಮೈಶೋ ಟಿಕೆಟ್ ಕ್ಯಾನ್ಸಲ್ ಮಾಡಬೇಕಾದರೆ ಅದಕ್ಕೆ ಕೆಲವು ನಿಯಮಗಳಿವೆ. ಅವುಗಳನ್ನು ನಾವು ಪಾಲಿಸಲೇಬೇಕು. ಅವರು ನೀಡಿದ ರೂಲ್ಸ್ ಅನ್ನು ನೀವು ಸರಿಯಾಗಿ ಅನುಸರಿಸದೇ, ಅಷ್ಟೇ ಸುಲಭವಾಗಿ ನಿಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳುವುದರ ಜೊತೆಗೆ ಹಣ ಹಿಂಪಡೆಯಬಹುದು.
- ನೀವು ಬುಕ್ ಮೈ ಶೋನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಲು ಬಯಸಿದ್ದಲ್ಲಿ, ಸಿನಿಮಾ ಪ್ರಾರಂಭವಾಗುವ 4 ಗಂಟೆಗಳ ಮುಂಚಿತವಾಗಿ ಮಾಡಬೇಕು.
- ತಡವಾದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಲು ಸಾಧ್ಯವಿಲ್ಲ. ಸರಿಯಾದ ಸಮಯಕ್ಕೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ, ಶೇ.30ರಷ್ಟು ಹಣ ಕಡಿತಗೊಂಡು ಉಳಿದ ಮೊತ್ತ ನಿಮಗೆ ಸಿಗುತ್ತದೆ.
- ಮರುಪಾವತಿಗಾಗಿ (Refund Payment) ನೀವು ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಕಿಂಗ್ ವಿಧಾನವನ್ನು ಆರಿಸಿದ್ದಲ್ಲಿ, ನಿಮ್ಮ ಖಾತೆಗೆ ಹಣ ಪಾವತಿಯಾಗಲು 7 ರಿಂದ 10 ದಿನ ಬೇಕಾಗುತ್ತದೆ.
ಇದನ್ನೂ ಓದಿ: ತಡವಾಗಿ ಎಚ್ಚೆತ್ತುಕೊಂಡ ಬುಕ್ ಮೈ ಶೋ: ಆನ್ಲೈನ್ ಬುಕಿಂಗ್ ಕ್ಲೋಸ್