ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದಿ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ದಿವಂಗತ ಯಶ್ ಚೋಪ್ರಾ ಪತ್ನಿ ಪಮೇಲಾ ಚೋಪ್ರಾ (Pamela Chopra) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಹಿಂದಿ ಸಿನಿ ಗಣ್ಯರು ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದಿದ್ದಾರೆ.
- " class="align-text-top noRightClick twitterSection" data="
">
ನಿರ್ದೇಶಕ, ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಮುಂಬೈ ನಿವಾಸಕ್ಕೆ ಸೆಲೆಬ್ರಿಟಿಗಳು ಆಗಮಿಸಿ, ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಚೋಪ್ರಾ ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡಿರುವ ಬಾಲಿವುಡ್ ಕಿಂಗ್ ಖಾನ್ ಶಾರುಖ್, ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಮಗ ಆರ್ಯನ್ ಅವರೊಂದಿಗೆ ಬಂದ ಶಾರೂಕ್ ಖಾನ್ ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದರು. ಇನ್ನು ಬಾಲಿವುಡ್ನ ತಾರಾ ದಂಪತಿಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ಆಗಮಿಸಿ ಅಗಲಿದ ಜೀವಕ್ಕೆ ಸಂತಾಪ ಸೂಚಿಸಿದರು.
- " class="align-text-top noRightClick twitterSection" data="
">
ಇದನ್ನು ಓದಿ: 'ವಿಚ್ಛೇದನ'ವೆಂಬ ಕರಾಳ ಕ್ಷಣ-ನೋವಿನಿಂದ ಚೇತರಿಸಿಕೊಂಡಿಲ್ಲವೆಂದ ನಟಿ ಸಮಂತಾ
ನಟ ಹೃತಿಕ್ ರೋಷನ್ ಮತ್ತು ಅವರ ತಂದೆ ರಾಕೇಶ್ ರೋಷನ್ ಕೂಡಾ ಪಮೇಲಾ ಚೋಪ್ರಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಗಾಯಕ ಸೋನು ನಿಗಮ್ ಮತ್ತು ಅವರ ಪತ್ನಿ ಕೂಡ ಅಂತಿಮ ವಿಧಿ ವಿಧಾನಗಳಲ್ಲಿ ಉಪಸ್ಥಿತರಿದ್ದರು. ನಟಿ ಶ್ರದ್ಧಾ ಕಪೂರ್, ಭೂಮಿ ಪಡ್ನೇಕರ್ ಮತ್ತು ಅವರ ಸಹೋದರಿ, ಕಿರಣ್ ಖೇರ್, ನಟಿ ಕಾಜೋಲ್, ಶಿಲ್ಪಾ ಶೆಟ್ಟಿ, ನಟ ರಣ್ವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ, ನಟ ಅಮೀರ್ ಖಾನ್, ನಟ ಜಾನ್ ಅಬ್ರಹಾಂ ಕೂಡ, ನಿರ್ಮಾಪಕ ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ದೌಡಿಯಿಸಿ, ಅಗಲಿದ ಪಮೇಲಾ ಚೋಪ್ರಾ ಅವರ ಅಂತಿಮ ದರ್ಶನ ಪಡೆದುಕೊಂಡರು.
- " class="align-text-top noRightClick twitterSection" data="
">
ಇನ್ನು ಪಮೇಲಾ ಚೋಪ್ರಾ ಅವರ ನಿಧನದ ಸುದ್ದಿಯನ್ನು ಯಶ್ ರಾಜ್ ಫಿಲ್ಮ್ಸ್‌ನ ಅಧಿಕೃತ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಚಿತ್ರರಂಗದವರು ತಮ್ಮ ಟ್ವಿಟರ್, ಇನ್ಸ್ಟಾ ಮೂಲಕ ಸಂತಾಪ ಸೂಚಿಸುವ ಮೂಲಕ ಅಗಲಿದ ಜೀವಕ್ಕೆ ನಮನ ಸಲ್ಲಿಕೆ ಮಾಡಿದರು.
- " class="align-text-top noRightClick twitterSection" data="
">
ಇದನ್ನೂ ಓದಿ: 100 ದೇಶಗಳಲ್ಲಿ ಸಲ್ಮಾನ್ ಸಿನಿಮಾ ರಿಲೀಸ್: 5,700ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ
"ಪಮೇಲಾ ಚೋಪ್ರಾ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ನಿಮ್ಮ ಪ್ರಾರ್ಥನೆಗೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಕುಟುಂಬವು ಈ ಕ್ಷಣದಲ್ಲಿ ಗೌಪ್ಯತೆಯನ್ನು ಕೋರಲು ಬಯಸುತ್ತದೆ'' ಎಂದು ಯಶ್ ರಾಜ್ ಫಿಲ್ಮ್ಸ್ ಟ್ವೀಟ್ ಮಾಡಿಕೊಂಡಿದೆ. ಪಮೇಲಾ ಚೋಪ್ರಾ ಅವರು ಪುತ್ರರಾದ ಆದಿತ್ಯ ಚೋಪ್ರಾ ಮತ್ತು ಉದಯ್ ಚೋಪ್ರಾ ಅವರನ್ನು ಅಗಲಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ವಯೋಸಹಜ ಅನಾರೋಗ್ಯ: ಯಶ್ ಚೋಪ್ರಾ ಪತ್ನಿ ಪಮೇಲಾ ನಿಧನ!
ಇದನ್ನು ಓದಿ:ಹಿಂದಿ ಚಿತ್ರ ಬಾಲಿವುಡ್ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಲಿ: ಸಂಚಲನ ಮೂಡಿಸಿದ ಮಣಿ ರತ್ನಂ