ETV Bharat / entertainment

ಮಕ್ಕಳ ಶಾಲಾ ಸಮಾರಂಭಕ್ಕೆ ಸಾಕ್ಷಿಯಾದ ಬಚ್ಚನ್​, ಖಾನ್​ ಕುಟುಂಬಸ್ಥರು: ವಿಡಿಯೋ ನೋಡಿ - Shah Rukh Khan

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಕಾರ್ಯಕ್ರಮದಲ್ಲಿ ಬಾಲಿವುಡ್​ ತಾರೆಯರು ಕಂಡುಬಂದರು.

Bollywood celebrities at their children school function
ಮಕ್ಕಳ ಶಾಲಾ ಸಮಾರಂಭಕ್ಕೆ ಸಾಕ್ಷಿಯಾದ ಬಚ್ಚನ್​, ಖಾನ್​ ಕುಟುಂಬಸ್ಥರು
author img

By ETV Bharat Karnataka Team

Published : Dec 16, 2023, 9:38 AM IST

Updated : Dec 16, 2023, 9:53 AM IST

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು. ಮಕ್ಕಳ ಶಾಲಾ ಸಮಾರಂಭಕ್ಕೆ ಸ್ಟಾರ್ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದು, ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸಖತ್​ ಸದ್ದು ಮಾಡುತ್ತಿವೆ. ಬಚ್ಚನ್​, ಖಾನ್​ ಕುಟುಂಬಸ್ಥರ ವಿಡಿಯೋಗಳು ಶರವೇಗದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್​​ ಬಚ್ಚನ್​​​ ನಡುವೆ ಬಿರುಕು ಮೂಡಿದೆ ಅನ್ನೋದು ಹಲವರ ಊಹೆ. ಅಂತೆ ಕಂತೆಗಳಿಗೆ ಬಚ್ಚನ್​ ಫ್ಯಾಮಿಲಿ ಮಾತ್ರ ಡೋಂಟ್​ ಕೇರ್​. ಅದೇನೇ ವದಂತಿಗಳಿದ್ದರೂ ಸ್ಟಾರ್ ಕಪಲ್ ಐಶ್​ - ಅಭಿ ಆಗಾಗ್ಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಷ್ಟೇ ದಿ ಆರ್ಚೀಸ್ ಸ್ಪೆಷಲ್​ ಸ್ಕ್ರೀನಿಂಗ್​​​ನಲ್ಲಿ ಇಡೀ ಬಚ್ಚನ್​​ ಕುಟುಂಬ ಹಾಜರಿತ್ತು. ನಿನ್ನೆ ಕೂಡ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ ಪ್ರೋಗ್ರಾಮ್​ಗೆ ಬಚ್ಚನ್​ ಫ್ಯಾಮಿಲಿ ಆಗಮಿಸಿತ್ತು.

ಪ್ರತ್ಯೇಕತೆಯ ಹಲವು ವದಂತಿಗಳ ನಡುವೆ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಇರುವ ವಿಡಿಯೋಗಳು ಹೊರಬಿದ್ದಿವೆ. ಮುದ್ದು ಮಗಳು ಆರಾಧ್ಯ ಅವರ ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರು ಪತಿ ಅಭಿಷೇಕ್ ಬಚ್ಚನ್ ಮತ್ತು ಮಾವ ಅಮಿತಾಭ್​​ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು.

