ETV Bharat / entertainment

ಬಿಗ್​ಬಾಸ್​16: ರೋಮ್ಯಾಂಟಿಕ್​ ಸೀನ್​ ವೇಳೆ ಕಾರ್ತಿಕ್​ನನ್ನು ಅಣ್ಣಾ ಎಂದ ಅರ್ಚನಾ; ಗೊಳ್ಳೆಂದು ನಕ್ಕ ಮನೆ ಮಂದಿ - ಫಾರ್ಹಾ​ ಖಾನ್​ ಕಾರ್ತಿಕ್​ ಮತ್ತು ಅರ್ಚನಾ

ನಟ ಕಾರ್ತಿಕ್​ರನ್ನು ಅಣ್ಣ ಎಂದು ಕರೆದಿರುವ ನಟಿ ಅರ್ಚನಾ - ರೋಮ್ಯಾಂಟಿಕ್​ ಸೀನ್​ ವೇಳೆ ಅರ್ಚನಾ ಮಾತಿಗೆ ನಕ್ಕ ಮನೆ ಮಂದಿ- ಶೆಹಜಾದಾ ಸಿನಿಮಾ ಪ್ರಮೋಷನ್​ಗೆ ಮುಂದಾಗಿರುವ ನಟ ಕಾರ್ತಿಕ್​

ಬಿಗ್​ಬಾಸ್​16: ರೋಮ್ಯಾಂಟಿಕ್​ ಸೀನ್​ ವೇಳೆ ಕಾರ್ತಿಕ್​ನನ್ನು ಅಣ್ಣಾ ಎಂದ ಅರ್ಚನಾ; ಗೊಳ್ಳೆಂದು ನಕ್ಕ ಮನೆ ಮಂದಿ
bigg-boss-16-archana-called-kartik-brother-during-the-romantic-scene
author img

By

Published : Jan 28, 2023, 3:31 PM IST

ಹೈದರಾಬಾದ್​: ವಾರಾಂತ್ಯದಲ್ಲಿ ಬಿಗ್​ಬಾಸ್​ ಸೀಸನ್​ಗಳು ಹಲವು ವಿಶೇಷತೆಗಳನ್ನು ಹೊಂದಿರುತ್ತದೆ. ಈ ವಾರಾಂತ್ಯದ ಬಿಗ್​ಬಾಸ್​​ 16 ಸೀಸನ್​ನಲ್ಲಿ ನಿರ್ದೆಶಕಿ ಪರ್ಹಾ ಮತ್ತು ಬಾಲಿವುಡ್​ ನಟ ಕಾರ್ತಿಕ್​ ಆಗಮಿಸಿದ್ದಾರೆ. ಈ ವೇಳೆ, ಮನೆ ಮಂದಿ ಮನರಂಜಿಸಲು ಅರ್ಚನಾ ಗೌತಮ್​ ಮತ್ತು ಬಾಲಿವುಡ್​ ನಟ ಕಾರ್ತಿಕ್​ ರೋಮ್ಯಾಂಟಿಕ್​ ಹಾಡಿಗೆ ಸೀನ್​ ಮಾಡಲು ಮುಂದಾಗಿದ್ದಾರೆ. ಅರ್ಚನ - ಕಾರ್ತಿಕನ ಈ ರೋಮ್ಯಾಂಟಿಕ್​ ಸೀನ್​ ಮಧ್ಯಯೇ ಮನೆ ಮಂದಿ ಗೊಳ್ಳು ಎಂದು ನಕ್ಕಿದ್ದಾರೆ. ಕಾರಣ ಅರ್ಚನಾ ಈ ಹಾಡಿನ ಮಧ್ಯೆ ಕಾರ್ತಿಕ್​ನನ್ನು ಅಣ್ಣ ಎಂದು ಸಂಭೋದಿಸಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಫಾರ್ಹಾ​ ಖಾನ್​ ಕಾರ್ತಿಕ್​ ಮತ್ತು ಅರ್ಚನಾಗೆ ರೋಮ್ಯಾಂಟಿಕ್​ ದೃಶ್ಯದಲ್ಲಿ ನಟಿಸುವಂತೆ ಒಂದು ಸೀನ್​ ಅನ್ನು ನೀಡುತ್ತಾರೆ. ಅರ್ಚನಾ ಟೀ ಅನ್ನು ಮಾಡಿ ಕಾರ್ತಿಕ್​ಗೆ ನೀಡುತ್ತಾಳೆ. ಇದಾದ ಬಳಿಕ ಇಬ್ಬರು ರೋಮ್ಯಾಂಟಿಕ್​ ಆಗುತ್ತಾರೆ ಈ ರೀತಿಯ ದೃಶ್ಯವನ್ನು ನೀಡಲಾಗಿದೆ. ಈ ದೃಶ್ಯದಲ್ಲಿ ನಟಿಸಲು ಮುಂದಾದ ಅರ್ಚನ ಟೀ ಮಾಡುವಂತೆ ನಟನೆಗೆ ಮುಂದಾಗುತ್ತಾರೆ. ಈ ವೇಳೆ, ಆಕೆಯ ಸೊಂಟಬಳಸಿ ಕಾರ್ತಿಕ ಕೈ ಹಾಕುತ್ತಾನೆ. ಇನ್ನೇನು ಈ ಸೀನ್​ ರೋಮ್ಯಾಂಟಿಕ್​ ಆಗಬೇಕು ಎನ್ನುವಾಗ ಅರ್ಚನಾ, ಕಾರ್ತಿಕ್​ನನ್ನು ಅಣ್ಣ ಎಂದು ಕರೆದಿರುವುದು ಎಲ್ಲರ ನಗುವಿಗೆ ಕಾರಣವಾಗಿದೆ.

