ETV Bharat / entertainment

ಖ್ಯಾತ ಬಾಲಿವುಡ್ ನಿರ್ದೇಶಕ ಪ್ರದೀಪ್​ ಸರ್ಕಾರ್ (68) ನಿಧನ

ಬಾಲಿವುಡ್ ಸಿನಿಮಾ​ ನಿರ್ದೇಶಕ ಪ್ರದೀಪ್​ ಸರ್ಕಾರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

Pradeep Sarkar
ಪ್ರದೀಪ್​ ಸರ್ಕಾರ್
author img

By

Published : Mar 24, 2023, 10:07 AM IST

Updated : Mar 24, 2023, 10:41 AM IST

ಖ್ಯಾತ ಸಿನಿಮಾ ನಿರ್ದೇಶಕ ಪ್ರದೀಪ್​ ಸರ್ಕಾರ್(68)​ ಇಂದು ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಡಯಾಲಿಸಿಸ್​ಗೆ ಒಳಗಾಗುತ್ತಿದ್ದರು. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸರ್ಕಾರ್​ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಪರಿಣೀತಾ ಸೇರಿದಂತೆ ಹಲವು ಹಿಟ್​ ಸಿನಿಮಾಗಳನ್ನು ನೀಡಿ ಹೆಸರುವಾಸಿಯಾಗಿದ್ದ ಸರ್ಕಾರ್​ ಅಗಲಿಕೆಗೆ ಚಿತ್ರಲೋಕದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸರ್ಕಾರ್​ ಯಶಸ್ವಿ ಸಿನಿಮಾಗಳಿವು..: ಪ್ರದೀಪ್​ ಸರ್ಕಾರ್​ ನಿರ್ದೇಶಿಸಿದ ಸಿನಿಮಾಗಳು ಬ್ಲಾಕ್​ಬಸ್ಟರ್​ ಸಕ್ಸಸ್​ ಕಂಡಿವೆ. 2005 ರಲ್ಲಿ ಬಿಡುಗಡೆಯಾದ 'ಪರಿಣೀತಾ' ಸೂಪರ್​ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಸೈಫ್​ ಅಲಿ ಖಾನ್​, ವಿದ್ಯಾ ಬಾಲನ್​, ಸಂಜಯ್​ ದತ್​ ಸೇರಿದಂತೆ ಅನೇಕ ತಾರೆಯರು ಅಭಿನಯಿಸಿದ್ದರು. ಈ ಸಿನಿಮಾಗಾಗಿ ಸರ್ಕಾರ್​ ಅವರಿಗೆ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯು ಲಭಿಸಿದೆ. ಲವ್​ ಸ್ಟೋರಿ ಥೀಮ್​ ಇಟ್ಟುಕೊಂಡಿದ್ದ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿತ್ತು.

ಅದಾದ ನಂತರ ಸರ್ಕಾರ್​ ನಿರ್ದೇಶನದಲ್ಲಿ ಮೂಡಿಬಂದ ಲಾಗಾ ಚುನಾರಿ ಮೇ ದಾಂಗ್​ (2007), ಲಫಂಗೆ ಪರಿಂದೆ (2010), ಮಾರ್ಡಾನಿ (2014) ಮತ್ತು ಹೆಲಿಕಾಪ್ಟರ್​ ಈಲಾ (2018) ಎಲ್ಲವೂ ಯಶಸ್ವಿಯಾಗಿತ್ತು. 2020 ರಲ್ಲಿ ಬಿಡುಗಡೆಯಾದ ವೆಬ್​ ಸೀರೀಸ್ 'ಡುರಂಗ' ಸರ್ಕಾರ್​ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೊನೆಯ ಚಿತ್ರವಾಗಿದೆ. ಇದರಲ್ಲಿ ಗುಲ್ಶನ್​ ದೇವಯ್ಯ ಮತ್ತು ದ್ರಷ್ಟಿ ಧಾಮಿ ನಟಿಸಿದ್ದಾರೆ. ಅಲ್ಲದೇ ಸರ್ಕಾರ್ ಅವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ​

ಇದನ್ನೂ ಓದಿ: ಜೂಮೆ ಜೋ ಪಠಾಣ್​​ ಹಾಡಿಗೆ ಮೈ ಕುಣಿಸಿದ ಇರ್ಫಾನ್ ಪಠಾಣ್ ಪುತ್ರ.. ವಿಡಿಯೋ ಮೆಚ್ಚಿದ ಎಸ್​ಆರ್​ಕೆ

ಸಿನಿತಾರೆಯರಿಂದ ಸಂತಾಪ: ನಿರ್ದೇಶಕ ಪ್ರದೀಪ್​ ಸರ್ಕಾರ್​ ಅಗಲಿಕೆ ಸಿನಿರಂಗಕ್ಕೆ ಆಘಾತ ನೀಡಿದೆ. ನಟಿ ನೀತು ಚಂದ್ರ ಟ್ವೀಟ್​ ಮಾಡಿ, "ನಮ್ಮ ಆತ್ಮೀಯ ಬಾಲಿವುಡ್​ ನಿರ್ದೇಶಕ ಪ್ರದೀಪ್​ ಸರ್ಕಾರ್​ ಅಗಲಿಕೆ ನೋವನ್ನುಂಟು ಮಾಡಿದೆ. ನಾನು ಅವರೊಂದಿಗೆ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದೆ. ದಾದಾ, ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತೇವೆ" ಎಂದು ಬರೆದು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: IPL 2023: ಉದ್ಘಾಟನಾ ಸಮಾರಂಭದಲ್ಲಿ ಮಿಂಚು ಹರಿಸಲಿದ್ದಾರೆ ರಶ್ಮಿಕಾ ಮಂದಣ್ಣ, ತಮನ್ನಾ

ಬಾಲಿವುಡ್​ ನಿರ್ದೇಶಕ ಹನ್ಸಾಲ್​ ಮೆಹ್ತಾ, ನಟ ಅಜಯ್​ ದೇವಗನ್​, ನಟ ಮನೋಜ್​ ಬಾಜಪೇಯಿ, ನಟ ನೇಲ್​ ನಿತಿನ್​ ಮುಖೇಶ್​, ನಿರ್ದೇಶಕ ಅಶೋಕ್​ ಪಂಡಿತ್​ ಸೇರಿದಂತೆ ಅನೇಕ ಚಿತ್ರಲೋಕದ ಗಣ್ಯರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಸಾಂತಾಕ್ರೂಜ್ ಸ್ಮಶಾನದಲ್ಲಿ ಸರ್ಕಾರ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಇದರಲ್ಲಿ ಅನೇಕ ಸಿನಿ ಗಣ್ಯರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಕೊರೆಯುವ ಚಳಿಯಲ್ಲಿ 'ಲಿಯೋ' ಶೂಟಿಂಗ್: ಸಿಬ್ಬಂದಿ ಶ್ರಮಕ್ಕೆ ನಿರ್ಮಾಪಕರಿಂದ ವಿಶೇಷ ಧನ್ಯವಾದ

Last Updated : Mar 24, 2023, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.