ETV Bharat / entertainment

70 ಕೋಟಿ ರೂಗಳ ಗಡಿ ದಾಟುತ್ತಿದೆ ಅಜಯ್​ ದೇವಗನ್​ನ 'ಭೋಲಾ' ಕಲೆಕ್ಷನ್​! - ಭೋಲಾ

ಮಾರ್ಚ್​ 30 ರಂದು ತೆರೆ ಮೇಲೆ ಕಂಡ ಕೈತಿ ಮೂವಿಯ ರಿಮೇಕ್​ ಭೋಲಾ ಮೂವಿಯು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

bholaa
ಭೋಲಾ ಸಿನಿಮಾ
author img

By

Published : Apr 10, 2023, 5:00 PM IST

ಹೈದರಾಬಾದ್: ಅಜಯ್ ದೇವಗನ್ ಅಭಿನಯದ ಭೋಲಾ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ, ಚಲನಚಿತ್ರವು ಈಗ ಅಪೇಕ್ಷಿತ 70-ಕೋಟಿ ಮಿತಿಯನ್ನು ಮೀರಿ ಧೂಳೆಬ್ಬಿಸಿದೆ. ಇನ್ನು ಚಿತ್ರತಂಡದ ನಿರೀಕ್ಷೆಯಂತೆ 80 ಕೋಟಿ ರೂಪಾಯಿಗಳ ಗಡಿ ದಾಟಲಿದೆ ಎಂದು ಹೇಳಲಾಗುತ್ತಿದ್ದು ಒಟ್ಟು ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ. ಭೋಲಾ ಮೂವಿಯೂ ಮಾರ್ಚ್ 30 ರಂದು ತೆರೆಗೆ ಬಂದಿದ್ದು ಮುಖ್ಯ ಭೂಮಿಕೆಯಲ್ಲಿ ಅಜಯ್ ದೇವಗನ್ ಮತ್ತು ನಟಿ ಟಬು ,ದಕ್ಷಿಣ ನಟಿ ಅಮಲಾ ಪೌಲ್ ಅಭಿನಯಿಸಿದ್ದಾರೆ. ಇದು ತಮಿಳು ಚಿತ್ರವಾದ ಕೈತಿಯ ರಿಮೇಕ್ ಆಗಿದೆ.

ಭೋಲಾ ಮಾರ್ಚ್ 30 ರಂದು ತೆರೆ ಕಂಡಿದ್ದು, ಮೊದಲ ದಿನವೇ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಈ ಚಲನಚಿತ್ರವು ಒಂದಾಗಿದ್ದು ಪ್ರೇಕ್ಷಕರಿಗೆ ಉತ್ತಮ ಮನೋರಂಜನೆ ನೀಡಿದೆ. ಆರಂಭಿಕ ವಾರಾಂತ್ಯದಲ್ಲಿ 44 ಕೋಟಿ ರೂ.ವನ್ನು ಬಾಚಿಕೊಂಡಿದ್ದ ಭೋಲಾ ತನ್ನ ಎರಡನೇ ವಾರಾಂತ್ಯದಲ್ಲಿ ಥಿಯೇಟರ್‌ಗಳಲ್ಲಿ 70 ಕೋಟಿ ರೂಪಾಯಿಗಳನ್ನು ಗಳಿಸಿ 80 ರ ಗಡಿಯತ್ತ ಸಾಗುತ್ತಿದೆ. ನಿನ್ನೆಗೆ ಚಿತ್ರ ರಿಲೀಸ್​ ಆಗಿ 11ನೇ ದಿನವಾಗಿದ್ದು, ನಿನ್ನೆ ಒಂದೇ ದಿನ ಮೂವೀ 2.25 ಕೋಟಿ ಗಳಿಸಿದೆ.

ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿರುವ ಟಬು ಮತ್ತೊಮ್ಮೆ ಅಜಯ್ ಜೊತೆ ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದಾರೆ. ಚಿತ್ರವನ್ನು ಸ್ವತಃ ಅಜಯ್ ​ದೇವಗನ್​ ನಿರ್ದೆಶಿಸಿದ್ದು, ದೀಪಕ್ ದೊಬ್ರಿಯಾಲ್, ಸಂಜಯ್ ಮಿಶ್ರಾ, ಅಮಲಾ ಪೌಲ್ ಮತ್ತು ವಿನೀತ್ ಕುಮಾರ್ ಕೂಡ ಅಭಿನಯಿಸಿದ್ದಾರೆ. 2008 ರಲ್ಲಿ 'ಯು, ಮಿ ಔರ್ ಹಮ್', 2016 ರಲ್ಲಿ 'ಶಿವಾಯ್' 2022 ರಲ್ಲಿ 'ರಣ್ವಾವ್ 34' ಮತ್ತು 'ಭೋಲಾ' ಅಜಯ್ ನಿರ್ದೇಶನದ ನಾಲ್ಕನೇ ಚಿತ್ರವಾಗಿದೆ. ಸಿನಿಮಾವನ್ನು 200 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಭೋಲಾ ಸಿನಿಮಾವು ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆಯನ್ನು ಹೇಳುತ್ತದೆ.

ಈ ಚಿತ್ರ ಲೋಕೇಶ್ ಕನಗರಾಜ್ ಅವರ ಕೈತಿ ಚಿತ್ರದ ರಿಮೇಕ್ ಆಗಿದೆ. ಈಗಾಗಲೇ ತಮಿಳಿನಲ್ಲಿ ವೀಕ್ಷಿಸಿರುವ ಕಾರಣ ನಿರೀಕ್ಷೆ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೇ ಈಗಾಗಲೇ ಐಪಿಲ್​ 2023 ಪ್ರಾರಂಭವಾಗಿದ್ದು, ಥಿಯೇಟರ್​ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಇನ್ನು ಕಳೆದ ವರ್ಷ ನವೆಂಬರ್​ 18 ರಂದು ಬಿಡುಗಡೆಯಾಗಿದ್ದ ದೇವಗನ್​ ಅಭಿನಯದ ದೃಶ್ಯಂ 2 ಸಿನಿಮಾ ಭಾರೀ ಹಿಟ್​ ಆಗಿತ್ತು.

7 ದಿನಕ್ಕೆ 100 ಕೋಟಿ ಕ್ಲಬ್​ ಸೇರಿತ್ತು. ಮಲಯಾಳಂ ಭಾಷೆಯಲ್ಲಿ ತಯಾರಾಗಿದ್ದ 'ದೃಶ್ಯಂ' ಮತ್ತು 'ದೃಶ್ಯಂ 2' ನಲ್ಲಿ ಸೌತ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ತೆರೆ ಮೇಲೆ ಕಂಡಿದ್ದರು. ಅದನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಲಾಗಿತ್ತು. ಈ ಸಿನಿಮಾ ಅಜಯ್​ ದೇವಗನ್​ ಅವರಿಗೆ ಬಹು ದೊಡ್ಡ ಸಕ್ಸಸ್​ ಅನ್ನು ತಂದು ಕೊಟ್ಟಿತು.

ಇದನ್ನೂ ಓದಿ: ಒಂದಾನೊಂದು ಕಾಲದಲ್ಲಿ ಸ್ಟಾರ್​ ಆಗಿದ್ದೆ, ಆದರೆ...; ಬಾಬಿ ಡಿಯೋಲ್​ ಮನದಾಳದ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.