ETV Bharat / entertainment

'ದಿ ಆರ್ಚೀಸ್' ಈವೆಂಟ್​​​​ನಲ್ಲಿ ಬಚ್ಚನ್​​, ಖಾನ್​ ಫ್ಯಾಮಿಲಿ; ಬಾಲಿವುಡ್​ ಖ್ಯಾತನಾಮರ ಸಮಾಗಮ - the Archies event

The Archies Event​​​​: ನಿನ್ನೆ ಸಂಜೆ ನಡೆದ 'ದಿ ಆರ್ಚೀಸ್' ಪ್ರೀಮಿಯರ್ ಈವೆಂಟ್​ಬನಲ್ಲಿ ಬಾಲಿವುಡ್​​ ಸೂಪರ್​ ಸ್ಟಾರ್​ಗಳು ​​ ಭಾಗಿಯಾಗಿದ್ದರು.

Bollywood stars at the Archies event
'ದಿ ಆರ್ಚೀಸ್' ಈವೆಂಟ್​​​​ನಲ್ಲಿ ಬಾಲಿವುಡ್​ ಸ್ಟಾರ್ಸ್
author img

By ETV Bharat Karnataka Team

Published : Dec 6, 2023, 12:12 PM IST

Updated : Dec 6, 2023, 12:20 PM IST

ಜೋಯಾ ಅಖ್ತರ್ ನಿರ್ದೇಶನದ 'ದಿ ಆರ್ಚೀಸ್' ಸಿನಿಮಾ ನಾಳೆ (ಡಿಸೆಂಬರ್ 7) ಓಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಈ ಹಿನ್ನೆಲೆ ನಿನ್ನೆ (ಡಿಸೆಂಬರ್​ 5) ಮುಂಬೈನಲ್ಲಿ 'ದಿ ಆರ್ಚೀಸ್' ಪ್ರೀಮಿಯರ್ ಈವೆಂಟ್​ ಆಯೋಜನೆಗೊಂಡಿತ್ತು. ಬಚ್ಚನ್​​ ಮೊಮ್ಮಗ, ಕಿಂಗ್​​ ಖಾನ್​​​ ಪುತ್ರಿ, ಶ್ರೀದೇವಿ ಪುತ್ರಿಯ ಚೊಚ್ಚಲ ಚಿತ್ರವಾದ ಹಿನ್ನೆಲೆ ಪ್ರೀ ರಿಲೀಸ್​ ಈವೆಂಟ್​​​ ಅದ್ಧೂರಿಯಾಗೇ ಆಯೋಜನೆಗೊಂಡಿತ್ತು. ಕಾರ್ಯಕ್ರಮಕ್ಕೆ ಬಚ್ಚನ್​​, ಖಾನ್​ ಫ್ಯಾಮಿಲಿ ಸೇರಿದಂತೆ ಬಾಲಿವುಡ್​​ನ ಸೂಪರ್​ ಸ್ಟಾರ್​ಗಳು​​ ಸಾಕ್ಷಿಯಾದರು.

'ದಿ ಆರ್ಚೀಸ್' ಬಿಡುಗಡೆಗೂ ಮೊದಲು ಜೋಯಾ ಅಖ್ತರ್ ಅವರು ಚಿತ್ರೋದ್ಯಮದ ಗಣ್ಯರಿಗಾಗಿ ಸಿನಿಮಾದ ಸ್ಪೆಷಲ್​​ ಸ್ಕ್ರೀನಿಂಗ್​ ಆಯೋಜಿಸಲಾಗಿತ್ತು. ಸುಹಾನಾ ಖಾನ್​​​ ಅವರ ಚೊಚ್ಚಲ ಚಿತ್ರವಾದ ಹಿನ್ನೆಲೆ ಇಡೀ ಖಾನ್ ಕುಟುಂಬ ಕಾರ್ಯಕ್ರಮದಲ್ಲಿ ಹಾಜರಿತ್ತು. ಶಾರುಖ್ ಖಾನ್​​, ಪತ್ನಿ ಗೌರಿ ಖಾನ್​​ ಮತ್ತು ಮಕ್ಕಳಾದ ಆರ್ಯನ್​, ಅಬ್ರಾಂ ಈವೆಂಟ್​​​ನ ಮೆರುಗು ಹೆಚ್ಚಿಸಿತು. ಎಸ್​ಆರ್​ಕೆ ಅತ್ತೆ ಸವಿತಾ ಚಿಬ್ಬರ್ ಸಹ ಜೊತೆಗಿದ್ದರು..

