ETV Bharat / entertainment

ವಿಕ್ಟರಿ ವೆಂಕಟೇಶ್​ಗೆ ಟಕ್ಕರ್ ಕೊಡಲು ಬಂದ ಬಾಲಿವುಡ್ ಸ್ಟಾರ್ ಲುಕ್ ರಿವೀಲ್ - Bollywood star look reveal

ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.

Bollywood star look reveal
ವಿಕ್ಟರಿ ವೆಂಕಟೇಶ್​ಗೆ ಟಕ್ಕರ್ ಕೊಡಲು ಬಂದ ಬಾಲಿವುಡ್ ಸ್ಟಾರ್ ಲುಕ್ ರಿವೀಲ್
author img

By

Published : May 19, 2023, 11:06 PM IST

ಬಾಲಿವುಡ್ ಕಂಡ ಅತ್ಯದ್ಬುತ ನಟರಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ಒಬ್ಬರು. ಯಾವುದೇ ಪಾತ್ರ ಕೊಟ್ಟರು‌ ಲೀಲಾಜಾಲವಾಗಿ ಅಭಿನಯಿಸುವ, ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿರುವ ಸಿದ್ದಿಕಿ ಸೈಂಧವ್ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರೀಯತ್ತ ಹೆಜ್ಜೆ ಇಟ್ಟಿದ್ದಾರೆ.

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’. ಶೈಲೇಶ್ ಕೋಲನು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿದೆ. ವಿಕಾಸ್ ಮಲಿಕ್ ಎಂಬ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ದುಬಾರಿ ಕಾರಿನ ಬಾನೆಟ್ ಮೇಲೆ ಕುಳಿತು ಬೀಡಿ ಸೇದುತ್ತಾ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.

ಡಿಸೆಂಬರ್ 22ರಂದು ಕ್ರಿಸ್​ಮಸ್ ವಿಶ್ವಾದ್ಯಂತ ರಿಲೀಸ್: ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ನಿಹಾರಿಕಾ ಎಂಟರ್ಟೈನ್ಮೆಂಟ್ ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್‌ ಚಿತ್ರಕ್ಕೆ ಕಿಶೋರ್ ತಲ್ಲೂರ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸೈಂಧವ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಡಿಸೆಂಬರ್ 22ರಂದು ಕ್ರಿಸ್​ಮಸ್ ವಿಶ್ವಾದ್ಯಂತ ರಿಲೀಸ್ ಆಗಲಿದೆ.‌

ಇದನ್ನೂ ಓದಿ: ಆಯುಷ್ಮಾನ್ ಖುರಾನಾ ತಂದೆ ನಿಧನ.. ಕುಟುಂಬಸ್ಥರಿಂದ ಸಂತಾಪ

ಶ್ರದ್ಧಾ ಶ್ರೀನಾಥ್ 'ಸೈಂಧವ್​' ಸಿನಿಮಾಕ್ಕೆ ನಾಯಕಿ: ಸ್ಯಾಂಡಲ್​ವುಡ್​ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್​ ಬಹುಭಾಷಾ ನಟಿಯಾಗಿ ಭರ್ಜರಿ ಮಿಂಚುತ್ತಿದ್ದಾರೆ. ಯೂಟರ್ನ್​ ಚಿತ್ರದ ಮೂಲಕ ಪ್ರೇಕ್ಷಕರನ್ನು ವಿಶೇಷವಾಗಿ ಮನರಂಜಿಸಿ ಗಮನಸೆಳೆದಿದ್ದರು. ಸದ್ಯ ಕನ್ನಡದ ಜೊತೆಗೆ ಮಲಯಾಳಂ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಸಖತ್​ ಹವಾ ಕ್ರೀಯೆಟ್​ ಮಾಡುತ್ತಿದ್ದಾರೆ. ಈ ನಟಿ ನಟನೆಗೆ ಮನಸೋತಿರುವ ನಿರ್ದೇಶಕರು, ಕೈ ತುಂಬ ಅವಕಾಶಗಳನ್ನು ಕೊಡುತ್ತಿದ್ದಾರೆ. ಸದ್ಯ ಹೊಸ ಸಿನಿಮಾವೊಂದಕ್ಕೆ ಶ್ರದ್ಧಾ ಶ್ರೀನಾಥ್​ ಹಸಿರು ನಿಶಾನೆ ಸಿಗ್ನಲ್​ ತೋರಿದ್ದರು.

ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಜಡ್ಜ್​ಮೆಂಟ್​ನಲ್ಲಿ ದಿಗಂತ್​ಗೆ ಸಿಗುತ್ತಾ ನ್ಯಾಯ?

ಟಾಲಿವುಡ್​ ನಟ ವಿಕ್ಟರಿ ವೆಂಕಟೇಶ್​ ಅವರ 'ಸೈಂಧವ್​' ಚಿತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಶೈಲೇಶ್​ ಕೋಲನು ನೇತೃತ್ವದಲ್ಲಿ ಮೂಡಿಬರುತ್ತಿರುವ ಸಿನಿಮಾದ ಶೂಟಿಂಗ್​ ಈಗಾಗಲೇ ಮುಕ್ತಾಯಗೊಂಡಿದೆ. ನಿಹಾರಿಕಾ ಎಂಟರ್​ ಟೈನ್​ಮೆಂಟ್​ ಅಡಿಯಲ್ಲಿ ಭಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. 'ಸೈಂಧವ್​' ಸಿನಿಮಾಕ್ಕೆ ನಾಯಕಿಯಾಗಿದ್ದಾರೆ ಶ್ರದ್ಧಾ ಶ್ರೀನಾಥ್​. ಎಪ್ರೀಲ್​ ಮೊದಲ ವಾರದಲ್ಲಿ ಚಿತ್ರತಂಡ ಫಸ್ಟ್​ ಲುಕ್​ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಸರಳವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಶಿವರಾಜ್ ಕುಮಾರ್ ದಂಪತಿ

ಇದನ್ನೂ ಓದಿ: ಕಾನ್​ ಚಲನಚಿತ್ರೋತ್ಸವದಲ್ಲಿ ಭಾಗಿಯಾದ ಐಶ್ವರ್ಯಾ ರೈ: ವಸ್ತ್ರ ವಿನ್ಯಾಸಕ್ಕೆ ನೆಟ್ಟಿಗರಿಂದ ವಿಭಿನ್ನ ಟ್ರೋಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.