ETV Bharat / entertainment

ಸಲ್ಮಾನ್ ಖಾನ್​ ವಿರುದ್ಧದ FIR ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ - ಸಲ್ಮಾನ್ ಖಾನ್ ಪ್ರಕರಣಗಳು

ಸಲ್ಮಾನ್ ಖಾನ್​ ವಿರುದ್ಧ 2019ರಲ್ಲಿ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸಿ ಬಾಂಬೆ ಹೈಕೋರ್ಟ್ ಆದೇಶಿಸಿದೆ.

Salman Khan
ನಟ ಸಲ್ಮಾನ್ ಖಾನ್
author img

By

Published : Mar 30, 2023, 2:25 PM IST

Updated : Mar 30, 2023, 4:01 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಪತ್ರಕರ್ತರೊಬ್ಬರು 2019 ರಲ್ಲಿ ಅನುಚಿತ ವರ್ತನೆಯ ಆರೋಪದ ಮೇಲೆ ದಾಖಲಿಸಿದ್ದ ಎಫ್‌ಐಆರ್‌ ಅನ್ನು ಬಾಂಬೆ ಹೈಕೋರ್ಟ್ ಇಂದು ವಜಾಗೊಳಿಸಿತು. ಖಾನ್ ಹೊರತಾಗಿ, ಅವರ ಬಾಡಿಗಾರ್ಡ್ ನವಾಜ್ ಶೇಖ್ ವಿರುದ್ಧದ ದೂರನ್ನೂ ಸಹ ವಜಾ ಮಾಡಲಾಗಿದೆ. ಕಳೆದ ವರ್ಷ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಲ್ಮಾನ್ ಖಾನ್ ಮತ್ತು ಶೇಖ್ ಅವರಿಗೆ ನೀಡಿದ್ದ ಸಮನ್ಸ್ ಅನ್ನೂ ರದ್ದುಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ನ್ಯಾಯ ಪೀಠ ಆದೇಶಿಸಿತು.

ಪ್ರಕರಣದ ವಿವರ: 2019ರ ಏಪ್ರಿಲ್‌ನಲ್ಲಿ ಮುಂಬೈನ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುವಾಗ ಸಲ್ಮಾನ್ ಖಾನ್ ನನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಫೋಟೋ ತೆಗೆಯಲು ಮುಂದಾದಾಗ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಸಿಟ್ಟಾಗಿದ್ದ ನಟ ಜಗಳವಾಡಿ, ಬೆದರಿಕೆಯನ್ನೂ ಹಾಕಿದ್ದರು ಎಂದು ಪತ್ರಕರ್ತ ಆರೋಪಿಸಿದ್ದರು.

ಸಲ್ಮಾನ್ ವಿರುದ್ಧ ನಿಂದನೆ, ಹಲ್ಲೆ ಮತ್ತು ದರೋಡೆ ಆರೋಪದ ಮೇಲೆ ದೂರು ದಾಖಲಾಗಿತ್ತು. ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ನ್ಯಾಯಾಲಯಕ್ಕೆ ಹಾಜರಾಗುವಂತೆ ಸಲ್ಮಾನ್​ ಖಾನ್​ ಮತ್ತು ಬಾಡಿಗಾರ್ಡ್​ಗೆ ಸಮನ್ಸ್​ ಜಾರಿಯಾಗಿತ್ತು. ಈ ಸಮನ್ಸ್ ಪ್ರಶ್ನಿಸಿ, ಸಲ್ಮಾನ್ ಏಪ್ರಿಲ್ 2022 ರಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಬಾಂಗೆ ಹೈಕೋಟ್, ಸಲ್ಮಾನ್ ಅವರ ವಿರುದ್ಧದ ಎಫ್​ಐಆರ್ ವಜಾಗೊಳಿಸಿ ಆದೇಶಿಸಿದೆ. ​

ಬೆದರಿಕೆ ಮೇಲ್​ ಪ್ರಕರಣ: ಇನ್ನೂ ಈ ಬಹುಬೇಡಿಕೆ ತಾರೆಗೆ ಬಂದ ಬೆದರಿಕೆ ಮೇಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸೋಮವಾರದಂದು ಪೊಲೀಸ್​ ಕಸ್ಟಡಿಗೆ ವಹಿಸಲಾಗಿದೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿಯಾಗಿರುವ ಆರೋಪಿ ಧಕಡ್​ ರಾಮ್‌ನನ್ನು ಮುಂಬೈ ನ್ಯಾಯಾಲಯವು ಏಪ್ರಿಲ್​ 3ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಿದೆ. ಸಲ್ಮಾನ್​ ಖಾನ್​​ ಅವರಿಗೆ ಸಂಬಂಧಿಸಿದ ಈ ಪ್ರಕರಣ ಸಂಬಂಧ ಬಾಂದ್ರಾ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭಾನುವಾರ ಆರೋಪಿನ್ನು ಬಂಧಿಸಿದ್ದರು. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: IPL 2023: ನಾಳೆಯಿಂದ ಐಪಿಎಲ್‌ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!

ಮುಂದಿನ ಸಿನಿಮಾ: ಇನ್ನು ಟೈಗರ್ 3 ಸಲ್ಮಾನ್ ಖಾನ್​​ ಅವರ ಮುಂದಿನ ಸಿನಿಮಾ. ಇದು ಬಾಲಿವುಡ್​ನ ಬಹು ನಿರೀಕ್ಷಿತ ಚಿತ್ರವಾಗಿದ್ದು, ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಕುತೂಹಲರಾಗಿದ್ದಾರೆ. ಟೈಗರ್ 3 ಚಿತ್ರದ ಪ್ರಮುಖ ಪಾತ್ರಧಾರಿಗಳು ಸಲ್ಮಾನ್​ ಖಾನ್​, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ. ಅಲ್ಲದೇ ಪಠಾಣ್​ ಸಕ್ಸಸ್​ ಅಲೆಯಲ್ಲಿರುವ ನಟ ಶಾರುಖ್ ಖಾನ್ ಟೈಗರ್ 3ನಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ. ಶಾರುಖ್ ಅವರ ಸೂಪರ್​ ಹಿಟ್ ಪಠಾಣ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿರ್ವಹಿಸಿದ್ದರು. ಬಹುತೇಕ ಚಿತ್ರೀಕರಣ ಮುಗಿಸಿರುವ ಟೈಗರ್ 3 ಇದೇ ನವೆಂಬರ್​ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ

Last Updated : Mar 30, 2023, 4:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.