ETV Bharat / entertainment

ಮುಂಬೈ ಪೊಲೀಸರ ವಾರ್ಷಿಕ ಕಾರ್ಯಕ್ರಮಕ್ಕೆ ಮೆರುಗು ತಂದ ಬಾಲಿವುಡ್​ ತಾರೆಯರು: ವಿಡಿಯೋ - ತೇಜಸ್ವಿ ಪ್ರಕಾಶ್​

Umang 2023: ಮುಂಬೈ ಪೊಲೀಸರ ವಾರ್ಷಿಕ ಕಾರ್ಯಕ್ರಮ-'Umang 2023'ರಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

Bollywood celebrities at Mumbai Police annual event
ಮುಂಬೈ ಪೊಲೀಸರ ವಾರ್ಷಿಕ ಕಾರ್ಯಕ್ರಮದಲ್ಲಿ ಬಾಲಿವುಡ್​ ತಾರೆಯರು
author img

By ETV Bharat Karnataka Team

Published : Dec 24, 2023, 3:38 PM IST

ಶನಿವಾರ ಸಂಜೆ ನಡೆದ ಮುಂಬೈ ಪೊಲೀಸರ ವಾರ್ಷಿಕ ಕಾರ್ಯಕ್ರಮ 'Umang 2023'ರಲ್ಲಿ ಬಾಲಿವುಡ್​ ತಾರೆಯರ ದಂಡೇ ನೆರೆದಿತ್ತು. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕರಣ್ ಜೋಹರ್, ರಣ್​​ವೀರ್ ಸಿಂಗ್, ಸಲ್ಮಾನ್ ಖಾನ್, ಶಾರುಖ್ ಖಾನ್, ರಣ್​​​ಬೀರ್ ಕಪೂರ್, ಶೆಹನಾಜ್ ಗಿಲ್, ತೇಜಸ್ವಿ ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ.

ನಟ-ನಟಿಯರು ಆಕರ್ಷಕ ದಿರಿಸಿನಲ್ಲಿ ಕಾಣಿಸಿಕೊಂಡರು. ಹೆಚ್ಚಿನ ನಟಿಯರು ಸೀರೆಯುಟ್ಟಿದ್ದರು. ಸಿನಿಮಾ ಸುಂದರಿಯರ ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೆಲೆಬ್ರಿಟಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ನೀಲಿ ಬಣ್ಣದ ಬನಾರಸಿ ಸೀರೆಯಲ್ಲಿ ಫೈಟರ್​ ಸಿನಿಮಾಗೆ ಸಜ್ಜಾಗುತ್ತಿರುವ ದೀಪಿಕಾ ಪಡುಕೋಣೆ ಬೆರಗುಗೊಳಿಸುವ ನೋಟ ಬೀರಿದರು. ಸೀರೆಗೆ ಹೊಂದಿಕೆಯಾಗುವ ಆಭರಣಗಳು, ಬನ್‌ ಹೇರ್​ಸ್ಟೈಲ್​, ಕನಿಷ್ಟ ಮೇಕಪ್​ನೊಂದಿಗೆ ಆಗಮಿಸಿದ್ದ ಅವರು ಗಮನ ಸೆಳೆದರು. ಶೆಹನಾಜ್ ಗಿಲ್ ಜೊತೆಗೆ ಅವರು ಕುಳಿತಿದ್ದರು.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ ಫ್ಲೋರಲ್​ ಪ್ರಿಂಟೆಡ್ ಕೋ-ಆರ್ಡ್ ಔಟ್​ಫಿಟ್​ನಲ್ಲಿ ಆಗಮಿಸಿದ್ದರು. ನಾಗಿನ್ 6ರಲ್ಲಿ ಕಾಣಿಸಿಕೊಂಡಿದ್ದ ತೇಜಸ್ವಿ ಪ್ರಕಾಶ್​ ಕೂಡ​ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಪಿಂಕ್​ ಸೀರೆಯುಟ್ಟಿದ್ದ ಈ ನಟಿ ಛಾಯಾಗ್ರಾಹಕರ ಕ್ಯಾಮರಾಗಳಿಗೆ ಪೋಸ್ ನೀಡಿದರು. ಇವರ ವಿಡಿಯೋಗಳು ಹೆಚ್ಚು ವೈರಲ್​ ಆಗಿವೆ.

ಇದನ್ನೂ ಓದಿ: ಸ್ಟೈಲಿಶ್​​ ಸೀರೆಯುಟ್ಟು ಕಿಲ್ಲಿಂಗ್​​ ಲುಕ್​ ಕೊಟ್ಟ ಕೃತಿ ಸನೋನ್​​​; ಆಕರ್ಷಕ ಫೋಟೋಗಳಿಲ್ಲಿವೆ

ಡಂಕಿ ನಟ ಶಾರುಖ್ ಖಾನ್​ ಸೂಟ್‌ ಬೂಟು ಧರಿಸಿ ಸ್ಟೈಲಿಶ್​​ ಎಂಟ್ರಿ ಕೊಟ್ಟರು. ಸಲ್ಮಾನ್ ಖಾನ್ ಕಡು ನೀಲಿ ಬಣ್ಣದ ಶರ್ಟ್, ಜಾಕೆಟ್‌ನಲ್ಲಿ ಗಂಭೀರ ನೋಟ ಬೀರಿದರು. ಟೈಗರ್ 3 ನಟ ಹೊರಡುವ ಮುನ್ನ ವೀಲ್​ ಚೇರ್​​ನಲ್ಲಿದ್ದ ಹೆಸರಾಂತ ಗಾಯಕಿ ಉಷಾ ಉತ್ತುಪ್‌ ಅವರನ್ನು ಅಪ್ಪಿಕೊಂಡರು. ಇನ್ನು, ರಣ್​​ವೀರ್ ಸಿಂಗ್ , ವಿಜಯ್ ವರ್ಮಾ, ಕರಣ್ ಜೋಹರ್, ಕಿಯಾರಾ ಅಡ್ವಾಣಿ, ಅನನ್ಯಾ ಪಾಂಡೆ, ಆದಿತ್ಯ ರಾಯ್ ಕಪೂರ್ ಸೇರಿದಂತೆ ಹಲವರ ವಿಡಿಯೋಗಳು ವೈರಲ್​ ಆಗುತ್ತಿದೆ. ಹೆಚ್ಚಿನ ನಟಿಯರು ಸಾಂಪ್ರದಾಯಿಕ, ವಿಶೇಷವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಈಗಾಗಲೇ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಮಿನುಗುವ ಸೀರೆಯಲ್ಲಿ ಕಂಗೊಳಿಸಿದ ಜಾಹ್ನವಿ ಕಪೂರ್​ : Photos​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.