ETV Bharat / entertainment

ನೇಣು ಬಿಗಿದುಕೊಂಡು ಕಲಾ ನಿರ್ದೇಶಕ ​ದೇಸಾಯಿ ಆತ್ಮಹತ್ಯೆ: ಪೊಲೀಸ್​ ತನಿಖೆಯಲ್ಲಿ ಬಯಲು, ಎನ್​ಡಿ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ - art director Nitin death is due to hanging

ಖ್ಯಾತ ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ಅವರ ಆತ್ಮಹತ್ಯೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ ಸ್ಟುಡಿಯೋದಲ್ಲಿಯೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ನೇಣು ಬಿಗಿದುಕೊಂಡು ಕಲಾ ನಿರ್ದೇಶಕ ​ದೇಸಾಯಿ ಆತ್ಮಹತ್ಯೆ

author img

By

Published : Aug 3, 2023, 7:54 AM IST

ರಾಯಗಡ(ಮಹಾರಾಷ್ಟ್ರ) : ಸೂಪರ್​ಹಿಟ್​​ ಚಿತ್ರಗಳನ್ನು ನೀಡಿದ್ದ ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲಿಸರು, ನೇಣು ಬಿಗಿದುಕೊಂಡಿದ್ದೇ ಕಾರಣ ಎಂದಿದ್ದಾರೆ. ಇತ್ತ ಅವರ ಕುಟುಂಬಸ್ಥರು ದೇಸಾಯಿ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಟುಡಿಯೋದಲ್ಲೇ ಅಂತ್ಯಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಖ್ಯಾತ ಕಲಾ ನಿರ್ದೇಶಕ ದೇಸಾಯಿ ಅವರು ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಆಗಸ್ಟ್​ 2 ರಂದು ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಅವರದ್ದೇ ಎನ್‌ಡಿ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಸಿನಿಮಾ ರಂಗವನ್ನು ದಿಗ್ಭ್ರಮೆಗೊಳಿಸಿತ್ತು.

ಮರಣೋತ್ತರ ಪರೀಕ್ಷೆ: ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಮರಣೋತ್ತರ ಪರೀಕ್ಷೆಯನ್ನು ನಾಲ್ವರು ವೈದ್ಯರ ತಂಡ ಬುಧವಾರ ನಡೆಸಿತು. ಪ್ರಾಥಮಿಕ ವರದಿಯಲ್ಲಿ ಪ್ರಕಾರ, ಸಾವಿಗೆ ನೇಣು ಬಿಗಿದುಕೊಂಡಿದ್ದೇ ಕಾರಣ ಎಂದು ತಿಳಿದುಬಂದಿದೆ. ನಿರ್ದೇಶಕರ ಮೃತದೇಹವನ್ನು ಖಲಾಪುರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ತಂದಿದ್ದರು.

ನಿತಿನ್ ದೇಸಾಯಿ ಅವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅವರ ಎನ್​ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಹಲವು ಅನುಮಾನಗಳನ್ನು ಹುಟ್ಟಿಸಿದ್ದವು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ನೇಣು ಹಾಕಿಕೊಂಡ ಕಾರಣ ಉಸಿರುಗಟ್ಟಿ ಸಾವಾಗಿದೆ ಎಂದಿದೆ.

ಹಣಕಾಸಿನ ಸಮಸ್ಯೆ ಕಾರಣ: ಮಹಾರಾಷ್ಟ್ರದ ಶಾಸಕ ಮಹೇಶ್ ಬಾಲ್ಡಿ ಅವರು 'ಲಗಾನ್' ಸಿನಿಮಾದ ಪ್ರಸಿದ್ಧ ಕಲಾ ನಿರ್ದೇಶಕರು ಆರ್ಥಿಕ ಒತ್ತಡದಲ್ಲಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಹೇಳಿದ್ದರು.

ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ: ದೇಸಾಯಿ ಅವರ ಅಂತ್ಯಕ್ರಿಯೆಯನ್ನು ಆತ್ಮಹತ್ಯೆ ಮಾಡಿಕೊಂಡ ಎನ್‌ಡಿ ಸ್ಟುಡಿಯೋದಲ್ಲೇ ನಡೆಸಲಾಗುವುದು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಜೆಜೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೋಮನಾಥ್ ಘರ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಸ್ಥಳದಲ್ಲಿ ಪತ್ತೆಯಾದ ಮೊಬೈಲ್ ಫೋನ್‌ಗಳು ಸೇರಿದಂತೆ ಇತರ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ತನಿಖೆಗೆ ಒಳಪಡಿಸಲಾಗುವುದು. ನಿರ್ದೇಶಕರ ಆಪ್ತ ಸಹಾಯಕ, ವಾಹನ ಚಾಲಕನ ಹೇಳಿಕೆಗಳನ್ನೂ ಸಹ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಬಾಲಿವುಡ್​ನಲ್ಲಿ ಹವಾ: ಬಾಲಿವುಡ್‌ನ ಅತ್ಯುತ್ತಮ ಕಲಾ ನಿರ್ದೇಶಕರಲ್ಲಿ ಓರ್ವರಾದ ದೇಸಾಯಿ ಅವರು ಹಮ್ ದಿಲ್ ದೇ ಚುಕೆ ಸನಮ್ (2000), ಲಗಾನ್ (2002), ಮತ್ತು ದೇವದಾಸ್ (2003), ಜೋಧಾ ಅಕ್ಬರ್ (2008) ಮತ್ತು ಪ್ರೇಮ್ ರತನ್ ಧನ್ ಪಾಯೋ (2015) ನಂತಹ ಚಲನಚಿತ್ರಗಳಲ್ಲಿ ಸಮೃದ್ಧ ಕಲೆ ಅವರಿಗೆ ಹೆಸರು ತಂದಿತ್ತು. ಅವರ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಬಂದಿವೆ.

ದೇಸಾಯಿ ಅವರು ತಮ್ಮ ನವನವೀನ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದ್ದರು. ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರಂತಹ ನಿರ್ಮಾಪಕರೊಂದಿಗೆ ಸೇರಿ ಸಿನಿಮಾ ಮಾಡಿದ್ದರು.

ಇದನ್ನೂ ಓದಿ: ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ಇನ್ನಿಲ್ಲ - ಟ್ವಿಟರ್​ನಲ್ಲಿ ಸಂತಾಪ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.