ಪ್ರೋಮೊದಲ್ಲಿ 'ನನ್ನ ಕೈ ಬಿಡು ಅಮ್ಮನ ಮುಂದೆ ಸಿಕ್ಕಿ ಹಾಕಿಕೊಳ್ಳುತ್ತೇವೆ' ಎಂದು ಡೈಲಾಗ್​ ಹೊಡೆಯುತ್ತಾರೆ. ಇದಾದ ಬಳಿಕ 'ಯಾವ ಗೇಟ್​ನಿಂದ ಪ್ರವೇಶ ಪಡೆದೆ ಅಣ್ಣಾ' ಎಂದು ಬಾಯ್ತಪ್ಪಿ ಹೇಳಿದ್ದಾರೆ. ಇದು ಬಿಗ್​ ಬಾಸ್​ ಮನೆಯವರ ನಗುವಿಗೆ ಕಾರಣವಾಗಿದೆ. ಅರ್ಚನಾ ಅಣ್ಣಾ ಎನ್ನುತ್ತಿದ್ದಂತೆ ಕಾರ್ತಿಕ್​ ಕೂಡ ಜೋರಾಗಿ ನಗಲು ಶುರು ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ನೋಡಿರುವ ಪ್ರೇಕ್ಷಕರು ಇನ್​​ಸ್ಟಾಗ್ರಾಂನಲ್ಲಿ ತರಹೇವಾರಿ ಕಮೆಂಟ್​ ಮಾಡಿ ಆನಂದಿಸಿದ್ದಾರೆ. ಒಬ್ಬರು 'ಪಾಪಾ ಕಾರ್ತಿಕ್'​ ಎಂದರೆ, ಮತ್ತೊಬ್ಬರು, 'ಭಾವಾನಾತ್ಮಕವಾಗಿ ಹಾನಿಗೊಂಡ ಕಾರ್ತಿಕ್'​ ಎಂದಿದ್ದಾರೆ

ತಮ್ಮ ಚಿತ್ರ ಶೆಹಜಾದಾ ಪ್ರೋಮೋಷನ್​​ಗೆ ನಟ ಕಾರ್ತಿಕ್​ ಬಿಗ್​​ ಬಾಸ್​ ಮನೆಗೆ ಆಗಮಿಸಿದ್ದಾರೆ. ಶೆಹಜಾದಾ ಇದೇ ಫೆಬ್ರವರಿ 10ರಂದು ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದ ಮೂಲಕ ಕಾರ್ತಿಕ್​ ನಿರ್ಮಾಪಕ ಕೂಡ ಆಗಿದ್ದಾರೆ. ತೆಲುಗು ಬ್ಲಾಕ್​ಬಸ್ಟರ್​ ಅಲಾ ವೈಕುಂಠಪುರಮುಲೊ ರಿಮೇಕ್​ ಈ ಸಿನಿಮಾ ಆಗಿದ್ದು. ರೋಹಿತ್​ ಧವನ್​, ಕೃತಿ ಸೋನಾನ್, ಪರೇಶ್​ ರಾವಲ್​, ಮನಿಷಾ ಕೋಯಿರಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಗ್​ ಬಾಸ್​ 16: ಹಿಂದಿಯಲ್ಲಿ ಬಹು ಬೇಡಿಕೆ ಹೊಂದಿರುವ ಬಿಗ್​ ಬಾಸ್​ 16ರ ಜನಪ್ರಿಯತೆ ಹಿನ್ನೆಲೆ ಕಾರ್ಯಕ್ರಮವನ್ನು ಮತ್ತೆ ಐದು ವಾರಗಳ ಕಾಲ ಮುಂದುವರಿಸಲಾಗಿದೆ. ಫೆಬ್ರವರಿಯಲ್ಲಿ ಈ ಸೀಸನ್​ ಅಂತ್ಯವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಟೀನಾ ದತ್ತಾ, ಶಾಲಿನ್ ಭಾನೋಟ್, ನಿಮೃತ್ ಕೌರ್ ಅಹ್ಲುವಾಲಿಯಾ, ಪ್ರಿಯಾಂಕಾ ಚೌಧರಿ, ಸುಂಬುಲ್ ತೌಕರ್ ಖಾನ್, ಅರ್ಚನಾ ಗೌತಮ್ ಮತ್ತು ಶಿವ್ ಠಾಕರೆ ನಡುವೆ ಪೈಪೋಟಿ ನಡೆದಿದೆ. ಈ ಕಾರ್ಯಕ್ರಮ ಖಾಸಗಿ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರದ ವಾರಾಂತ್ಯದ ಸಮಯದಲ್ಲಿ 9ಗಂಟೆಗೆ ಪ್ರಸಾರವಾಗುತ್ತದೆ.

ಇದನ್ನೂ ಓದಿ: ದುಬೈಗೆ ಪ್ರಯಾಣಿಸಲು ನಟಿ ಜಾಕ್ವೆಲಿನ್​ಗೆ ಅನುಮತಿ ನೀಡಿದ ದೆಹಲಿ ನ್ಯಾಯಾಲಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.