ETV Bharat / entertainment

'ಖಾಕಿ'ಗೆ ಸ್ಫೂರ್ತಿಯಾಗಿದ್ದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅಮಾನತು!

ಖಾಕಿಗೆ ಸ್ಫೂರ್ತಿ ನೀಡಿದ್ದ ಬಿಹಾರದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಸರ್ಕಾರಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರೂ ಆರ್ಥಿಕ ಲಾಭಕ್ಕಾಗಿ ಅನ್ಯ ಮಾರ್ಗ ಅನುಸರಿಸಿದ್ದಾರೆ ಎಂಬ ಆರೋಪ ಇವರ ಮೇಲಿದೆ. ಹಾಗಾಗಿ ವಿವಿಧ ಪ್ರಕರಣಗಳಡಿ ಲೋಧಾ ಅವರ ವಿರುದ್ಧ ದೂರು ದಾಖಲಾಗಿದೆ.

Bihar IPS officer Amit Lodha, who inspired 'Khakee', charged with corruption, suspendedBihar IPS officer Amit Lodha, who inspired 'Khakee', charged with corruption, suspended
Bihar IPS officer Amit Lodha, who inspired 'Khakee', charged with corruption, suspended
author img

By

Published : Dec 9, 2022, 11:27 AM IST

ಬಿಹಾರ: ಖಾಕಿ: ದಿ ಬಿಹಾರ್ ಚಾಪ್ಟರ್ (ಬಯೋಪಿಕ್​) ಎಂಬ ವೆಬ್ ಸಿರೀಸ್​ನ ಅಸಲಿ ಹೀರೋ ಮತ್ತು ಬಿಹಾರದ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಸುದ್ದಿ ಕೇಳಿ ಬರುತ್ತಿದ್ದಂತೆ ಬಿಹಾರದ ಪೊಲೀಸ್​ ಇಲಾಖೆ ಅವರನ್ನು ಹುದ್ದೆಯಿಂದ ಅಮಾನತು ಮಾಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ) ಕ್ರಿಮಿನಲ್ ಪಿತೂರಿ ಮತ್ತು 168 (ಸಾರ್ವಜನಿಕ ಸೇವಕ ಕಾನೂನುಬಾಹಿರವಾಗಿ ವ್ಯಾಪಾರದಲ್ಲಿ ತೊಡಗಿರುವುದು) ಅಡಿ ಲೋಧಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಖಾಕಿ ವೆಬ್ ಸರಣಿಗೆ ಲೋಧಾ ಅವರು ಕಪ್ಪುಹಣ ಬಳಸಿದ್ದಾರೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಲೋಧಾ ಅವರು ಪುಸ್ತಕ ಬರೆಯಲು ಮತ್ತು ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ಅಧಿಕಾರ ಹೊಂದಿಲ್ಲ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಸರ್ಕಾರಿ ನೌಕರನಾಗಿದ್ದರೂ, ಮಗಧ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ವೇಳೆಯಲ್ಲಿ ಅವರು ನೆಟ್‌ಫ್ಲಿಕ್ಸ್ ಮತ್ತು ಖಾಕಿ ವೆಬ್ ಸರಣಿಗಳನ್ನು ನಿರ್ಮಿಸುವ ಕಂಪನಿಯಾದ ಫ್ರೈಡೇ ಸ್ಟೋರಿ ಟೆಲ್ಲರ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಅಕ್ರಮವಾಗಿ ಖಾಸಗಿ/ವಾಣಿಜ್ಯ ಚಟುವಟಿಕೆಗಳಿಗೆ ಪ್ರವೇಶಿಸಿದ್ದಾರೆ ಎಂಬುದನ್ನು ಸಹ ಎಫ್‌ಐಆರ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಲೋಧಾ ತಮ್ಮ ಸ್ಥಾನವನ್ನು ಹಣಕಾಸಿನ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಒಬ್ಬ ಐಪಿಎಸ್ ಅಧಿಕಾರಿಯಾಗಿ ಹುದ್ದೆಯಲ್ಲಿರುವಾಗಲೇ ಸಿನಿಮಾ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದು ಕಾನೂನು ಬಾಹಿರ. ಆರ್ಥಿಕ ಅಪರಾಧಗಳಲ್ಲಿ ಭಾಗಿ ಆಗುವ ಮೂಲಕ ಕಾನೂನಿನ ಮಾನದಂಡಗಳನ್ನು ಅವರು ಗಾಳಿಗೆ ತೂರಿದ್ದಾರೆ. ಮೇಲ್ನೋಟಕ್ಕೆ ವೈಯಕ್ತಿಕ ಲಾಭದ ಉದ್ದೇಶ ಇಟ್ಟುಕೊಂಡು ಹೀಗೆ ಮಾಡಿರಬಹುದು ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ವಿವಿಧ ಪ್ರಕರಣಗಳಡಿ ಅವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್ ಉಪ ಅಧೀಕ್ಷಕರು ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾದ ಖಾಕಿ: ದಿ ಬಿಹಾರ್ ಚಾಪ್ಟರ್ ವೆಬ್ ಸರಣಿಯೂ ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅವರ ಜೀವನಚರಿತ್ರೆಯಾಗಿದೆ. ರೋಚಕ ಕಥೆ ಬಿಚ್ಚಿಡುವ ವೆಬ್ ಸಿರೀಸ್ ಇದಾಗಿದ್ದು, ಸಿನಿ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅಲ್ಲದೇ ವೀಕ್ಷಕರು ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ವ್ಯಕ್ತವಾಗಿದೆ. ಇದರಲ್ಲಿ ಅವಿನಾಶ್ ತಿವಾರಿ, ನಿಕಿತಾ ದತ್ತಾ, ಐಶ್ವರ್ಯ ಸುಶ್ಮಿತಾ, ಕರಣ್ ಟಕ್ಕರ್, ರವಿ ಕಿಶನ್ ಮತ್ತು ಅನೂಪ್ ಸೋನಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ; ತನ್ನ ಮೇಲೆ ಹೇರಿದ ನಿಷೇಧದ ಬಗ್ಗೆ ರಶ್ಮಿಕಾ ಕ್ಲಾರಿಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.