ETV Bharat / entertainment

ಬಿಜಿಲಿ ಮಹಾದೇವರ ದರ್ಶನ ಪಡೆದ ಬಾಲಿವುಡ್​ ನಟಿ ಸಾರಾ ಅಲಿಖಾನ್​​ - ಈಟಿವಿ ಭಾರತ ಕನ್ನಡ

ಹಿಮಾಚಲ ಪ್ರದೇಶದ ಕುಲುವಿಗೆ ಭೇಟಿ ನೀಡಿದ ಸಾರಾ ಅಲಿಖಾನ್​ - ಬಿಜಿಲಿ ಮಹಾದೇವ ದೇವಸ್ಥಾನದಲ್ಲಿ ಶಿವಲಿಂಗ ದರ್ಶನ ಪಡೆದ ಸಾರಾ

bollywood-actress-sara-ali-khan-in-kullu-actress-sara-ali-khan-in-himachal-sara-ali-khan-at-bijli-mahadev-temple-kullu
ಬಿಜಿಲಿ ಮಹಾದೇವರ ದರ್ಶನ ಪಡೆದ ಬಾಲಿವುಡ್​ ನಟಿ ಸಾರಾ ಅಲಿಖಾನ್​​
author img

By

Published : Mar 16, 2023, 5:27 PM IST

ಕುಲು (ಹಿಮಾಚಲ ಪ್ರದೇಶ): ಬಾಲಿವುಡ್ ಖ್ಯಾತ ನಟಿ ಸಾರಾ ಅಲಿ ಖಾನ್ ಇಂದು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಖರಾಹಲ್ ಕಣಿವೆ ಮೇಲಿರುವ ಬಿಜಿಲಿ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಣಿವೆ ಮೇಲಿನ ದೇವಾಲಯದಲ್ಲಿ ಶಿವಲಿಂಗದ ದರ್ಶನ ಪಡೆದಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಸಾರಾ ಅಲಿ ಖಾನ್ ತನ್ನ ತಾಯಿ ಅಮೃತಾ ಜೊತೆ ಇಲ್ಲಿಗೆ ಬಂದಿದ್ದಾರೆ. ಜೊತೆಗೆ ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಖಾನ್ ಇಲ್ಲೇ ಇದ್ದು, ಒಂದು ವೆಬ್ ಸೀರೀಸ್​ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಸಾರಾ ಅಲಿ ಖಾನ್ ಇಲ್ಲಿನ ಲಾಹೌಲ್ ಕಣಿವೆಗೆ ಭೇಟಿ ನೀಡಿದ್ದರು. ಅಲ್ಲಿ ಕಾಫಿ ಕುಡಿಯುವ ಮತ್ತು ಪರೋಠ ತಿನ್ನುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಸಾರಾ ಅವರು ಲಾಹೌಲ್ ಸ್ಪಿತಿ ಬಯಲು ಪ್ರದೇಶದಲ್ಲಿ ಸುತ್ತಾಡುತ್ತ, ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

bollywood-actress-sara-ali-khan-in-kullu-actress-sara-ali-khan-in-himachal-sara-ali-khan-at-bijli-mahadev-temple-kullu
ಬಾಲಿವುಡ್​ ನಟಿ ಸಾರಾ ಅಲಿಖಾನ್​​

ಈ ಹಿಂದೆ ಬಾಲಿವುಡ್​ ಖ್ಯಾತ ನಟ ಸುನೀಲ್ ಶೆಟ್ಟಿಯವರು ಕೂಡ ಸಿನಿಮಾವೊಂದರ ಶೂಟಿಂಗ್‌ಗಾಗಿ ಕುಲ್ಲುವಿಗೆ ಆಗಮಿಸಿದ್ದರು. ಜೊತೆಗೆ ಬಾಲಿವುಡ್ ನಟಿ ಕಾಜೋಲ್ ಕೂಡ ವೆಬ್​ ಸೀರೀಸ್​​ನ ಶೂಟಿಂಗ್‌ನಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದರು.

ಇದನ್ನೂ ಓದಿ : ಮೀಸೆ - ಗಡ್ಡದ ಲುಕ್​​ನಲ್ಲಿ ಸಾರಾ ಅಲಿಖಾನ್​​..ಅಸಮಾಧಾನ ಹೊರಹಾಕಿದ ಫ್ಯಾನ್ಸ್​ ​!

ಸಾರಾ ಅಲಿ ಖಾನ್ ಕುಲುವಿನ ಕಣಿವೆಯ ಮೇಲ್ಭಾಗದಲ್ಲಿರುವ ಬಿಜಿಲಿ ದೇವಾಲಯದ ಜೊತೆಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಬಿಜಿಲಿ ಮಹಾದೇವ ದೇವಾಲಯದ ವಿಶೇಷತೆ ಎಂದರೆ, ಬಿಜಿಲಿ ದೇವಾಲಯದಲ್ಲಿರುವ ಶಿವಲಿಂಗದ ಮೇಲೆ ಆಗಾಗ ಮಿಂಚು ಬೀಳುತ್ತದೆ. ಈ ಮಿಂಚಿನಿಂದಾಗಿ ಶಿವಲಿಂಗಕ್ಕೆ ಹಾನಿಯಾಗುತ್ತದೆ. ಹಾನಿಯಾದ ಶಿವಲಿಂಗವನ್ನು ಇಲ್ಲಿನ ಪುರೋಹಿತರು ಬೆಣ್ಣೆಯ ಸಹಾಯದಿಂದ ಪುನಃ ಜೋಡಿಸುತ್ತಾರೆ. ಭಾರತ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಜನ ಪ್ರವಾಸಿಗರು ಬಿಜಿಲಿ ಮಹಾದೇವನ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಜೊತೆಗೆ ಸಿನಿಮಾ ಶೂಟಿಂಗ್​ಗೆ ಉತ್ತಮವಾದ ಸ್ಥಳವಾಗಿದ್ದು, ಇಲ್ಲಿ ಹಲವು ಚಿತ್ರಗಳು, ಹಾಡುಗಳ ಶೂಟಿಂಗ್​ ನಡೆದಿದೆ.

ಇನ್ನು ಸೈಫ್ ಅಲಿಖಾನ್ ಮಗಳು ಎಂಬ ಕಾರಣಕ್ಕೆ ನಟಿ ಸಾರಾ ಅಲಿ ಖಾನ್ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಇವರು ಬಾಲಿವುಡ್​ನಲ್ಲಿ ಹಲವು ಸಿನಿಮಾ ಮತ್ತು ನಾಯಕರ ಜೊತೆ ಅಭಿನಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು, ಹೋಮಿ ಅದಜಾನಿಯಾ ಅವರ 'ಮರ್ಡರ್ ಮುಬಾರಕ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್​, ಡಿಂಪಲ್​ ಕಪಾಡಿಯಾ, ಪಂಕಜ್​ ತ್ರಿಪಾಠಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್​ ಮುಗಿದಿದೆ. ಇದರ ಜೊತೆಗೆ ಕಣ್ಣನ್​ ನಿರ್ದೇಶನದ 'ಎ ವತನ್​ ಮೇರೆ ವತನ್'​ ಚಿತ್ರದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ : ಬಿಕಿನಿ ತೊಟ್ಟ ಹಾಟ್​ ಫೋಟೋ ಹಂಚಿಕೊಂಡ ಬಾಲಿವುಡ್​ ನಟಿ ಸಾರಾ ಅಲಿಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.