ಹೈದರಾಬಾದ್: ನಟ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಟಿವಿ ಶೋ ಬಿಗ್ಬಾಸ್ 17ನೇ ಸೀಸನ್ ಮತ್ತಷ್ಟು ಡ್ರಾಮಾ ಮತ್ತು ಮನರಂಜನೆ ಜೊತೆಗೆ ಕಿರುತೆರೆ ಪ್ರೇಕ್ಷಕರ ಮನರಂಜಿಸಲು ಸಿದ್ದವಾಗಿದೆ. ಕಾರ್ಯಕ್ರಮದ ಹೊಸ ಪ್ರೊಮೋಷನಲ್ ವಿಡಿಯೋದಲ್ಲಿ ಹೊಸ ನಾಮಿನೇಷನ್ ಮನೆಯಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಅಂಕಿತಾ ಲೋಖಂಡೆ ಮತ್ತು ನೀಲ್ ಭಟ್ ನಡುವಿನ ವಾಗ್ವಾದವೂ ಮನೆಯೊಳಗೆ ಜೋರಾಗಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಬಿಗ್ ಬಾಸ್ ಕೆಲವು ಅಭ್ಯರ್ಥಿಗಳ ಪರ ವಹಿಸಿದೆ ಎಂದು ಅನುರಾಗ್ ದೊಬಲ್ ಕೂಡ ದೂರಿರುವುದು ಕಂಡು ಬಂದಿದೆ.
-
Promo BiggBoss17 #AnkitaLokhande Vs #VickyJain, Nominations ke baad hua donu me jhagdha pic.twitter.com/GLJsjgk8sF
— The Khabri (@TheKhabriTweets) November 26, 2023 " class="align-text-top noRightClick twitterSection" data="
">Promo BiggBoss17 #AnkitaLokhande Vs #VickyJain, Nominations ke baad hua donu me jhagdha pic.twitter.com/GLJsjgk8sF
— The Khabri (@TheKhabriTweets) November 26, 2023Promo BiggBoss17 #AnkitaLokhande Vs #VickyJain, Nominations ke baad hua donu me jhagdha pic.twitter.com/GLJsjgk8sF
— The Khabri (@TheKhabriTweets) November 26, 2023
ಹೊಸ ಪ್ರೋಮೋಷನಲ್ ಫೂಟೇಜ್ನಲ್ಲಿ, ಅಂಕಿತಾ ನೀಲ್ ಹೇಡಿ ಎಂದು ಕರೆದಿದ್ದಾರೆ. ಅಲ್ಲದೇ ಹೆದರುಪುಕಲ, ಎಷ್ಟು ಹೆದರುಪುಕಲ ನೀನು ಎಂದು ಜರಿದಿದ್ದಾರೆ. ಈ ಶಬ್ದ ಇಬ್ಬರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ಇದೇ ವೇಳೆ ಇದನ್ನು ಪ್ರಶ್ನಿಸಲು ನೈಲ್ ಬಂದಾಗ ನನ್ನಿಂದ ಸ್ವಲ್ಪ ದೂರದಲ್ಲಿರುವ ನಿನ್ನ ಬಾಯಿ ವಾಸನೆ ಬರುತ್ತಿದೆ ಎಂದಿದ್ದಾರೆ.
ಇದಾದ ಬಳಿಕ ಅಂಕಿತಾ ನೀಲ್ಗೆ ನನ್ನ ಹತ್ತಿರ ಬರದಂತೆ ಎಚ್ಚರಿಸಿದ್ದಾರೆ. ಅಲ್ಲದೇ ಆತನ ಜೊತೆಗೆ ಆತ್ಮೀಯವಾಗುವ ಯಾವುದೇ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ. ನೀನು ಇಂದು ಸಂಪೂರ್ಣವಾಗಿ ಚುಚ್ಚಿಸಿಕೊಳ್ಳುತ್ತಿಯಾ ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ನೀಲ್ ಈ ಮೊದಲು ಮಾಡಿದಂತೆ ಸೂಜಿಯಿಂದ ಚುಚ್ಚು, ಚಾಕುವಿನಿಂದ ತಿವಿ, ಬ್ಲೇಡ್ನಿಂದ ಕತ್ತರಿಸು ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಂಕಿತಾ, ನಿನಗೆ ಏನು ಬೇಕು ಯೋಚಿಸು ಎಂದಿದ್ದಾರೆ. ಅಂಕಿತಾ ಮತ್ತು ನೈಲ್ ನಡುವಿನ ಈ ಮಾತಿನ ಚಕಮಕಿ ಮನೆಯಲ್ಲಿ ಉಳಿದವರ ಬಾಯಿ ಮುಚ್ಚಿಸಿದೆ. ಬಳಿಕ ನೈಲ್ ಪವಿತ್ರ ರಿಶ್ತಾ ನಟನನ್ನು ಅನುಕರಿಸಿದ್ದಾರೆ.
ಮತ್ತೊಂದು ಪ್ರೊಮೋದಲ್ಲಿ ಅಭ್ಯರ್ಥಿ ಅನುರಾಜ್ ದೊಬಲ್ ಕಾರ್ಯಕ್ರಮದ ವೇಳೆ ಅಭ್ಯರ್ಥಿಗಳಲ್ಲಿ ನಡೆಯುತ್ತಿರುವ ತಾರತಮ್ಯದ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಕೆಲವರಿಗೆ ಬಿಗ್ಬಾಸ್ ರಕ್ಷಣೆ ಮಾಡುತ್ತಿದ್ದು, ಅವರ ಪರವಾಗಿ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ. ಅನುರಾಗ್ ತಮ್ಮ ಫ್ಯಾನ್ಸ್ ಕ್ಲಬ್ ಮತ್ತು ಬೆಂಬಲಿಗರಿಂದ ಎದುರಾಗುತ್ತಿರುವ ಟೀಕೆಗಳ ಬಗ್ಗೆ ಕೂಡ ದೂರಿದ್ದಾರೆ. ವೀಕೆಂಡ್ ಕಾ ವಾರ್ನಲ್ಲಿ ಸಲ್ಮಾನ್ ಖಾನ್, ಅವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಗ್ಬಾಸ್, ಇಲ್ಲಿ ಒಬ್ಬರಿಗೆ ಒಂದು - ಒಬ್ಬರಿಗೆ ಒಂದು ಮಾಡುತ್ತಿದೆ. ಈ ಮೂಲಕ ಟ್ರೋಫಿಯನ್ನು ಅಂಕಿತಾ ಅಥವಾ ಇಶಾ ಮಲ್ವಿಯಾ ಕೈಗೆ ಇಡಲು ಹೊರಟಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: 7ನೇ ವಾರ ಮನೆಯಿಂದ ನೀತು ವನಜಾಕ್ಷಿ ಔಟ್, ಮೈಕಲ್ ಕ್ಯಾಪ್ಟನ್