ಇದೇ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಕೂಡ ತಮ್ಮ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡರು. ಈ ಎರಡೂ ವಿವಿಐಪಿ ಕುಟುಂಬಗಳು ಸೇರಿದಂತೆ ಹಲವು ಬಾಲಿವುಡ್​ ತಾರೆಯರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಪಾಪರಾಜಿಯೊಬ್ಬರು ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​​​ ಖಾತೆಯಲ್ಲಿ ಬಚ್ಚನ್ ಕುಟುಂಬ ಮತ್ತು ಖಾನ್​​ ಕುಟುಂಬದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ತಮ್ಮ ತಾಯಿ ಬೃಂದಾ ರೈ ಅವರೊಂದಿಗೆ ಕಾರ್ಯಕ್ರಮಕ್ಕೆ ತಲುಪಿದರು. ಅಭಿಷೇಕ್ ಬಚ್ಚನ್ ತಮ್ಮ ತಂದೆ ಅಮಿತಾಭ್​​ ಬಚ್ಚನ್ ಮತ್ತು ಸೋದರಳಿಯ ಅಗಸ್ತ್ಯ ನಂದಾ ಅವರೊಂದಿಗೆ ಸ್ಥಳಕ್ಕೆ ತಲುಪಿದರು. ಕಾರಿನಿಂದ ಇಳಿದ ನಂತರ ಐಶ್ವರ್ಯಾ ಪಾಪರಾಜಿಗಳತ್ತ ತಿರುಗಿ ಕೈ ಬೀಸಿ ಮುಗುಳ್ನಕ್ಕಳು. ನಂತರ ಅವರು ಬಚ್ಚನ್ ಕುಟುಂಬದೊಂದಿಗೆ ಸೇರಿ ಮುನ್ನಡೆದರು. ಮಾವ ಮತ್ತು ಅಗಸ್ತ್ಯ ನಂದಾ ಜೊತೆ ಮಾತನಾಡುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಶಾಲೆಯ ಒಳಗೆ ಹೋಗುತ್ತಿದ್ದಾಗ ಅಭಿಷೇಕ್ ಐಶ್ವರ್ಯಾ ಬಹಳ ಆತ್ಮೀಯವಾಗಿ ಮಾತನಾಡುತ್ತಾ ಮುನ್ನಡೆದಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ಆಲಿಯಾ ಅಂದ ವರ್ಣನಾತೀತ: ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳ ಕುತೂಹಲ

ಡಂಕಿ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಶಾರುಖ್ ಖಾನ್ ಕೂಡ ತಮ್ಮ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡರು. ಕಿಂಗ್ ಖಾನ್ ಪತ್ನಿ ಗೌರಿ ಖಾನ್ ಮತ್ತು ಮಗಳು ಸುಹಾನಾ ಖಾನ್ ಶಾಲೆ ಒಳಗೆ ಹೋಗುತ್ತಿರುವುದನ್ನು ವೈರಲ್​​ ವಿಡಿಯೋಗಳಲ್ಲಿ ಕಾಣಬಹುದು. ಈವೆಂಟ್​ಗೆ ಗೌರಿ ಮತ್ತು ಸುಹಾನಾ ಎಥ್ನಿಕ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ. ಎಸ್​ಆರ್​ಕೆ ಬ್ಲ್ಯಾಕ್​ ಸೂಟ್‌ನಲ್ಲಿ ಸಖತ್​ ಹ್ಯಾಡ್ಸಂ ಆಗಿ ಕಾಣಿಸಿಕೊಂಡರು.

ಇದನ್ನೂ ಓದಿ: 'ಸಲಾರ್​​'ಗೆ ಸಿನಿಮ್ಯಾಟಿಕ್​​ ಏರ್ ಸೆಲ್ಯೂಟ್: ಕೆನಡಾ ಅಭಿಮಾನಿಗಳ ಅದ್ಭುತ ವಿಡಿಯೋ ನೋಡಿ

ಇದೇ ಶಾಲೆಯಲ್ಲಿ ಬಾಲಿವುಡ್​ ತಾರೆಯರ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈವೆಂಟ್​ಗೆ ಕರೀನಾ ಕಪೂರ್ ಖಾನ್​, ಕರಣ್ ಜೋಹರ್, ಅಪೂರ್ವ ಮೆಹ್ತಾ, ಶಾಹಿದ್ ಕಪೂರ್, ಮೀರಾ ರಜಪೂತ್ ಸೇರಿದಂತೆ ಹಲವು ಬಾಲಿವುಡ್​​ ಸೆಲೆಬ್ರಿಟಿಗಳು ಆಗಮಿಸಿದ್ದರು.

Last Updated : Dec 16, 2023, 9:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.