ಖಾನ್​ ಕುಟುಂಬ ಮಾತ್ರವಲ್ಲದೇ ಇಡೀ ಬಚ್ಚನ್​​ ಕುಟುಂಬವೇ ಕಾರ್ಯಕ್ರಮದಲ್ಲಿ ಹಾಜರಿತ್ತು. ಅಗಸ್ತ್ಯ ನಂದಾ ಅವರಿಗೂ ಇದು ಚೊಚ್ಚಲ ಚಿತ್ರ. ಹಾಗಾಗಿ ಹಿರಿಯ ನಟ ಅಮಿತಾಭ್​​ ಬಚ್ಚನ್​​, ಜಯಾ ಬಚ್ಚನ್​​​, ಅಭಿಷೇಕ್​ ಬಚ್ಚನ್​​, ಐಶ್ವರ್ಯಾ ರೈ ಬಚ್ಚನ್​​​, ಆರಾಧ್ಯ ಬಚ್ಚನ್​​​ ಈವೆಂಟ್​ಗೆ ಆಗಮಿಸಿದ್ದರು. ಅಗಸ್ತ್ಯ ನಂದಾ ಅವರ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ಹಾಜರಿತ್ತು.

ಇದನ್ನೂ ಓದಿ: ದಿ ಆರ್ಚೀಸ್​ ಪ್ರೀಮಿಯರ್​ ಶೋನಲ್ಲಿ ಅಮ್ಮನ ಗೌನ್​ ತೊಟ್ಟು ಗಮನ ಸೆಳೆದ ಖುಷಿ ಕಪೂರ್​​

ಪಾಪರಾಜಿಗಳ ಕ್ಯಾಮರಾಗಳಿಗೆ ಖಾನ್​ ಮತ್ತು ಬಚ್ಚನ್​ ಕುಟುಂಬ ಪೋಸ್ ನೀಡಿದ್ದು, ಎಲ್ಲರ ಮೊಗ ನಗುವಿನಿಂದ ಕಂಗೊಳಿಸುತ್ತಿತ್ತು. ಜಾನ್ವಿ ಕಪೂರ್, ಶನಯಾ ಕಪೂರ್, ಕಾಜೋಲ್​​​, ಹೃತಿಕ್​​ ರೋಷನ್​​ ಮತ್ತು ಹಿರಿಯ ನಟಿ ರೇಖಾ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಸ್ಟಾರ್​ ಕಿಡ್ಸ್​​ ಸಿನಿಮಾ ಈವೆಂಟ್​ ಆದ ಹಿನ್ನೆಲೆ ಹಿಂದಿ ಚಿತ್ರರಂಗದ ಬಹುತೇಕ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಪಾಪರಾಜಿಗಳು ಸೋಷಿಯಲ್​ ಮೀಡಿಯಾದಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಖತ್​ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ಕೆಜಿಎಫ್​ ಸ್ಟಾರ್​ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ; 'ಯಶ್​​ 19' ಅನೌನ್ಸ್​ಮೆಂಟ್​ಗೆ ಕಾತರ

ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಪುತ್ರಿ ಖುಷಿ ಕಪೂರ್ ಅವರ ಅಭಿನಯದ ಚೊಚ್ಚಲ ಚಿತ್ರ ಕೂಡ ಹೌದು. ಈ ಹಿನ್ನೆಲೆ ಸಹೋದರಿಗೆ ಸಾಥ್​ ನೀಡಲು ಜಾನ್ವಿ ಕಪೂರ್​ ಕೂಡ ಆಗಮಿಸಿದ್ದರು. ಅಲ್ಲದೇ ಕತ್ರಿನಾ ಕೈಫ್, ರಣ್​ಬೀರ್​ ಕಪೂರ್​, ನೀತು ಕಪೂರ್​, ರಣ್​ವೀರ್​ ಸಿಂಗ್​​, ಬಾಬಿ ಡಿಯೋಲ್, ಇಬ್ರಾಹಿಂ ಅಲಿ ಖಾನ್​, ಶಿಲ್ಪಾ ಶೆಟ್ಟಿ, ಅನನ್ಯಾ ಪಾಂಡೆ ಸೇರಿದಂತೆ ಬಾಲಿವುಡ್​ನ ಬಹುತೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಸ್ಟಾರ್ಸ್ ಮಕ್ಕಳ ಸಿನಿಮಾಗೆ ಸಾಥ್ ನೀಡಿದರು.

Last Updated : Dec 6, 2023, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.