ETV Bharat / entertainment

ಬಿಗ್​​ ಬಾಸ್​ ಸೀಸನ್​ 10: ತುಕಾಲಿ ಸಂತೋಷ್ ಕಾಮಿಡಿ - ದೊಡ್ಮನೆ ಸ್ಪರ್ಧಿಗಳ ಮೊಗದಲ್ಲಿ ನಗುವೇ ನಗು!

Big Boss season 10: ಕನ್ನಡ ಬಿಗ್​ ಬಾಸ್​ ಸೀಸನ್​ 10 ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ.

Bigg Boss season 10
ಬಿಗ್​​ ಬಾಸ್​ ಸೀಸನ್​ 10
author img

By ETV Bharat Karnataka Team

Published : Oct 18, 2023, 4:37 PM IST

ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​​ ಸೀಸನ್​ 10 ಈಗಾಗಲೇ ವಾರ ಪೂರೈಸಿದ್ದು, ಎರಡನೇ ವಾರ ನಡೆಯುತ್ತಿದೆ. ಮೊದಲ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ (ವಾರದ ಕಥೆ ಕಿಚ್ಚನ ಜೊತೆ) ತುಕಾಲಿ ಸಂತೋಷ್ ಮಾಡುತ್ತಿರುವ ಕಾಮಿಡಿ ಬೇರೆಯವರಿಗೆ ಸಾಕಷ್ಟು ನೋವು ಕೊಡುತ್ತಿದೆ ಎಂಬ ಬಗ್ಗೆ ಚರ್ಚೆಯಾಗಿತ್ತು.

ಕಿಚ್ಚ ಸುದೀಪ್ ಕೂಡ ಅವರಿಗೆ ಆರೋಗ್ಯಕರ ಹಾಸ್ಯ ಮಾಡುವಂತೆ ಕಿವಿಮಾತು ಹೇಳಿದ್ದರು. ಎರಡನೇ ವಾರ ಆರಂಭವಾದಾಗ ತುಕಾಲಿ ಸಂತೋಷ್​​ ಅವರು ಕೊಂಚ ಸೀರಿಯಸ್ ಆದಂತೆ ಕಾಣಿಸಿದ್ದರು. ಅದಕ್ಕೆ ಪೂರಕವಾಗಿ ನಾಮಿನೇಷನ್‌ ಟಾಸ್ಕ್‌ನಲ್ಲಿ ಇಶಾನಿ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಾಗಂತ, ತುಕಾಲಿ ಸಂತೋಷ್​​ ಅವರ ಕಾಮಿಡಿ ಮುಗಿದೋಯ್ತಾ?. ಖಂಡಿತ ಇಲ್ಲ.

ಡ್ರೋನ್​​ ಪ್ರತಾಪ್‌, ತುಕಾಲಿ ಸಂತೋಷ್, ಸ್ನೇಹಿತ್, ವರ್ತೂರು ಸಂತೋಷ್ ಹಾಗೂ ಬುಲೆಟ್ ರಕ್ಷಕ್ ಹರಟೆಯಲ್ಲಿ ಮುಳುಗಿದ್ದರು. ಮಾತಿನ ನಡುವೆ ತುಕಾಲಿ ಸಂತೋಷ್ ಅವರು ವರ್ತೂರ್ ಸಂತೋಷ್‌ಗೆ, 'ಒಂದೇ ಬೆಡ್‌ನಲ್ಲಿ ಮಲೀಕಂಡು ಜಾತಕ ಹೇಳೋ ಲೇವಲ್ಲಿಗೆ ತಂದ್ಬಿಟ್ಯಲ್ಲಣ್ಣಾ ನೀನು' ಎಂದು ತಮಾಷೆ ಮಾಡಿದ್ದಾರೆ. ಇದೇ ಮಾತನ್ನು ಹಿಡಿದುಕೊಂಡು ಸ್ನೇಹಿತ್, 'ನಮ್ಮೆಲ್ಲರ ಜಾತಕ ಹೇಳಿ' ಎಂದಿದ್ದಾರೆ. ಹೀಗೆ ಮಾತು ಮುಂದುವರಿದಿದೆ.

ಸಂತೋಷ್: ನಾನು ಅಂಡರ್ 16ನಲ್ಲಿ ಒಳ್ಳೆಯ ಆಸ್ಟ್ರೋಲಜರ್…

ಸ್ನೆಹಿತ್: ಅಂಡರ್​ 16 ಆಸ್ಟ್ರೋಲಜರ್ ಕೇಳಿದೀರಾ?

ಸಂತೋಷ್: ನೀವು ನಂಬಲ್ಲ…

ಸ್ನೇಹಿತ್: ಬಿಗ್‌ ಬಾಸ್‌ ನೀವೂ ನಂಬಲ್ಲ ಅಲ್ವಾ?

ಸಂತೋಷ್: ಪ್ರತಾಪ್ ನೀವು ನಂಬಲ್ಲ. ನಂಗೆ ಸಂಖ್ಯಾಶಾಸ್ತ್ರ ಎಲ್ಲಾ ಬರತ್ತೆ. ಅಂಡರ್​​ 16ನಲ್ಲಿ ಟಿವಿ ನೋಡ್ತಿದ್ದಾಗ ಅನಿಸಿಬಿಡ್ತು - ಕ್ರಿಕೆಟ್ ಆಡ್ಬೇಕಾ? ಅಂತ. ಆಮೇಲೆ ತೆಂಗಿನ ಮರದ ಹೆಡೆಯನ್ನು ನೀಟ್‌ ಆಗಿ ಕಟ್ ಮಾಡಿ ಬ್ಯಾಟ್ ಮಾಡ್ಕಂಡೆ.… ಬಾಲ್ ಬೇಕಲ್ವಾ. ಆದ್ರೆ ಬಾಲ್ ತಗೋಳಕ್ಕೆ ದುಡ್ಡಿಲ್ಲ ನನ್ನತ್ರ. ಹಾಗಾಗಿ ಒಂದು ನಿಂಬೆಹಣ್ಣು ತಗೊಂಡೆ.…

ರಕ್ಷಕ್: ಅದಾ, ಅದು ಹಾಕಿ ಬಾಲ್ ಇದ್ದಂಗಿರ್ತದೆ…

ಸಂತೋಷ್: ಅದ್ರಲ್ಲೇ ಪ್ರ್ಯಾಕ್ಟೀಸ್ ಮಾಡ್ತಿದ್ದೆ…

ಹೀಗೆ ಮಾತುಕತೆ ಮುಂದುವರಿದಿದೆ. ತುಕಾಲಿ ಸಂತೋಷ್​​ ಅವರ ಮಾತುಗಳನ್ನು ಕೇಳಿ ಉಳಿದವರು ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ: ಹಾರರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ... 60 ಅಡಿ ಎತ್ತರದ ಕಟೌಟ್ ನಿಲ್ಲಿಸಿ​ 'ಕ್ಯಾಪ್ಚರ್' ಪೋಸ್ಟರ್ ಅನಾವರಣ

ಬಿಗ್‌ ಬಾಸ್ ಕನ್ನಡ 24 ಗಂಟೆಯೂ ನೇರಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿ ದಿನದ ಎಪಿಸೋಡ್‌ಗಳನ್ನು ಕಲರ್ಸ್​​ ಕನ್ನಡ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: 'ಘೋಸ್ಟ್​​ನಲ್ಲಿ ಕೆಜಿಎಫ್ ನಿರೀಕ್ಷಿಸಬೇಡಿ': ಸಿನಿಮಾ, ರಜನಿಕಾಂತ್, ಮೋಹನ್​ ಲಾಲ್​ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.