ಸುಬ್ರಮಣ್ಯ: ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ನಿರ್ದೇಶನ, ನಿರ್ಮಾಣ ಮಾಡಿರುವ ಮಧುರ್ ಭಂಡಾರ್ಕರ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಟರಾಗಿ, ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರರಾಗಿ ಬಾಲಿವುಡ್‌ನಲ್ಲಿ ಪ್ರಸಿದ್ದರಾಗಿರುವ ಇವರು, ಪ್ರಿಯಾಂಕ ಚೋಪ್ರಾ ಅಭಿನಯದ ಫ್ಯಾಷನ್, ಟ್ರಾಫಿಕ್ ಸಿಗ್ನಲ್ ಹಾಗೂ ಹೀರೋಯಿನ್ ಹೀಗೆ ಸಾಕಷ್ಟು ಬಾಲಿವುಡ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇವರಿಗೆ 2016ರಲ್ಲಿ ಭಾರತದ ಸರ್ಕಾರದಿಂದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 2007ರಲ್ಲಿ ಟ್ರಾಫಿಕ್ ಸಿಗ್ನಲ್ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, 2014 ರ ಸಿರಾಕ್ಯೂಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೋಫಿಯಾ ಪ್ರಶಸ್ತಿ, 2013-14 ನೇ ಸಾಲಿನ ಕ್ರಿಯೇಟಿವ್ ಸ್ಪಿರಿಟ್ ಮತ್ತು ವಿಷನರಿ ಡೈರೆಕ್ಟರ್ಸ್ ಅವಾರ್ಡ್, UKಯ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರತಿಷ್ಠಿತ ಬ್ರಿಟಿಷ್ ಗೌರವ, ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಮಹಾರಾಷ್ಟ್ರ ಸರಕಾರವು ಭಂಡಾರ್ಕರ್ ಅವರಿಗೆ ರಾಜ್ ಕಪೂರ್ ಸ್ಮೃತಿ ಪ್ರಶಸ್ತಿ ಗೌರವ ದೊರೆತಿದೆ.
ಇದನ್ನೂ ಓದಿ: ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ.. ಕಾತರಕ್ಕೆ ಕೊನೆಗೂ ತೆರೆ