ETV Bharat / entertainment

ನೆರೆಹೊರೆಯವರ ವಿರುದ್ಧ ಸಲ್ಮಾನ್​​ ಕೇಸ್ - ವಿಚಾರಣೆ ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

author img

By

Published : Oct 11, 2022, 12:54 PM IST

Updated : Oct 11, 2022, 1:36 PM IST

ನಟ ಸಲ್ಮಾನ್ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಕರಣದ ತೀರ್ಪನ್ನು ಬಾಂಬೆ ಹೈಕೋರ್ಟ್ ಕಾಯ್ದಿರಿಸಿದೆ.

Bombay High Court denies interim relief to actor Salman Khan
ಸಲ್ಮಾನ್ ಖಾನ್‌ಗೆ ಸಿಗದ ರಿಲೀಫ್

ಮುಂಬೈ: ಪನ್ವೇಲ್ ಫಾರ್ಮ್‌ಹೌಸ್ ನೆರೆಹೊರೆಯವರ ಜೊತೆಗಿನ ವಾದವು ನಟ ಸಲ್ಮಾನ್​ ಖಾನ್​ನನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗ ನಡೆಯುತ್ತಿರುವ ಈ ಪ್ರಕರಣದ ವಿಚಾರಣೆಯಿಂದಾಗಿ ಸಲ್ಮಾನ್‌ಗೆ ಮತ್ತಷ್ಟು ಸಂಕಟ ಎದುರಾಗಿದೆ.

ಪನ್ವೇಲ್​ನ ಫಾರ್ಮ್ ಹೌಸ್ ನಿವಾಸಿ ಕೇತನ್ ಕಕ್ಕಡ್ ಮತ್ತು ಸಲ್ಮಾನ್​​ ಖಾನ್​ ಪನ್ವೇಲ್​ನ ಜಾಗದ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೇತನ್ ಕಕ್ಕಡ್ ಮಾತನಾಡಿದ್ದರು. ಇದರಿಂದಾಗಿ ನೆರೆಹೊರೆಯವರ ವಿರುದ್ಧ ಸಲ್ಮಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಬಾಂಬೆ ಹೈಕೋರ್ಟ್‌ನಲ್ಲಿ ಈ ಅರ್ಜಿಯ ಮೇಲೆ, ಎರಡೂ ಕಡೆಯವರ ವಾದಗಳನ್ನು ಪೂರ್ಣಗೊಳಿಸಿ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ. ಬಾಂಬೆ ಸೆಷನ್ಸ್ ಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಮಾನ್ ಖಾನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿರುವ ಚೆಲ್ಲೋ ಶೋ ಚಿತ್ರದ ಬಾಲ ಪ್ರತಿಭೆ ರಾಹುಲ್​ ವಿಧಿವಶ

ಜಮೀನಿಗೆ ಬರದಂತೆ ಕೇತನ್​ನನ್ನು ಸಲ್ಮಾನ್ ಖಾನ್ ತಡೆದಿದ್ದರು. ಸ್ವಂತ ಜಮೀನಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆ ಕೇತನ್​ ನಟನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು. ಕೇವಲ ನನಗೆ ಮಾನಹಾನಿ ಮಾಡಲು ಈ ಆರೋಪ ಮಾಡಲಾಗುತ್ತಿದೆ ಎಂದು ಕೇತನ್​ ವಿರುದ್ಧ ಸಲ್ಮಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದನ್ನೂ ಓದಿ: ನೆರೆಹೊರೆಯವರ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು.. ಸಂಕಷ್ಟಕ್ಕೆ ಸಿಲುಕಿದ ನಟ ಸಲ್ಮಾನ್​ ಖಾನ್​!

Last Updated : Oct 11, 2022, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.