ETV Bharat / entertainment

ಶಿವಣ್ಣನ 'ಘೋಸ್ಟ್'​ ಅಡ್ಡಕ್ಕೆ ಬಾಲಿವುಡ್​ ನಟ ಅನುಪಮ್​ ಖೇರ್​ ಎಂಟ್ರಿ - ಈಟಿವಿ ಭಾರತ ಕನ್ನಡ

ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಅಭಿನಯದ ಘೋಸ್ಟ್​ ಸಿನಿಮಾದಲ್ಲಿ ಅನುಪಮ್​ ​ಖೇರ್​ ನಟಿಸಲಿದ್ದಾರೆ.

ghost
ಘೋಸ್ಟ್
author img

By

Published : Mar 28, 2023, 2:20 PM IST

ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ವೇದ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಸದ್ಯ ಬ್ಯಾಕ್​ ಟು ಬ್ಯಾಕ್​ ಚಿತ್ರಗಳ ಶೂಟಿಂಗ್​ನಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಸಾಲಿನಲ್ಲಿ 'ಘೋಸ್ಟ್' ಕೂಡ ಒಂದು. ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಿನಿಮಾ ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ಘೋಸ್ಟ್​ ಫಸ್ಟ್​ ಲುಕ್​ನಲ್ಲೇ ಹ್ಯಾಟ್ರಿಕ್​ ಹೀರೋ ಎಕೆ 47 ಗನ್​ ಹಿಡಿದು ಕಾಣಿಸಿಕೊಂಡಿದ್ದರು. ಅದಾಗಿ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿತ್ತು. ಇದೀಗ ಘೋಸ್ಟ್​ ಅಡ್ಡಕ್ಕೆ ಬಾಲಿವುಡ್​ ನಟ ಎಂಟ್ರಿಕೊಟ್ಟಿದ್ದು, ಸಿನಿಮಾ ಬಗೆಗಿನ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಶ್ರೀನಿವಾಸ್​ ಕಲ್ಯಾಣ, ಬೀರ್​ ಬಲ್​ ಚಿತ್ರಗಳಿಂದ ಭರವಸೆ ನಿರ್ದೇಶಕ ಎಂದೇ ಕರೆಸಿಕೊಂಡಿರುವ ಶ್ರೀನಿವಾಸ್​ (ಶ್ರೀನಿ) ಮೊದಲ ಬಾರಿಗೆ ಸೆಂಚುರಿ ಸ್ಟಾರ್​ಗೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ನಟರು ಸ್ಯಾಂಡಲ್​ವುಡ್​ನಲ್ಲಿ ಅಬ್ಬರಿಸುತ್ತಿದ್ದು, ಇದೀಗ ಶ್ರೀನಿ ನಿರ್ದೇಶನದ ಈ ಸಿನಿಮಾದಲ್ಲಿ ಹಿಂದಿ ನಟ ಅಭಿನಯಿಸಲಿದ್ದಾರೆ. ಹಿರಿಯ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು, ಹೊಸದಾಗಿ ಬಾಲಿವುಡ್​ ನಟ ಅನುಪಮ್​ ಖೇರ್​ ಕೂಡ ಸೇರ್ಪಡೆಯಾಗಿದ್ದಾರೆ. ಘೋಸ್ಟ್ ಚಿತ್ರೀಕರಣಕ್ಕಾಗಿಯೇ ಬೆಂಗಳೂರಿಗೆ ಆಗಮಿಸಿರುವ ನಟ ಖೇರ್​ ತಮ್ಮ ಪಾತ್ರದ ಕುರಿತು ನಿರ್ದೇಶಕ ಶ್ರೀನಿ ಜೊತೆ ಚರ್ಚಿಸಿದ್ದಾರೆ.

ಇದನ್ನೂ ಓದಿ: ಲಿಖಿತ್​ ಶೆಟ್ಟಿ ನಿರ್ಮಿಸಿ ನಟಿಸುತ್ತಿರುವ 'ಫುಲ್​ ಮೀಲ್ಸ್​' ಪೋಸ್ಟರ್ ಬಿಡುಗಡೆ

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಮೂಲಕ ಫೇಮಸ್​ ಆಗಿರುವ ನಟ ಅನುಪಮ್​ ಖೇರ್​ ಘೋಸ್ಟ್​ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಈ ಚಿತ್ರದಲ್ಲಿ ಒಂದೊಳ್ಳೆ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಜೊತೆ ಖೇರ್​ ನಟಿಸಲಿದ್ದಾರೆ. ಇನ್ನು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಶ್ರೀನಿ, ಘೋಸ್ಟ್​ ಸೆಟ್​ನಲ್ಲಿ ಅನುಪಮ್​ ಖೇರ್​ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, "ನಿಮಗೆ ನಮ್ಮ ಊರಿಗೆ, ನಮ್ಮ ಸಿನೆಮಾಗೆ ಸ್ವಾಗತ" ಎಂದು ಕ್ಯಾಪ್ಶನ್​ ಹಾಕಿಕೊಂಡಿದ್ದಾರೆ.​

ಇದನ್ನೂ ಓದಿ: ಮೇಕಪ್ ಬ್ರಷ್‌ ಹಿಡಿದು ಮಗಳೊಂದಿಗೆ ಆಟವಾಡಿದ ಗ್ಲೋಬಲ್ ಐಕಾನ್​ ಪ್ರಿಯಾಂಕಾ ಚೋಪ್ರಾ

ಚಿತ್ರತಂಡ ಹೀಗಿದೆ.. ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸ್​ ಅವರೇ ಮೂವಿಗೆ ಕಥೆ, ಚಿತ್ರಕಥೆ ಬರೆದರೆ, ಸಂಭಾಷಣೆಯನ್ನು ಮಾಸ್ತಿ ಹಾಗೂ ಪ್ರಸನ್ನ ಅವರಿಂದ ಸಿದ್ಧವಾಗಿದೆ. ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಘೋಸ್ಟ್‌ ಚಿತ್ರಕ್ಕಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಎನ್ ಈ ಸಿನಿಮಾವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ‌ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಮತ್ತೊಬ್ಬ ಪ್ರತಿಭಾನ್ವಿತ ಖಳನಟ; ನೆಗೆಟಿವ್​ ಪಾತ್ರದಲ್ಲಿ ಸುಬ್ಬರಾವ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.